ಬಜಾರಿ, ಬಾಯ್ಬಡಕಿ ಎಂಬೆಲ್ಲ ಬಿರುದು ಪಡೆದು ಬಹು ಬೇಡಿಕೆಯ ನಟಿ ಮಂಜುಳಾ ಆಗಿನ ಕಾಲಕ್ಕೆ ಪಡೆಯುತ್ತಿದ್ದ ಸಂಭಾವನೆ ಎಷ್ಟಿತ್ತು ಗೊತ್ತಾ?
ಉತ್ತುಂಗದ ಶಿಖರದಲ್ಲಿದ್ದ ಮಂಜುಳಾ ಅವರು ಒಂದೇ ಒಂದು ಸಿನಿಮಾದಲ್ಲಿ ಅಭಿನಯಿಸಲು ಡಿಮ್ಯಾಂಡ್ ಮಾಡುತ್ತಿದ್ದ ಸಂಭಾವನೆ ಎಷ್ಟಿತ್ತು ಎಂಬ ವಿಚಾರ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲಾಗುತ್ತಿದ್ದು, ಇವರ ಅಸಲಿ ಪೇಮೆಂಟ್ ಆಗಿನ ಕಾಲದ ಯಾವ ಸ್ಟಾರ್ ನಟರ ಸಂಭಾವನೆಗೂ ಕಡಿಮೆ ಇರ್ಲಿಲ್ಲ ಎಂಬುದು ವಿಶೇಷವಾಗಿದೆ.
ಸ್ನೇಹಿತರೆ ನಟಿ ಮಂಜುಳಾ (Actress Manjula) ಎನ್ನುತ್ತಿದ್ದ ಹಾಗೆ ಅವರ ಬಿನ್ನಾಣದ ನಡುವೆ ವಟವಟ ಎಂದು ಮಾತನಾಡುತ್ತಿದ್ದಂತಹ ಶೈಲಿ ಎದುರಿಗಿರುವವರ ಮೇಲೆ ತಮ್ಮ ಸೊಕ್ಕನ್ನು ತೋರುತ್ತ ರೇಗಾಡುತ್ತಿದ್ದಂತಹ ಗುಣ ಎಲ್ಲವೂ ನೆನಪಾಗಿಬಿಡುತ್ತದೆ.
ಹೀಗೆ ಮನೆ ಕಟ್ಟಿ ನೋಡು ಎಂಬ ಸಿನಿಮಾದಲ್ಲಿ ಬಾಲ ಕಲಾವಿದೆಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಮಂಜುಳಾ ಯಾರ ಸಾಕ್ಷಿ ಎಂಬ ಸಿನಿಮಾದಲ್ಲಿ (Kannada Cinema) ಪೂರ್ಣ ಪ್ರಮಾಣದ ನಾಯಕಿಯಾಗಿ ಕಾಣಿಸಿಕೊಳ್ಳುತ್ತಾರೆ.
ಆನಂತರ ಅಣ್ಣವರೊಂದಿಗೆನ ಸಂಪತ್ತಿಗೆ ಸವಾಲ್ ಸಿನಿಮಾ ಬಹು ದೊಡ್ಡ ಮಟ್ಟದ ಯಶಸ್ಸನ್ನು ತಂದುಕೊಡುತ್ತದೆ, ಹೀಗೆ ಬಜಾರಿ ದುರ್ಗಿಯ ಪಾತ್ರದಲ್ಲಿ ಬಹು ದೊಡ್ಡ ಮಟ್ಟದ ಸಕ್ಸಸ್ ಕಂಡಂತಹ ಮಂಜುಳಾ ಅವರು ಬಾಯಿ ಬಡಕಿ ಬಜಾರಿ ಪಾತ್ರಗಳಲ್ಲಿ ಹೆಚ್ಚಾಗಿ ಅಭಿನಯಿಸುತ್ತಾ ಆಗಿನ ಕಾಲದ ಸಿನಿ ಪ್ರೇಕ್ಷಕರ ಮನದರಸಿಯಾಗಿದ್ದವರು.
ಹೀಗೆ ಅದೊಂದು ಕಾಲದಲ್ಲಿ ಉತ್ತುಂಗದ ಶಿಖರದಲ್ಲಿದ್ದ ಮಂಜುಳಾ ಅವರು ಒಂದೇ ಒಂದು ಸಿನಿಮಾದಲ್ಲಿ ಅಭಿನಯಿಸಲು ಡಿಮ್ಯಾಂಡ್ ಮಾಡುತ್ತಿದ್ದ ಸಂಭಾವನೆ (Remuneration) ಎಷ್ಟಿತ್ತು ಎಂಬ ವಿಚಾರ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲಾಗುತ್ತಿದ್ದು, ಇವರ ಅಸಲಿ ಪೇಮೆಂಟ್ ಆಗಿನ ಕಾಲದ ಯಾವ ಸ್ಟಾರ್ ನಟರ ಸಂಭಾವನೆಗೂ ಕಡಿಮೆ ಇರ್ಲಿಲ್ಲ ಎಂಬುದು ವಿಶೇಷವಾಗಿದೆ.
ಹಾಗಾದ್ರೆ ನಟಿ ಮಂಜುಳಾ ಪಡೆಯುತ್ತಿದ್ದಂತಹ ಪೇಮೆಂಟ್ ಎಷ್ಟಿತ್ತು? ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗೆ ಇದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಸ್ನೇಹಿತರೆ, ತಮ್ಮ ಅಪ್ರತಿಮ ಪ್ರತಿಭೆಯ ಮೂಲಕ ಬೆಳ್ಳಿತೆರೆಯಲ್ಲಿ ಮಿಂಚಿ ಮನೆಮಾತಾಗಿದ್ದ ಮಂಜುಳಾ ‘ಬಹುದೂರ್ ಹೆಣ್ಣು’ ಎಂದೆ ಪ್ರಸಿದ್ಧಿ ಪಡೆದಿದ್ದರು. ಹೀಗೆ ಕನ್ನಡದ ಬೆಸುಗೆ, ಸಿಂಹದ ಜೋಡಿ, ಸೀತಾರಾಮ, ಕಿಟ್ಟು ಪುಟ್ಟು, ಸಿಂಗಪೂರಿನಲ್ಲಿ ರಾಜಾಕುಳ್ಳ, ಹೃದಯಸಂಗಮ, ಭಕ್ತ ಕುಂಬಾರ, ಎರಡು ಕನಸು ಹೀಗೆ ಯಶಸ್ವಿ ಸಿನಿಮಾಗಳಲ್ಲಿ ಅಭಿನಯಿಸುತ್ತಾ ದೊಡ್ಡ ಮಟ್ಟದ ಪ್ರಖ್ಯಾತಿಯನ್ನು ಪಡೆದುಕೊಂಡು ಡಾಕ್ಟರ್ ರಾಜಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್, ಶ್ರೀನಾಥ್, ದ್ವಾರಕೇಶ್ ಅವರಂತಹ ನಟರೊಂದಿಗೆ ತೆರೆ ಹಂಚಿಕೊಂಡು ಪೀಕ್ನಲ್ಲಿ ಇದ್ದಂತಹ ನಟಿ.
ಇನ್ನು 70-80 ರ ದಶಕದಲ್ಲಿಯೇ ನಟಿ ಮಂಜುಳಾ ಅವರು ಒಂದು ಚಿತ್ರದಲ್ಲಿ ಅಭಿನಯಿಸಲು ಬರೋಬ್ಬರಿ 40 ರಿಂದ 50 ಸಾವಿರ ರೂಪಾಯಿ ಸಂಭಾವನೆಯನ್ನು ಪಡೆಯುತ್ತಿದ್ದರಂತೆ. ಆದ್ರೆ ಮದುವೆಯಾದ ಕೆಲವು ವರ್ಷಗಳ ನಂತರ ಮಂಜುಳಾ ಅವರಿಗೆ ಸಿನಿಮಾದ ಅವಕಾಶ ಬರುವುದು ಕಡಿಮೆಯಾಗುತ್ತಾ ಹೋಗುತ್ತದೆ, ಆನಂತರ ಸಣ್ಣಪುಟ್ಟ ಪಾತ್ರದಲ್ಲಿ ಕಾಣಿಸಿಕೊಳ್ಳಲು ಶುರು ಮಾಡಿದಂತಹ ಮಂಜುಳಾ ಅವರು ತಮ್ಮ ವೈಯಕ್ತಿಕ ಬದುಕಿನತ್ತ ಹೆಚ್ಚಿನ ಗಮನ ಹರಿಸುತ್ತಿದ್ದರು.
ಹೀಗೊಂದು ದಿನ ಅವರ ಬದುಕಿನಲ್ಲಿ ವಿಧಿ ತನ್ನ ವಿಕೃತಿಯನ್ನು ಮೆರೆದು ಮಂಜುಳಾ ಅತಿ ಚಿಕ್ಕ ವಯಸ್ಸಿಗೆ ಬಾರದ ಲೋಕಕ್ಕೆ ಮರಳಿದರು. ಹೌದು ಗೆಳೆಯರೇ ಸಿನಿಮಾ ರಂಗದಲ್ಲಿ (Kannada Film Industry) ಸದಾ ಕಾಲ ತರ್ಲೆ ತುಂಟಾಟ ಮಾಡುತ್ತಾ ತನ್ನ ಜೊತೆಗಿರುವವರನ್ನು ನಗಿಸುತ್ತಾ ಬಹಳನೇ ಲವಲವಿಕೆಯಿಂದ ಇರುತ್ತಿದಂತಹ ಮಂಜುಳಾ ಅವರಿಗೆ ದುರಾದೃಷ್ಟದ ದುರಂತವೆಂಬುದು ಹೆಚ್ಚು ದಿನ ಬದುಕಲು ಬಿಡಲಿಲ್ಲ.
Kannada Actress Manjula Remuneration on That Days