ಅಂಗಲಾಚಿ ಬೇಡಿದ್ರೂ ಅವಕಾಶ ಸಿಕ್ತಿಲ್ಲ ಎಂದು ಭಾವುಕರಾದ ಯಜಮಾನ ಸಿನಿಮಾದ ಅಮ್ಮಮ್ಮ ನಟಿ ಲಕ್ಷ್ಮೀದೇವಿ! ಅವರ ಕಥೆ ಕೇಳಿದ್ರೆ ಕಣ್ಣೀರು ಬರುತ್ತೆ

ವಿಷ್ಣುವರ್ಧನ್ ಅವರ ಯಜಮಾನ ಸಿನಿಮಾದ ಅಮ್ಮಮ್ಮ ಎಂದರೆ ಆ ನಟಿಯ ಅದ್ಭುತ ಅಭಿನಯ ತರ್ಲೆ ಹಾಗೂ ಮುಗ್ಧತನ ಕಣ್ಣ ಮುಂದೆ ಬಂದು ಬಿಡುತ್ತೆ. ಹೀಗೆ 1934 ರಲ್ಲಿ ಜನಿಸಿದ ಎಂ ಎನ್ ಲಕ್ಷ್ಮಿ ಅವರ ವಯಸ್ಸು ಸದ್ಯ 89 ವರ್ಷಗಳಾಗಿವೆ.

ಸ್ನೇಹಿತರೆ 60 ವರ್ಷಗಳ ತಮ್ಮ ಸಿನಿ ಜರ್ನಿಯಲ್ಲಿ ಒಂದು ಸಾವಿರಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಅಭಿನಯಿಸಿದಂತಹ ನಟಿ ಎಂಎನ್ ಲಕ್ಷ್ಮೀದೇವಿ (Actress MN Lakshmi Devi) ಎಂದೊಡನೆ ಯಾರಿಗೂ ಅಷ್ಟು ಬೇಗ ನೆನಪಾಗುವುದಿಲ್ಲ.

ಬದಲಿಗೆ ಡಾ ವಿಷ್ಣುವರ್ಧನ್ ಅವರ ಯಜಮಾನ ಸಿನಿಮಾದ (Yajamana Kannada Cinema) ಅಮ್ಮಮ್ಮ ಎಂದರೆ ಆ ನಟಿಯ ಅದ್ಭುತ ಅಭಿನಯ ತರ್ಲೆ ಹಾಗೂ ಮುಗ್ಧತನ ಕಣ್ಣ ಮುಂದೆ ಬಂದು ಬಿಡುತ್ತೆ. ಹೀಗೆ 1934 ರಲ್ಲಿ ಜನಿಸಿದ ಎಂ ಎನ್ ಲಕ್ಷ್ಮಿ ಅವರ ವಯಸ್ಸು ಸದ್ಯ 89 ವರ್ಷಗಳಾಗಿವೆ.

ಸಿನಿಮಾ ರಂಗಕ್ಕೆ ಅತಿ ಚಿಕ್ಕ ವಯಸ್ಸಿಗೆ ಎಂಟ್ರಿ ಕೊಟ್ಟ ಲಕ್ಷ್ಮಿ ದೇವಿಯವರು ನೃತ್ಯ ಗಾರ್ತಿಯಾಗಿಯೂ ಕನ್ನಡ ಸಿನಿಮಾ ರಂಗದಲ್ಲಿ (Kannada Film Industry) ಗುರುತಿಸಿಕೊಂಡಿದ್ದಾರೆ. ಅಲ್ಲದೆ ಶ್ರೀನಿವಾಸ ಕಲ್ಯಾಣ ಎಂಬ ಸಿನಿಮಾದಲ್ಲಿ ನರಸಿಂಹ ರಾಜು ಅವರೊಂದಿಗೆ ಪ್ರಪ್ರಥಮ ಬಾರಿಗೆ ಅಭಿನಯಿಸುವ ಮೂಲಕ ಬಣ್ಣದ ಪಯಣವನ್ನು ಲಕ್ಷ್ಮಿದೇವಿ ಶುರು ಮಾಡಿದರು. ಹೀಗೆ 1953ರಲ್ಲಿಯೇ ಲಕ್ಷ್ಮೀದೇವಿ ಸಾಕಷ್ಟು ಸಿನಿಮಾಗಳ ಅವಕಾಶವನ್ನು ಪಡೆದುಕೊಂಡರು.

ಅಂಗಲಾಚಿ ಬೇಡಿದ್ರೂ ಅವಕಾಶ ಸಿಕ್ತಿಲ್ಲ ಎಂದು ಭಾವುಕರಾದ ಯಜಮಾನ ಸಿನಿಮಾದ ಅಮ್ಮಮ್ಮ ನಟಿ ಲಕ್ಷ್ಮೀದೇವಿ! ಅವರ ಕಥೆ ಕೇಳಿದ್ರೆ ಕಣ್ಣೀರು ಬರುತ್ತೆ - Kannada News

ನಿಮ್ಮ ಕೂದಲು ತುಂಬಾ ಉದುರಿದೆ, ಕಾಡ್ನಲ್ಲಿ ಒಂದು ಸೊಪ್ಪು ಸಿಕ್ತದೆ ಎಂಬ ಡೈಲಾಗ್ ಮೂಲಕ ಪೇಮಸ್ ಆದ ನಟಿ ಶೀಲ ಕಾಂತಾರ ಸಿನಿಮಾಗೆ ಪಡೆದ ಸಂಭಾವನೆ ಎಷ್ಟು ಗೊತ್ತೇ?

ಆಗಿನ ಕಾಲ ಘಟ್ಟದಲ್ಲಿ ಕನ್ನಡ ಚಿತ್ರರಂಗ ಆಗಸ್ಟೇ ಕಣ್ಣು ಬಿಡುತ್ತಿದ್ದಂತಹ ಸಂದರ್ಭದಲ್ಲಿ ಲಕ್ಷ್ಮೀದೇವಿ ಅವರು ಅಭಿನಯಸೋಕೆ ಶುರು ಮಾಡಿದರು. ಹೀಗೆ ನಾಯಕ ನಟಿಯಾಗಿ, ನಾಯಕ ನಟಿಯ ಗೆಳತಿಯಾಗಿ, ಸಹ ನಟಿಯಾಗಿ, ಪೋಷಕ ನಟಿಯಾಗಿ ಸಿನಿಮಾ ರಂಗದಲ್ಲಿ ತಮ್ಮ ಅಮೋಘ ಅಭಿನಯದ ಮೂಲಕ ಹಲವಾರು ವರ್ಷಗಳ ಕಾಲ ನಿಸ್ವಾರ್ಥ ಸೇವೆ ಸಲ್ಲಿಸಿದ ಈ ನಟಿ ಯಜಮಾನ ಸಿನಿಮಾದ ಅಮ್ಮಮ್ಮ ಪಾತ್ರದಿಂದಾಗಿ ಬಾರಿ ಫೇಮಸ್ ಆದರು.

ಈ ಸಿನಿಮಾದ ಮುಖಾಂತರ ಇನ್ನಷ್ಟು ಪೋಷಕ ಪಾತ್ರಗಳ ಅವಕಾಶಗಳು ನಟಿ ಲಕ್ಷ್ಮಿ ದೇವಿ ಅವರನ್ನು ಹರಸಿ ಬಂದವು. ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ಅಜ್ಜಿಯ ಪಾತ್ರದ ಮೂಲಕ ಗುರುತಿಸಿಕೊಂಡ ಲಕ್ಷ್ಮಿ ದೇವಿಯವರು ರಾಮಕೃಷ್ಣ, ಗಾಳಿಗೋಪುರ, ವೀರ ಕೇಸರಿ, ಕುಟುಂಬ, ಟಗರು, ರಾಜಹುಲಿ ಹೀಗೆ ಮುಂತಾದ ಸಿನಿಮಾಗಳಲ್ಲಿ ಅಜ್ಜಿಯಾಗಿಯೇ ಮನಸ್ಸನ್ನು ಗೆದ್ದರು.

ಆ ಅಂಗ ಈಗ ದೊಡ್ಡದಾಗಿದೆ ಎಂದು ಕಾಮೆಂಟ್ ಮಾಡಿದ ನೆಟ್ಟಿಗನಿಗೆ ನಟಿ ನಿತ್ಯಾ ಮೆನನ್ ಕೊಟ್ಟ ಖಡಕ್ ಉತ್ತರ ಹೇಗಿತ್ತು ಗೊತ್ತಾ? ಅಷ್ಟಕ್ಕೂ ಒಂದೇ ಮಾತಿಗೆ ಬಾಯಿ ಮುಚ್ಚಿಸಿದ ನಟಿ ಹೇಳಿದ್ದೇನು?

ಹೀಗೆ ಸಂದರ್ಶನ ಒಂದರಲ್ಲಿ ಅವಕಾಶಗಳ ಕುಂಟಿತದ ಕುರಿತು ಮಾತನಾಡಿದ ಲಕ್ಷ್ಮಿದೇವಿ ನನಗೆ ವಯಸ್ಸಾಗಿದೆ ಎಂದು ಮೂಲೆಗುಂಪು ಮಾಡಬೇಡಿ. ನನ್ನಲ್ಲಿ ಇನ್ನು ಅಭಿನಯಿಸುವಂತಹ ಸಾಮರ್ಥ್ಯವಿದೆ ಎಂದಿದ್ದರು.

Kannada Senior Actress MN Lakshmi Deviಇದರ ಜೊತೆಗೆ ಸಿನಿಮಾ ರಂಗದ ಕರಾಳತೆಯನ್ನು ಹೊರಹಾಕಿದ ಲಕ್ಷ್ಮಿ ದೇವಿ ಹಿಂದೆಲ್ಲಾ ಶೂಟಿಂಗ್ ಸೆಟ್ಟಿಗೆ ಹೋಗಬೇಕಾದರೆ ಎಲ್ಲಿಲ್ಲದಂತಹ ಹುಮ್ಮಸ್ಸು ಖುಷಿ ಎಲ್ಲವೂ ನನ್ನೊಳಗೆ ಬಂದುಬಿಡುತ್ತಿತ್ತು. ಆದರೆ ಈಗಿನ ಸಿನಿಮಾದವರು ಹಾಗಿಲ್ಲ. ಅಣ್ಣಾವ್ರ ಹಾಗೂ ವಿಷ್ಣುವರ್ಧನ್ ಅವರ ಕಾಲದಲ್ಲಿ ಬಿಡುವಿದ್ದಾಗಲಿಲ್ಲ ಅವರೊಂದಿಗೆ ಕುಳಿತು ಮಾತನಾಡುತ್ತಿದ್ವಿ, ಊಟ ಮಾಡ್ತಿದ್ವಿ, ಇಸ್ಪೀಟು ಮುಂತಾದ ಆಟಗಳನ್ನೆಲ್ಲ ಆಡ್ತಿದ್ವಿ.

ಪಡ್ಡೆ ಹುಡುಗರ ಡ್ರೀಮ್ ಗರ್ಲ್ ಆಗಿದ್ದ ನಟಿ ಸಿಲ್ಕ್ ಸ್ಮಿತಾ ನಂಬಿಸಿ ಮೋಸ ಮಾಡಿದವರಿಗೆ ಪಾಠ ಕಲಿಸಿದ್ದು ಹೇಗೆ? ಆಕೆ ನೀಡುತ್ತಿದ್ದ ಘೋರ ಶಿಕ್ಷೆ ಏನು ಗೊತ್ತಾ?

ಆದರೆ ಒಂದು ಹಂತದವರೆಗೂ ಅಂದರೆ ಶಿವಣ್ಣ ಉಪೇಂದ್ರ ಅವರ ಕಾಲದವರೆಗೂ ಇದ್ದ ಸಿನಿಮಾ ರಂಗವೇ ಬೇರೆ ಆನಂತರ ಬದಲಾಗುತ್ತಿರುವ ಸಿನಿಮಾ ಇಂಡಸ್ಟ್ರಿಯೇ ಬೇರೆ. ಹಿರಿಯರು ಎಂಬ ಅಲ್ಪ ಗೌರವವನ್ನು ನಮಗೆ ನೀಡುವುದಿಲ್ಲ ಮೂಲೆಗುಂಪು ಮಾಡುತ್ತಾರೆ, ಸಣ್ಣ ಪಾತ್ರಧಾರಿ ಎಂದು ನಮ್ಮನ್ನು ನೆಗ್ಲೆಕ್ಟ್ ಮಾಡುತ್ತಾರೆ. ನಮ್ಮ ಟೈಮ್ ಬಂದಾಗ ನಾವು ಹೋಗ್ತಿವಿ ಅಭಿನಯಿಸುತ್ತೀವಿ ಬರ್ತೀವಿ ಆ ಸಿನಿಮಾ ತಂಡದ ಜೊತೆಗೆ ಸಣ್ಣ ಬಾಂಡ್ ಕೂಡ ಸೃಷ್ಟಿಯಾಗುವುದಿಲ್ಲ.

ಆದರೆ ಯಜಮಾನ ಟೈಮಿನಲ್ಲಿ ಆಗಿರ್ಲಿಲ್ಲ ಸಿನಿಮಾ ಮುಗಿದಾಗ ಪ್ರತಿಯೊಬ್ಬರಿಗೂ ಬೇಸರವಾಗಿತ್ತು. ನನ್ನನ್ನು ಅವರ ಮನೆಯ ಸದಸ್ಯರಂತೆ ನೋಡಿಕೊಂಡರು. ಯಾವುದೇ ಹಂತದಲ್ಲಿಯೂ ಬೇಸರವಾಗಿರಲಿಲ್ಲ ಎಂದು ಲಕ್ಷ್ಮೀದೇವಿ ಬದಲಾಗುತ್ತಿರುವ ಸಿನಿ ಬದುಕಿನ ಕರಾಳ ಮುಖದ ಪರಿಚಯ ಮಾಡಿದರು.

ಹೆಚ್ಚು ಮೇಕಪ್ ಧರಿಸದೆ, ಅಂಗಾಂಗ ಪ್ರದರ್ಶಿಸದೆ ಅಷ್ಟೇ ಬೇಡಿಕೆಯನ್ನು ಉಳಿಸಿಕೊಂಡಿರುವ ನಟಿ ಸಾಯಿ ಪಲ್ಲವಿ ಸಂಪಾದಿಸಿರುವ ಒಟ್ಟು ಆಸ್ತಿ ಎಷ್ಟು ಗೊತ್ತಾ?

ಇದರ ಜೊತೆಗೆ ವಯಸ್ಸಾದ ಕಾಲದಲ್ಲಿ ಇತರರ ಮೇಲೆ ಅವಲಂಬನೆಯಾಗಲು ಇಷ್ಟಪಡದ ಲಕ್ಷ್ಮಿ ದೇವಿಯವರು ನನಗೆ ಇನ್ನೂ ವಯಸ್ಸಾಗಿಲ್ಲ ಅವಕಾಶ ಕೊಟ್ಟರೆ ಜೀವನ್ಪರಿಯಂತ ನನ್ನ ಜವಾಬ್ದಾರಿಗಳನ್ನು ನಾನೇ ಪೂರೈಸಿಕೊಳ್ಳುತ್ತೇನೆ ಎಂದು ಕೇಳಿಕೊಂಡಿದ್ದಾರೆ. ಇಂತಹ ಇಳಿಯ ವಯಸ್ಸಿನಲ್ಲಿಯೂ ಅಭಿನಯಿಸಬೇಕು ಎಂಬ ಇವರ ಛಲವನ್ನು ಪ್ರತಿಯೊಬ್ಬ ಕನ್ನಡಿಗರು ಮೆಚ್ಚಲೇಬೇಕು.

Interesting Facts About Kannada Senior Actress MN Lakshmi Devi

Follow us On

FaceBook Google News

Interesting Facts About Kannada Senior Actress MN Lakshmi Devi