ಕನ್ನಡ ಬ್ಲಾಕ್ಬಸ್ಟರ್ ಹಿಟ್ ಹಳ್ಳಿ ಮೇಷ್ಟ್ರು ಸಿನಿಮಾದ ಕಪ್ಪೆರಾಯ ನೆನಪಿದ್ದಾರಾ? ಈಗ ಎಲ್ಲಿದ್ದಾರೆ, ಹೇಗಾಗಿದ್ದಾರೆ ಗೊತ್ತಾ?
ಹಳ್ಳಿ ಮೇಷ್ಟ್ರು ಸಿನಿಮಾದದಲ್ಲಿ "ಎಲ್ಲರೂ ನನ್ನನ್ನು ಕಪ್ರಾಯ ಕಪ್ರಾಯ ಅಂತಾ ಕರಿತಾರೆ ಸರ್" ಎನ್ನುತ್ತ ಆಗಿನ ಪ್ರೇಕ್ಷಕರ ಮನಸ್ಸನ್ನು ಸೆಳೆದಿದ್ದ ಕಪ್ಪೆರಾಯ ಇಂದು ಹೇಗಿದ್ದಾರೆ?
ನಟ ರವಿಚಂದ್ರನ್ (Actor Ravichandran) ಹಾಗೂ ಬಿಂದಿಯಾ ಅವರ ಅಭಿನಯದಲ್ಲಿ ಮೂಡಿಬಂದಿದ್ದಂತಹ ಹಳ್ಳಿ ಮೇಷ್ಟ್ರು ಸಿನಿಮಾ (Kannada Halli Meshtru Cinema) ಕನ್ನಡ ಹಿಟ್ ಪಟ್ಟಿಯಲ್ಲಿ ವಿಶೇಷ ಸ್ಥಾನವನ್ನು ಅಲಂಕರಿಸುತ್ತದೆ. ಸಿನಿಮಾ ಪ್ರತಿ ಹಂತದಲ್ಲಿಯೂ ಜನರಿಗೆ ಪೈಸಾ ವಸೂಲ್ ಮನರಂಜನೆ ನೀಡಿತ್ತು..
ಅಲ್ಲದೆ ಸಿನಿಮಾದಲ್ಲಿ ಬರುವಂತಹ ಸಣ್ಣಪುಟ್ಟ ಸನ್ನಿವೇಶಗಳು ಜನರನ್ನು ಬಿದ್ದು ಬಿದ್ದು ನಗುವಂತೆ ಮಾಡಿತ್ತು, ಇನ್ನು ಕೆಲ ಸಂದರ್ಭದಲ್ಲಿ ಅವರನ್ನು ಆಳವಾಗಿ ಅಳಿಸಿತ್ತು ಕೂಡ.
ಹೀಗೆ ಬಹು ದೊಡ್ಡ ತಾರಾ ಬಳಗದಲ್ಲಿ ತಯಾರದಂತಹ ಈ ಸಿನಿಮಾ ಅಂದಿನ ಕಾಲಕ್ಕೆ ಬಹು ದೊಡ್ಡ ಮಟ್ಟದ ಯಶಸ್ಸನ್ನು ಕಂಡುಕೊಳ್ಳುವುದರ ಜೊತೆಗೆ ಸಿನಿಮಾದಲ್ಲಿ ಅಭಿನಯಿಸಿದಂತಹ ಪ್ರತಿಯೊಬ್ಬ ಕಲಾವಿದರಿಗೂ ದೊಡ್ಡ ಹೆಸರನ್ನು ತಂದುಕೊಟ್ಟಿತ್ತು.
ಹೀಗೆ ಈ ಚಿತ್ರದಲ್ಲಿ ಎಲ್ಲರೂ ನನ್ನನ್ನು ಕಪ್ರಾಯ ಕಪ್ರಾಯ ಅಂತಾ ಕರಿತಾರೆ ಸರ್ ಎನ್ನುತ್ತ ಆಗಿನ ಪ್ರೇಕ್ಷಕರ ಮನಸ್ಸನ್ನು ಸೆಳೆದಿದ್ದ ಕಪ್ಪೆರಾಯ (Kapperaya) ಇಂದು ಹೇಗಿದ್ದಾರೆ?
ಬೆಳೆದು ದೊಡ್ಡವರಾದ ಬಳಿಕ ಸಿನಿಮಾದ ಅವಕಾಶಗಳು ಇಲ್ವಾ? ಹಾಗಾದ್ರೆ ಯಾವ ಕೆಲಸ ಮಾಡುತ್ತಿದ್ದಾರೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ ಕೆಲವೊಮ್ಮೆ ನಮ್ಮ ನ್ಯೂನ್ಯತೆಗಳು ಪ್ಲಸ್ ಪಾಯಿಂಟ್ ಆಗಿ ಮಾರ್ಪಾಟಾಗುತ್ತದೆ ನಮ್ಮೊಳಗೆ ಆತ್ಮ ವಿಶ್ವಾಸ, ಛಲ ಹಾಗೂ ಏನನ್ನಾದರೂ ಸಾಧಿಸುವಂತಹ ಗುರಿ ಇದ್ದರೆ ಸಾಕು ನಾವು ಇಟ್ಟ ಹೆಜ್ಜೆ ಎಲ್ಲವೂ ಸಾಧನೆ ಎಡೆಗೆ ಸಾಗುತ್ತದೆ..
ಇದನ್ನೇ ತೋರಿಸಿಕೊಟ್ಟಂತಹ ಉತ್ತಮ ನಟ ನಮ್ಮ ಹಳ್ಳಿ ಮೇಷ್ಟ್ರು ಸಿನಿಮಾದ ಫಕೀರಪ್ಪ ಬಸವಂತಪ್ಪ ದೊಡ್ಮನಿ ಅಲಿಯಾಸ್ ಕಪ್ಪೆರಾಯ. ಹೌದು ಗೆಳೆಯರೇ 2.5 ಎತ್ತರದ ಈ ಹುಡುಗ ತನ್ನ ಬಾಹ್ಯಕಾರದಿಂದಲೇ ಸಾಕಷ್ಟು ಸಿನಿಮಾಗಳ ಅವಕಾಶವನ್ನು ಗಿಟ್ಟಿಸಿಕೊಂಡು ಆಗಿನ ಬಹುತೇಕ ಸ್ಟಾರ್ ನಟರೊಂದಿಗೆ ಅಭಿನಯಿಸಿದವರು, ಚಿಕ್ಕಂದಿನಿಂದಲೂ ಕುಳ್ಳಗಿದ್ದ ಕಾರಣ ಎಲ್ಲರೂ ಇವರನ್ನು ಬಹಳ ಹೀಯಾಳಿಸುತ್ತಿದ್ದರು.
ಆದರೆ ಇದಕ್ಕೆ ಕುಗ್ಗದೆ ಅದನ್ನೇ ಪ್ಲಸ್ ಪಾಯಿಂಟ್ ಮಾಡಿಕೊಂಡು ತಮ್ಮ ಜೀವನವನ್ನು ನಡೆಸಿಕೊಂಡು ಹೋಗುತ್ತಿರುವ ಕಪ್ಪೆರಾಯ ಕನ್ನಡದಲ್ಲಿ (Kannada Movies) ಒಟ್ಟು 16 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಆನಂತರ ಬೆಳೆದು ದೊಡ್ಡವರಾದ ಮೇಲೆ ದೇಹಕಾರದ ಕುರಿತು ಬಂದಂತಹ ನೆಗೆಟಿವ್ ಕಾಮೆಂಟ್ಗಳನ್ನು ಸ್ವೀಕರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರಂತೆ. ಆನಂತರ ಸಮಾಜದಲ್ಲಿ ನನ್ನಂತ ನೂರಾರು ಜನ ಮಕ್ಕಳಿದ್ದಾರೆ ಎಂಬುದನ್ನು ಅರಿತು ಆ ಆಲೋಚನೆಯಿಂದ ಹೊರಬಂದ ಫಕೀರಪ್ಪ ವಿಜಯಪುರದಲ್ಲಿ ಸ್ಪಂದನ ಎಂಬ ಅಂಗವಿಕಲರ ಸಂಸ್ಥೆಯೊಂದನ್ನು ಸ್ಥಾಪಿಸಿ ತನ್ನಂತ್ತಿರುವ ಮಕ್ಕಳಿಗೆ ಆಶ್ರಯರಾಗಿದ್ದಾರೆ.
ಅಲ್ಲದೆ ತಮ್ಮ ಆಶ್ರಮದಲ್ಲಿರುವ ಅಂಗವಿಕಲ ಜೋಡಿಗೆ ಮದುವೆ ಮಾಡಿಸುವಂತಹ ಪುಣ್ಯ ಕಾರ್ಯಗಳನ್ನು ಫಕೀರಪ್ಪ ಮಾಡುತ್ತಿದ್ದು ದೇವರ ಮಕ್ಕಳ ನಗುವಿನಲ್ಲಿ ತಮ್ಮ ಜೀವನದ ನೋವನ್ನು ಮರೆಯುತ್ತಿದ್ದಾರೆ.
Interesting Facts About Kannada Halli Meshtru Cinema Fame Kapperaya Role Artist Pakirappa