ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ಕಿಚ್ಚ ಸುದೀಪ್ ಅವರ ‘ಹುಚ್ಚ’ ಸಿನಿಮಾ ನಟಿ ರೇಖಾ ರಿಯಲ್ ಲೈಫ್ ಹೇಗಿದೆ ಗೊತ್ತಾ? ಏನಿದು ಆಕೆಯ ಬದುಕಿನಲ್ಲಿ ವಿಧಿಯಾಟ!

ರಾಮೋಜಿ ರಾವ್ ಬ್ಯಾನರ್ನ ಅಡಿಯಲ್ಲಿ ತಮ್ಮ ವೃತ್ತಿ ಬದುಕಿನ ಪಯಣವನ್ನು ಪ್ರಾರಂಭ ಮಾಡಿದ ರೇಖಾ ಅವರು ಬ್ಯಾಕ್ ಟು ಬ್ಯಾಕ್ 3 ಹಿಟ್ ಸಿನಿಮಾಗಳನ್ನು ನೀಡಿದರು. ಅಲ್ಲದೆ ಈ ನಟಿ ಯಾವುದೇ ಹೊಸಬರೊಂದಿಗೆ ಅಭಿನಯಿಸಿದರು ಆ ಚಿತ್ರ ಹಿಟ್ ಪೆಟ್ಟಿಗೆ ಸೇರುತ್ತಿತ್ತು.

ಸ್ನೇಹಿತರೆ 2001ರಲ್ಲಿ ಬಿಡುಗಡೆಯಾದಂತಹ ಹುಚ್ಚ ಸಿನಿಮಾ (Huccha Cinema) ಕನ್ನಡ ಚಿತ್ರರಂಗದಲ್ಲಿ (Kannada Film Industry) ದೊಡ್ಡಮಟ್ಟದ ಸಂಚಲನವನ್ನೇ ಸೃಷ್ಟಿ ಮಾಡಿತ್ತು ಎಂದರೆ ತಪ್ಪಾಗಲಿಕ್ಕಿಲ್ಲ. ನಿರ್ದೇಶಕ ಓಂ ಪ್ರಕಾಶ್ ರಾವ್ ಅವರ ಆಕ್ಷನ್ ಕಟ್ನಲ್ಲಿ ಮೂಡಿ ಬಂದಿದ್ದ ರೋಮ್ಯಾಂಟಿಕ್ ಆಕ್ಷನ್ ಸಿನಿಮಾ ಸುದೀಪ್ (Actor Sudeep) ಹಾಗೂ ನಟಿ ರೇಖಾ ವೇದವ್ಯಾಸ್ (Actress Rekha Vedavyas) ಅವರ ಬದುಕನ್ನೇ ಬದಲಿಸಿತ್ತು. ಅದರಲ್ಲೂ ಸುದೀಪ್ ಅವರ ಅಭಿನಯಕ್ಕೆ ಸಾಕಷ್ಟು ಪ್ರಶಂಸೆಗಳು ಪುರಸ್ಕಾರಗಳು ಸಿಕ್ಕವು.

ಹೌದು ಗೆಳೆಯರೇ ಕಾಲೇಜು ಪ್ರೇಮ ಕಥೆಯ (Collage Love Story) ಆಧಾರದ ಮೇಲೆ ಎಣೆಯಲಾಗಿದ್ದ ಈ ಸಿನಿಮಾ ಆಗಿನ ಅದೆಷ್ಟೋ ಕಾಲೇಜು ಹುಡುಗ ಹುಡುಗಿಯರ ಮೇಲೆ ಪ್ರಭಾವ ಬೀರಿತ್ತು ಹಾಗೂ ಸುದೀಪ್ ಅವರಿಗೂ ಬಹುದೊಡ್ಡ ಮಟ್ಟದ ಬ್ರೇಕ್ಕನ್ನು ತಂದು ಕೊಟ್ಟಿತ್ತು. ಹೀಗೆ ಈ ಸಿನಿಮಾದಿಂದಾಗಿ ಸುದೀಪ್ ಅವರ ಹೆಸರಿನ ಮುಂದೆ ಕಿಚ್ಚ ಎಂಬ ಹೆಸರು ಸೇರ್ಪಡೆಯಾಯಿತು.

ಕಮಲಿ ಸೀರಿಯಲ್ ನಟಿ ಅಮೂಲ್ಯ ಗೌಡ ಅವರ ತಾಯಿಗೆ ಏನಾಗಿದೆ ಗೊತ್ತಾ? ಪಾಪ ಅಮ್ಮನನ್ನು ನೆನೆದು ಬಿಕ್ಕಿ-ಬಿಕ್ಕಿ ಅತ್ತಿದ್ಯಾಕೆ?

ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ಕಿಚ್ಚ ಸುದೀಪ್ ಅವರ 'ಹುಚ್ಚ' ಸಿನಿಮಾ ನಟಿ ರೇಖಾ ರಿಯಲ್ ಲೈಫ್ ಹೇಗಿದೆ ಗೊತ್ತಾ? ಏನಿದು ಆಕೆಯ ಬದುಕಿನಲ್ಲಿ ವಿಧಿಯಾಟ! - Kannada News

ಈ ಸಿನಿಮಾದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬ ಕಲಾವಿದರಿಗೂ ಬಹು ದೊಡ್ಡ ಮಟ್ಟದ ಸಕ್ಸಸ್ ನೀಡಿದಂತಹ ಸಿನಿಮಾ ಇದು. ಆದರೆ ಈ ಸಿನಿಮಾದ ಬಳಿಕ ನಟಿ ರೇಖಾ ಅವರು ಯಾವ ಯಶಸ್ವಿ ಸಿನಿಮಾದಲ್ಲೂ ಕಾಣಿಸಿಕೊಳ್ಳದಿರುವುದು ವಿಪರ್ಯಾಸ.

ಹೌದು ಗೆಳೆಯರೇ ನಟಿ ರೇಖಾ ವೇದವ್ಯಾಸ್ ಅವರು ಕನ್ನಡ, ತಮಿಳು, ಹಿಂದಿ ಸೇರಿದಂತೆ 35ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಬಣ್ಣ ಹಚ್ಚಿ ಅದೆಷ್ಟೋ ಸ್ಟಾರ್ ನಟರಿಗೆ ಅದೃಷ್ಟದ ನಟಿಯಾಗಿ ಹೊರಹೊಮ್ಮಿದರು.

ಅಲ್ಲದೆ ನಮ್ಮ ಕನ್ನಡದಲ್ಲಿಯೂ (Kannada Movies) ಚಾಲೆಂಜಿಂಗ್ ಸ್ಟಾರ್ ದರ್ಶನ್, ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಂತಹ ಸ್ಟಾರ್ ನಟರೊಂದಿಗೆ ಕೆಲಸ ಮಾಡಿದ ರೇಖಾ ಮೂಲತಃ ಉಡುಪಿಯವರಾಗಿದ್ದು, ಬಿಬಿಎಂ ವ್ಯಾಸಂಗ (BBM Education) ಮಾಡುತ್ತಿರುವಾಗಲೇ ಮಾಡ್ಲಿಂಗ್ (Modeling) ಮಾಡುತ್ತಾ ಚಿತ್ರ ಎಂಬ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು.

Kannada Huccha Cinema Actress Rekha

ರವಿಚಂದ್ರನ್ ಅವರ ಕನಸಿನ ಕೂಸಾಗಿದ್ದ ಶಾಂತಿ ಕ್ರಾಂತಿ ಸಿನಿಮಾ ಸೋಲಿಗೆ ಕಾರಣವೇನು ಗೊತ್ತಾ? ಈ ಚಿತ್ರಕ್ಕೆ ರವಿಮಾಮ ಹೂಡಿದ್ದ ಬಂಡವಾಳ ಎಷ್ಟು?

ರಾಮೋಜಿ ರಾವ್ ಬ್ಯಾನರ್ನ ಅಡಿಯಲ್ಲಿ ತಮ್ಮ ವೃತ್ತಿ ಬದುಕಿನ ಪಯಣವನ್ನು ಪ್ರಾರಂಭ ಮಾಡಿದ ರೇಖಾ ಅವರು ಬ್ಯಾಕ್ ಟು ಬ್ಯಾಕ್ 3 ಹಿಟ್ ಸಿನಿಮಾಗಳನ್ನು ನೀಡಿದರು. ಅಲ್ಲದೆ ಈ ನಟಿ ಯಾವುದೇ ಹೊಸಬರೊಂದಿಗೆ ಅಭಿನಯಿಸಿದರು ಆ ಚಿತ್ರ ಹಿಟ್ ಪೆಟ್ಟಿಗೆ ಸೇರುತ್ತಿತ್ತು.

ಈ ಕಾರಣದಿಂದ ಅದೃಷ್ಟದ ನಟಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದ ರೇಖಾ ಅವರು ಗಣೇಶ್ ಅವರ ಚೆಲ್ಲಾಟ ಹಾಗೂ ಲೂಸ್ ಮಾದ ಯೋಗಿ ಅವರ ಜಿಂಕೆಮರಿನ ಹಾಡಿನ ಮೂಲಕ ಇನ್ನಷ್ಟು ಪ್ರಖ್ಯಾತಿ ಪಡೆದುಕೊಂಡು

ದರ್ಶನ್ ಹಾಗೂ ಸುದೀಪ್ ಅವರಂತಹ ನಟರೊಂದಿಗೆ ನಟಿಸುವ ಅವಕಾಶ ಗಿಟ್ಟಿಸಿಕೊಂಡು ತೆಲುಗು ಸಿನಿಮಾ ಇಂಡಸ್ಟ್ರಿಗೆ ಹಾರಿದ ರೇಖಾ ಅವರಿಗೆ ಅವಕಾಶಗಳ ಕುಂಠಿತವಾಯಿತು. ಈ ಸಮಯದಲ್ಲಿ ಜಾಹೀರಾತಿಗಾಗಿ ಮುಂಬೈಗೆ ಹೋದಂತಹ ರೇಖಾ ಅವರಿಗೆ ಅಲ್ಲಿನ ವಾತಾವರಣ ಹಾಗೂ ಲೈಫ್ ಸ್ಟೈಲ್ ಬಹಳನೇ ಇಷ್ಟವಾಗಿ ಅಲ್ಲಿಯೇ ಸೆಟಲ್ ಆಗುವ ನಿರ್ಧಾರ ಮಾಡುತ್ತಾರೆ.

ಅಂಗಲಾಚಿ ಬೇಡಿದ್ರೂ ಅವಕಾಶ ಸಿಕ್ತಿಲ್ಲ ಎಂದು ಭಾವುಕರಾದ ಯಜಮಾನ ಸಿನಿಮಾದ ಅಮ್ಮಮ್ಮ ನಟಿ ಲಕ್ಷ್ಮೀದೇವಿ! ಅವರ ಕಥೆ ಕೇಳಿದ್ರೆ ಕಣ್ಣೀರು ಬರುತ್ತೆ

ಹೀಗೆ ಕಾಲಕ್ರಮೇಣ ಸ್ವತಃ ಅಂಗಲಾಚಿ ಬೇಡಿಕೊಂಡರೂ ಕೂಡ ಸಿನಿಮಾಗಳ ಅವಕಾಶ ರೇಖಾ ಅವರನ್ನು ಹರಸಿ ಬಂದಿಲ್ಲ. ಈ ಕಾರಣದಿಂದ ಸಿನಿ ಬದುಕಿನಿಂದ ದೂರ ಉಳಿದಿರುವ ರೇಖಾ ಮತ್ತೆ ಕಂಬ್ಯಾಕ್ ಮಾಡುವ ಪ್ರಯತ್ನದಲ್ಲಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

ಹೀಗೆ ಅದೆಷ್ಟೋ ಸ್ಟಾರ್ ಸೆಲೆಬ್ರೆಟಿಗಳಿಗೆ ಅದೃಷ್ಟದ ನಟಿಯಾಗಿ ಮಿಂಚಿದಂತಹ ರೇಖಾ ಅವರು ಇಂದು ಸಿನಿಮಾಗಳ ಅವಕಾಶಕ್ಕಾಗಿ ಪರದಾಡುತ್ತಿರುವುದು ವಿಪರ್ಯಾಸ.

ಆ ಅಂಗ ಈಗ ದೊಡ್ಡದಾಗಿದೆ ಎಂದು ಕಾಮೆಂಟ್ ಮಾಡಿದ ನೆಟ್ಟಿಗನಿಗೆ ನಟಿ ನಿತ್ಯಾ ಮೆನನ್ ಕೊಟ್ಟ ಖಡಕ್ ಉತ್ತರ ಹೇಗಿತ್ತು ಗೊತ್ತಾ? ಅಷ್ಟಕ್ಕೂ ಒಂದೇ ಮಾತಿಗೆ ಬಾಯಿ ಮುಚ್ಚಿಸಿದ ನಟಿ ಹೇಳಿದ್ದೇನು?

Kannada Huccha Cinema Fame Actress Rekha Real Life Unknow Story

Follow us On

FaceBook Google News

Kannada Huccha Cinema Fame Actress Rekha Real Life Unknow Story