30 ವರ್ಷಗಳಾದ್ರೂ ಡಿಂಪಲ್ ಕ್ವೀನ್ ನಟಿ ರಚಿತಾ ರಾಮ್ ಮದುವೆಯಾಗದಿರಲು ಕಾರಣ ಏನು ಗೊತ್ತಾ? ಅಷ್ಟಕ್ಕೂ ಮದುವೆ ಮುಂದೂಡಿದ್ದೇಕೆ
ನಟಿ ರಚಿತಾ ರಾಮ್ ಯಾರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಲೆಕ್ಕಾಚಾರ ಹಾಕುತ್ತಲೇ ಇರುತ್ತಾರೆ.
ಸ್ನೇಹಿತರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬುಲ್ ಬುಲ್ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಂತಹ ನಟಿ ರಚಿತಾ ರಾಮ್ (Actress Rachita Ram) ಯಾವುದೇ ಸಂದರ್ಶನದಲ್ಲಿ ಕಾಣಿಸಿಕೊಂಡರು ಅಭಿಮಾನಿಗಳು (Fans) ಹಾಗೂ ಸಂದರ್ಶಕರು ಮದುವೆ ಯಾವಾಗ ಎಂಬ ಪ್ರಶ್ನೆಯನ್ನು ಕೇಳದೆ ಬಿಡುವುದೇ ಇಲ್ಲ.
ಇಷ್ಟರ ಮಟ್ಟಿಗೆ ನಟಿ ರಚಿತಾ ರಾಮ್ ಯಾರನ್ನು ಮದುವೆಯಾಗಲಿದ್ದಾರೆ (Actress Rachita Ram Marriage) ಎಂಬ ಸುದ್ದಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಲೆಕ್ಕಾಚಾರ ಹಾಕುತ್ತಲೇ ಇರುತ್ತಾರೆ.
ಹೀಗಿರುವಾಗ ಇದಕ್ಕೆ ಖಾಸಗಿ ಸಂದರ್ಶನ ಒಂದರಲ್ಲಿ ಮಾತನಾಡುವಾಗ ಅವರು ತಾನು ಮದುವೆಯಾಗದೆ ಇರುವುದು ಆ ಒಂದು ಕಾರಣ ಎಂಬ ಎಕ್ಸ್ಕ್ಲೂಸಿವ್ ಹೇಳಿಕೆ ನೀಡಿದ್ದಾರೆ.
ಅಷ್ಟಕ್ಕೂ ನಟಿ ರಚಿತಾ ರಾಮ್ 30 ವರ್ಷಗಳಾದರೂ ಒಬ್ಬಂಟಿಯಾಗಿರುವುದು ಯಾಕೆ? ಇವರ ಮನಸ್ಸನ್ನು ಮೆಚ್ಚುವಂತಹ ವರ ಇನ್ನು ಸಿಗ್ಲಿಲ್ವಾ? ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ಸಂಕ್ಷಿಪ್ತವಾಗಿ ತಿಳಿಸ ಹೊರಟಿದ್ದು, ನಿಮಗೂ ಕೂಡ ಈ ಒಂದು ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ ಕನ್ನಡ ಸಿನಿಮಾ ರಂಗದ (Kannada Film Industry) ಸ್ಟಾರ್ ನಟರೇನಿಸಿಕೊಂಡಿರುವ ದರ್ಶನ್, ಸುದೀಪ್, ಪುನೀತ್ ರಾಜಕುಮಾರ್, ಶಿವರಾಜ್ ಕುಮಾರ್, ಉಪೇಂದ್ರ, ನಿಖಿಲ್ ಕುಮಾರಸ್ವಾಮಿ, ಧ್ರುವ ಸರ್ಜಾ, ಶ್ರೀಮುರಳಿ, ಧನಂಜಯ್, ಗೋಲ್ಡನ್ ಸ್ಟಾರ್ ಗಣೇಶ್ರಂತಹ ಎಲ್ಲಾ ದಿಗ್ಗಜ ನಟರೊಂದಿಗೆ ತೆರೆ ಹಂಚಿಕೊಂಡು ಬಹು ಬೇಡಿಕೆ ಇರುವಂತಹ ರಚಿತಾ ರಾಮ್ ಅವರಿಗೆ ದರ್ಶನ್ ಹಾಗೂ ಧ್ರುವ ಸರ್ಜಾ ಅವರೊಂದಿಗಿನ ಸಿನಿಮಾಗಳು (Kannada Movies) ಬಹು ದೊಡ್ಡ ಮಟ್ಟದ ಹೆಸರು ತಂದುಕೊಡ್ತು.
ಅದರಲ್ಲಿಯೂ ಬುಲ್ ಬುಲ್, ರನ್ನ, ಸಕ್ಕರೆ, ಬಹದ್ದೂರ್, ಅದ್ದೂರಿ ಸೀತಾರಾಮ ಕಲ್ಯಾಣ, ಐ ಲವ್ ಯು, ಏಕಲವ್ಯದಲ್ಲಿನ ಇವರ ಪಾತ್ರಗಳು ಇಂದಿಗೂ ಅಭಿಮಾನಿಗಳ ಹಾರ್ಟ್ ಫೇವರೆಟ್.
ಇನ್ನು ತೀರ್ಪುಗಾರ್ತಿಯಾಗಿ ಕಾಣಿಸಿಕೊಳ್ಳುವ ಮೂಲಕ ಕಿರುತೆರಿಗೆ ಕಂಬ್ಯಾಕ್ ಮಾಡಿರುವ ರಚ್ಚು ಕನ್ನಡಿಗರ ಮನೆಮಗಳಾಗಿ ಹೋಗಿದ್ದಾರೆ. ಸದ್ಯ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಬಿಜಿಯಾಗಿದ್ದಾರೆ.
ಇದರ ನಡುವೆಯೂ ನಟಿ ರಚಿತಾ ರಾಮ್ (Actress Rachita Ram) ಎಲ್ಲೆ ಹೋದರು ಮದುವೆ ಯಾವಾಗ ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಅದರಂತೆ ಸಂದರ್ಶನ ಒಂದರಲ್ಲಿ ಮಾತನಾಡಿದ ಅವರು ಮದುವೆ ಯಾವಾಗ ಎಂಬ ಪ್ರಶ್ನೆಗೆ “ಅದು ಗೊತ್ತಿಲ್ಲ ಅದರ ಕುರಿತು ಯಾವುದೇ ಐಡಿಯಾ ಇಲ್ಲ…
ಆದರೆ ಒಂದಂತೂ ನಿಜ ಒಳ್ಳೆ ಹುಡುಗ ಸಿಕ್ಕರೆ, ಖಂಡಿತ ಮದುವೆಯಾಗ್ತೀನಿ. ನನಗೆ ಇದುವರೆಗೂ ಹುಡುಕಿದರೂ ಅಂತ ಒಳ್ಳೆ ಹುಡುಗ ಎಲ್ಲೂ ಸಿಕ್ತಿಲ್ಲ, ಮದುವೆಯಾಗುವ ಮುನ್ನ ನಿಮ್ಮೆಲ್ಲರಿಗೂ ಮೊದಲೇ ತಿಳಿಸುತ್ತೇನೆ” ಎಂದು ಹೇಳುವ ಮೂಲಕ ಹರಿದಾಡುತ್ತಿದ್ದಂತಹ ಎಲ್ಲಾ ಗಾಸಿಪ್ಗಳಿಗೆ ಬ್ರೇಕ್ ಹಾಕಿದರು.
Kannada Actress Rachita Ram Marriage Gossip Goes Viral