ಕಮಲಿ ಸೀರಿಯಲ್ ನಟಿ ಅಮೂಲ್ಯ ಗೌಡ ಅವರ ತಾಯಿಗೆ ಏನಾಗಿದೆ ಗೊತ್ತಾ? ಪಾಪ ಅಮ್ಮನನ್ನು ನೆನೆದು ಬಿಕ್ಕಿ-ಬಿಕ್ಕಿ ಅತ್ತಿದ್ಯಾಕೆ?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಮಲಿ ಸೀರಿಯಲ್ನಲ್ಲಿ ಕಮಲಿ ಎಂಬ ಪಾತ್ರಕ್ಕೆ ಜೀವ ತುಂಬುತ್ತ ಅದೆಷ್ಟೋ ಪಡ್ಡೆ ಹುಡುಗರ ಡ್ರೀಮ್ ಗರ್ಲ್ ಆಗಿದ್ದ ನಟಿ ಅಮೂಲ್ಯ ಗೌಡ ತಮ್ಮ ರಗಡ್ ವ್ಯಕ್ತಿತ್ವದ ಮೂಲಕವೇ ಅಪಾರ ಅಭಿಮಾನಿ ಬಳಗವನ್ನು ಗಿಟ್ಟಿಸಿಕೊಂಡಿದ್ದಾರೆ.
ಸ್ನೇಹಿತರೆ, ಕಿರುತೆರೆ ಲೋಕದಲ್ಲಿ ಕಮಲಿ ಸೀರಿಯಲ್ (Kannada Kamali Serial) ಮೂಲಕವೇ ಬಹು ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡ ಅಮೂಲ್ಯ ಗೌಡ (Actress Amulya Gowda) ಯಾರಿಗೆ ತಾನೇ ಪರಿಚಯವಿರದಿರಲು ಸಾಧ್ಯ ಹೇಳಿ? ಮುಗ್ಧ ಕ್ಯಾರೆಕ್ಟರ್ ಮೂಲಕವೇ ಕನ್ನಡಿಗರ ಮನೆಮಗಳಾಗಿ ಹೋಗಿದ್ದ ಅಮೂಲ್ಯ ಅವರು ಬಿಗ್ ಬಾಸ್ (Kannada Bigg Boss Show) ಮನೆಗೂ ಪ್ರವೇಶ ಮಾಡಿ ತಮ್ಮ ವ್ಯಕ್ತಿತ್ವ ಎಂತದ್ದು ಎಂಬುದನ್ನು ಸಾಬೀತು ಪಡಿಸಿಕೊಂಡರು.
ಹೀಗಿರುವಾಗ ಕಳೆದ ಕೆಲವು ದಿನಗಳ ಹಿಂದೆ ಸೋಮಣ್ಣ ಮಾಚಿ ಮಾಡರವರೊಂದಿಗಿನ ಸಂದರ್ಶನದಲ್ಲಿ ಮಾತನಾಡುವಾಗ ತಮ್ಮ ತಾಯಿಯನ್ನು ನೆನೆದು ಕಣ್ಣೀರು ಹಾಕಿದ್ದಾರೆ. ಅಷ್ಟಕ್ಕೂ ನಟಿ ಅಮೂಲ್ಯ ಗೌಡ ಅವರ ವೈಯಕ್ತಿಕ ಬದುಕಿನಲ್ಲಿ ಏನಾಗಿದೆ? ಅವರ ರಿಯಲ್ ಲೈಫ್ ತಾಯಿ ಯಾರು? ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಸ್ನೇಹಿತರೆ ಜೀ ಕನ್ನಡ ವಾಹಿನಿಯಲ್ಲಿ (Zee Kannada TV) ಪ್ರಸಾರವಾಗುತ್ತಿದ್ದ ಕಮಲಿ ಸೀರಿಯಲ್ನಲ್ಲಿ ಕಮಲಿ ಎಂಬ ಪಾತ್ರಕ್ಕೆ ಜೀವ ತುಂಬುತ್ತ ಅದೆಷ್ಟೋ ಪಡ್ಡೆ ಹುಡುಗರ ಡ್ರೀಮ್ ಗರ್ಲ್ ಆಗಿದ್ದ ನಟಿ ಅಮೂಲ್ಯ ಗೌಡ ತಮ್ಮ ರಗಡ್ ವ್ಯಕ್ತಿತ್ವದ ಮೂಲಕವೇ ಅಪಾರ ಅಭಿಮಾನಿ ಬಳಗವನ್ನು ಗಿಟ್ಟಿಸಿಕೊಂಡಿದ್ದಾರೆ. ಸೀರಿಯಲ್ನಲ್ಲಿ ಮುಗ್ಧ ಅಮಾಯಕ ಹಳ್ಳಿ ಹುಡುಗಿಯ ಪಾತ್ರದಲ್ಲಿ ಅಭಿನಯಿಸಿದ್ದರು.
ಆದರೆ ಅಮ್ಮು ಅವರ ನಿಜ ಜೀವನದಲ್ಲಿ ಅದಕ್ಕೆ ತದ್ವಿರುದ್ಧವಾಗಿದ್ದು, ಕಳೆದ ಬಿಗ್ ಬಾಸ್ ಸೀಸನ್ 9ರ ಪ್ರವೀಣರಾಗಿ ದೊಡ್ಮನೆಗೆ ಕಾಲಿಟ್ಟು ತಮ್ಮ ಅದ್ಭುತ ಸ್ಟಾರ್ಟರ್ಜಿಗಳ ಮೂಲಕ ಬಿಗ್ ಬಾಸ್ ಮನೆಯಲ್ಲಿ ಹಲವಾರು ದಿನಗಳನ್ನು ಪೂರೈಸಿದರು.
ಅಲ್ಲಿಂದ ಬಂದ ನಂತರ ಸಂದರ್ಶನಗಳಲ್ಲಿ ಮಾತನಾಡುವ ತಮ್ಮ ವೈಯಕ್ತಿಕ ಬದುಕಿನ ಪರಿಚಯ ಮಾಡಿಕೊಂಡ ಅಮೂಲ್ಯ ಗೌಡ ಅವರು ತಮ್ಮ ತಾಯಿಯನ್ನು ನೆನೆದು ಭಾವುಕರಾಗಿದ್ದಾರೆ.
ಹೌದು ಗೆಳೆಯರೇ ಸೋಮಣ್ಣ ಮಾಚಿಮಾಡರವರೊಂದಿಗಿನ ಸಂದರ್ಶನದಲ್ಲಿ ನಟಿ ಅಮೂಲ್ಯ ಗೌಡ ತಮ್ಮ ರಿಯಲ್ ಲೈಫ್ ತಾಯಿ ಯಾರೆಂದು ರಿವೀಲ್ ಮಾಡಿದ್ದಾರೆ. ಮೂಲತಃ ಬೆಂಗಳೂರಿನವರೇ (Bengaluru) ಆದ ಅಮೂಲ್ಯ ಗೌಡ ಅವರು ಓಂಕಾರ ಗೌಡ ದಂಪತಿಗೆ 1993 ರಂದು ಜನಿಸಿದರು. ಹತ್ತನೇ ತರಗತಿ ಓದುತ್ತಿರುವಾಗಲೇ ಅಮೂಲ್ಯ ಅವರ ತಾಯಿ ತೀರಿ ಹೋದರಂತೆ.
ಹೌದು ಗೆಳೆಯರೇ ಅಮೂಲ್ಯ ಅವರ ತಾಯಿ ಶಿಕ್ಷಕರಾಗಿ (School) ಶಾಲೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಅಲ್ಲದೆ ಅದೇ ಶಾಲೆಯಲ್ಲಿ ಅಮೂಲ್ಯ ಗೌಡ ಕೂಡ ಓದುತ್ತಿದ್ದರಿಂದ ತಾಯಿಯೊಂದಿಗೆ ಬಹು ಗಟ್ಟಿಯಾದ ಬಾಂಡ್ ಬೆಳೆಸಿಕೊಂಡಿರುತ್ತಾರೆ. ಶಾಲೆಯಲ್ಲಿಯೂ ಮನೆಯಲ್ಲಿಯೂ ತಾಯಿಯನ್ನು ಬಿಟ್ಟು ಇರುತ್ತಲೇ ಇರಲಿಲ್ಲವಂತೆ. ಇಂತಹ ಸಂದರ್ಭದಲ್ಲಿ ಅಮೂಲ್ಯ ತಾಯಿಗೆ ಕಿಡ್ನಿ ಫೇಲ್ಯೂರ್ ಆಗಿ ಏಳುವರೆ ವರ್ಷಗಳ ಕಾಲ ಡಯಾಲಿಸಿಸ್ನಲ್ಲಿ ಇರುತ್ತಾರೆ.
ಚಿಕಿತ್ಸೆ ಫಲಕಾರಿಯಾಗದೆ ಅಮೂಲ್ಯ ಗೌಡ ಹತ್ತನೇ ತರಗತಿಯಲ್ಲಿರುವಾಗ ಅವರ ತಾಯಿ ತೀರಿ ಹೋದರು. ಹೀಗಾಗಿ ಸೀರಿಯಲ್ನಲ್ಲಿ ತಾಯಿಯ ಪಾತ್ರ ಬಂದರೆ ನನಗೆ ಅದು ಬಹಳ ಕನೆಕ್ಟ್ ಆಗುತ್ತದೆ ನಾನು ಸಾಮಾನ್ಯವಾಗಿ ಅಳೋದಿಲ್ಲ ಆದರೆ ತಾಯಿಯ ಸೀನ್ಗಳಿರುವ ಸಂದರ್ಭದಲ್ಲಿ ಕಣ್ನೀರು ಬರುತ್ತದೆ ಎಂದು ಅಮೂಲ್ಯ ಗೌಡ ಭಾವಕರಾದರು.
Kannada Kamali Serial Fame Actress Amulya Gowda Real Life Story Goes Viral