ಅಣ್ಣಾವ್ರ ನೆಚ್ಚಿನ ನಟಿ ಸರಿತಾ ಸಿನಿಮಾ ರಂಗ ತೊರೆದ ಮೇಲೆ ಅನುಭವಿಸಿದ ನರಕಯಾತನೇ ಬಗ್ಗೆ ತಿಳಿದ್ರೆ ಕಣ್ಣೀರು ಬರುತ್ತೆ! ಈಗಿನ ಅವರ ರಿಯಲ್ ಲೈಫ್ ಹೀಗಿದೆ ಗೊತ್ತಾ?
ನಟಿ ಸರಿತಾ ಸಿನಿಮಾ ಬದುಕಿನಲ್ಲಿ ಸಕ್ರಿಯರಾಗಿದ್ದು ಹೇಗೆ? ಅನಂತರಾ ಇವರ ಬದುಕಿನಲ್ಲಿ ಯಾವೆಲ್ಲ ಕಷ್ಟ ಕಾರ್ಪಣ್ಯಗಳು ಎದುರಾದವು? ಎಲ್ಲಾ ಏಳು ಬೀಳುಗಳನ್ನು ಸರಿತಾ ಯಾರ ಬೆಂಬಲವೂ ಇಲ್ಲದೆ ಎದುರಿಸಿದ್ದು ಹೇಗೆ?
ಸ್ನೇಹಿತರೆ 80-90 ರ ದಶಕದಲ್ಲಿ ಅಣ್ಣವ್ರೊಂದಿಗೆ ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ (Kannada Cinema) ಅಭಿನಯಿಸುತ್ತ ನಟರಿಗೆ ಸೌಂದರ್ಯ ಮುಖ್ಯವಲ್ಲ ಎಂಬುದನ್ನು ತೋರಿಸಿಕೊಟ್ಟಂತಹ ನಟಿ ಸರಿತಾ (Kannada Actress Saritha) ತಮ್ಮ ವೃತ್ತಿ ಬದುಕಿನಲ್ಲಿ ಯಶಸ್ಸು ಕಂಡ ಹಾಗೆ ತಮ್ಮ ವೈಯಕ್ತಿಕ ಬದುಕಿನಲ್ಲಿ ಕಾಣಲಿಲ್ಲ.
ಹೌದು ಗೆಳೆಯರೇ ಸಾಕಷ್ಟು ಸಂದರ್ಶನಗಳಲ್ಲಿ ಸ್ವತಃ ಸರಿತಾರವರೆ ಹೇಳಿಕೊಂಡಿರುವ ಹಾಗೆ ಕೇವಲ 15 ವರ್ಷಕ್ಕೆ ಮದುವೆ ಮಾಡಿಕೊಂಡು ಅನುಭವಿಸಿದಂತಹ ನರಕಾಯಾತನೆಯ ಪರಿಚಯವನ್ನು ಜನರಿಗೆ ಮಾಡಿಸಿದ್ದರು.
ಇದೆಲ್ಲದರಿಂದ ಹೊರಬಂದು ನಟಿ ಸರಿತಾ ಸಿನಿಮಾ ಬದುಕಿನಲ್ಲಿ (Saritha Cinema Journey) ಸಕ್ರಿಯರಾಗಿದ್ದು ಹೇಗೆ? ಅನಂತರಾ ಇವರ ಬದುಕಿನಲ್ಲಿ ಯಾವೆಲ್ಲ ಕಷ್ಟ ಕಾರ್ಪಣ್ಯಗಳು ಎದುರಾದವು? ಎಲ್ಲಾ ಏಳು ಬೀಳುಗಳನ್ನು ಸರಿತಾ ಯಾರ ಬೆಂಬಲವೂ ಇಲ್ಲದೆ ಎದುರಿಸಿದ್ದು ಹೇಗೆ? ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟ್ಟದ ಮುಖಾಂತರ ತಿಳಿಸ ಹೊರಟಿದ್ದು, ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ ನಟಿ ಸರಿತಾ ಅವರು ಪಾರ್ವತಮ್ಮನವರ ಸಂಬಂಧಿಕರೇ ಆಗಿದ್ದರಿಂದ ಸಿನಿಮಾ ರಂಗಕ್ಕೆ ಬರುವುದು ಅಷ್ಟೇನು ಕಷ್ಟವಾಗಿರಲಿಲ್ಲ, ಆದರೂ ಸಹ ಮರೋ ಚರಿತ್ರ ಎಂಬ ಸಿನಿಮಾಗೆ ಅದಾಗಲೇ 161 ಹುಡುಗಿಯರ ಆಡಿಶನ್ ನಡೆಸಿದರು. ಅದರಂತೆ ಸರಿತಾ ಅವರ ತಂದೆಯ ಸಹಾಯದಿಂದ ಆಡಿಶನ್ ನೀಡುವ ಅವಕಾಶವನ್ನು ಸರಿತಾ ಗಿಟ್ಟಿಸಿಕೊಳ್ಳುತ್ತಾರೆ.
ಹೀಗೆ ಮೊದಲ ದಿನ ಆಡಿಶನ್ಗೆ ಹೋಗುವಾಗ ಬಹಳ ಭಯದಿಂದಲೇ ಹೋದ ಸರಿತಾ ಅವರು ಸೆಲೆಕ್ಟ್ ಆಗಿ ಮರೋ ಚರಿತ್ರ ಎಂಬ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಪಾದರ್ಪಣೆ ಮಾಡುತ್ತಾರೆ.
ಅನಂತರ ತಪ್ಪು ತಾಳಂಗಳ್ ಎಂಬ ಸಿನಿಮಾದಲ್ಲಿ ಅಭಿನಯಿಸುವಂತಹ ಅವಕಾಶವನ್ನು ಗಿಟ್ಟಿಸಿಕೊಂಡು ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾ ರಂಗದಲ್ಲಿ ನಟಿ ಸರಿತಾ ಸಕ್ರಿಯರಾದರು.
ಇನ್ನು ವಿಶೇಷವಾಗಿ ಕನ್ನಡದಲ್ಲಿ (Kannada Movies) ನಟಿ ಸರಿತಾ ಅಭಿನಯಿಸಿರುವಂತಹ ಹೊಸಬೆಳಕು, ಕೆರಳಿದ ಸಿಂಹ, ಭಕ್ತ ಪ್ರಹ್ಲಾದ, ಕಾಮನಬಿಲ್ಲು, ಚಲಿಸುವ ಮೋಡಗಳು ಮುಂತಾದ ಸಿನಿಮಾಗಳು ಸಹ ಆಕೆಯ ಪಟ್ಟಿಗೆ ಸೇರಿದವು.
ಮನೆಯವರ ಒತ್ತಾಯದ ಮೇರೆಗೆ ಕೇವಲ 15 ವರ್ಷಕ್ಕೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಂತಹ ಈ ನಟಿ ಅತಿ ಚಿಕ್ಕ ವಯಸ್ಸಿನಲ್ಲಿ ಸಂಸಾರದ ಹೊರೆಯನ್ನು ಹೊರಲಾಗದೆ ಗಂಡನ ಮನೆಯಲ್ಲಿ ನೀಡುತ್ತಿದ್ದಂತಹ ಕಿರುಕುಳ ಚಿತ್ರ ಹಿಂಸೆಯನ್ನು ಸಹಿಸಲಾಗದೆ ಅಲ್ಲಿಂದ ಹೊರ ಬಂದು ಗಂಡನಿಂದ ವಿಚ್ಛೇದನ ಪಡೆದು ಪಾರ್ವತಮ್ಮನವರ ಸಹಾಯದಿಂದ ಸಿನಿಮಾ ರಂಗದಲ್ಲಿ ಸಕ್ರಿಯರಾದರು.
ಅಲ್ಲದೆ ಪಾರ್ವತಮ್ಮನವರಿಗೂ ನಟಿ ಸರಿತಾ ಅವರಿಂದರೇ ಎಲ್ಲಿಲ್ಲದಂತಹ ಪ್ರೀತಿ.. ಇಬ್ಬರೂ ಏಕವಚನದಲ್ಲಿ ಪರಸ್ಪರ ಮಾತನಾಡುತ್ತಾ ಅನ್ಯೋನ್ಯವಾಗಿ ಇದ್ದಂತಹ ಸ್ನೇಹಿತೆಯರು. ಹೀಗೆ ಮಲಯಾಳಂ ಸಿನಿಮಾ ಇಂಡಸ್ಟ್ರಿಯಲ್ಲಿ ಅಭಿನಯಿಸುತ್ತಿರುವಾಗ ಸರಿತಾ ಅವರಿಗೆ ಮುಕೇಶ್ ಅವರ ಪರಿಚಯವಾಗುತ್ತದೆ.
ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡಬೇಕೆಂಬ ನಿರ್ಧಾರ ಮಾಡಿ ಸೆಪ್ಟೆಂಬರ್ 2 ನೇ ತಾರೀಕು 1988 ರಂದು ವಿವಾಹವಾದರು.. ಈ ದಂಪತಿಗಳಿಗೆ ಶ್ರವಣ್ ಮತ್ತು ತೇಜಸ್ ಎಂಬ ಮಕ್ಕಳು ಜನಿಸಿದ ನಂತರ ಮದುವೆಯಾದ 20 ವರ್ಷಕ್ಕೆ ವಿಚ್ಛೇದನ ಪಡೆಯುವ ಮೂಲಕ ಸರಿತಾ ಹಾಗೂ ಮುಖೇಶ್ ದಂಪತಿ ದೂರಾದರು.
ವಿಚ್ಛೇದನ ಪಡೆದ ನಂತರ ಸರಿತಾ ಅವರಿಗೆ ಸಿನಿಮಾಗಳ ಅವಕಾಶ ತೀರಾ ಕಡಿಮೆಯಾಗಿ ಬಿಡುತ್ತದೆ. ಹೀಗೆ ಜೀವನದಲ್ಲಿ ಎದುರಾದಂತಹ ಎಲ್ಲಾ ಕಷ್ಟಗಳನ್ನು ಎದುರಿಸಿ ತಮ್ಮ ಮಕ್ಕಳನ್ನು ಚೆನ್ನಾಗಿ ಬೆಳೆಸಿದರು.
ಅದರಂತೀಗ ಮಕ್ಕಳೊಂದಿಗೆ ಸುಖವಾಗಿರುವ ಸವಿತಾ ಅವರು ಮಗನನ್ನು ಸಿನಿಮಾ ರಂಗಕ್ಕೆ ಕರೆ ತರುವ ಪ್ರಯತ್ನದಲ್ಲಿದ್ದಾರೆ. ಹೀಗೆ ವೃತ್ತಿ ಬದುಕಿನಲ್ಲಿ ಯಶಸ್ಸು ಕಂಡಂತಹ ಸರಿತಾ ಅವರು ಎರಡೆರಡು ಮದುವೆಯಾದರು ದಾಂಪತ್ಯ ಜೀವನದ ಸುಖ ಸಂತೋಷವನ್ನು ಕೊನೆಯವರೆಗೂ ಅನುಭವಿಸಲಾಗಲಿಲ್ಲ.
Interesting Facts About Kannada Actress Saritha Real Life Story
Follow us On
Google News |