ಆ ಅಂಗ ಈಗ ದೊಡ್ಡದಾಗಿದೆ ಎಂದು ಕಾಮೆಂಟ್ ಮಾಡಿದ ನೆಟ್ಟಿಗನಿಗೆ ನಟಿ ನಿತ್ಯಾ ಮೆನನ್ ಕೊಟ್ಟ ಖಡಕ್ ಉತ್ತರ ಹೇಗಿತ್ತು ಗೊತ್ತಾ? ಅಷ್ಟಕ್ಕೂ ಒಂದೇ ಮಾತಿಗೆ ಬಾಯಿ ಮುಚ್ಚಿಸಿದ ನಟಿ ಹೇಳಿದ್ದೇನು?

ನಟಿ ನಿತ್ಯ ಮೆನನ್ ಅವರು ತಾವು ತಿನ್ನುತ್ತಿರುವುದರಿಂದಾಗಲಿ ಅಥವಾ ಹೆಚ್ಚಿನ ಕೆಲಸ ಮಾಡದೆ ಇರುವುದರಿಂದಾಗಲಿ ತಮ್ಮ ತೂಕ ಏರಿಕೆ ಆಗುತ್ತಿಲ್ಲ, ಬದಲಿಗೆ ಆ ಒಂದು ಸಮಸ್ಯೆ ನನ್ನನ್ನು ಕಾಡುತ್ತಿದೆ ಎಂಬ ಪ್ರತಿಕ್ರಿಯೆ ನೀಡಿದರು

Bengaluru, Karnataka, India
Edited By: Satish Raj Goravigere

ದಕ್ಷಿಣ ಭಾರತದ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮ ಅಮೋಘ ಅಭಿನಯ ಹಾಗೂ ಗಾಯನದ ಮೂಲಕ ಬಾರಿ ಹೆಸರುವಾಸಿಯಾಗಿರುವ ನಿತ್ಯಾ ಮೆನನ್ (Actress Nithya Menen) 2006ರಲ್ಲಿ ತೆರೆಕಂಡ ಕನ್ನಡದ 7 ಓ ಕ್ಲಾಕ್ ಎಂಬ ಸಿನಿಮಾದಲ್ಲಿ (Kannada Cinema) ಪೋಷಕ ಪಾತ್ರವೊಂದರಲ್ಲಿ ಅಭಿನಯಿಸುವ ಮೂಲಕ ತಮ್ಮ 17ನೇ ವಯಸ್ಸಿಗೆ ಬಣ್ಣದ ಲೋಕಕ್ಕೆ ಪಾದರ್ಪಣೆ ಮಾಡಿದಂತಹ ನಟಿ. ಇದಾದ ಬಳಿಕ ಒಂದರ ಮೇಲೊಂದರಂತೆ ಹಿಟ್ ಸಿನಿಮಾಗಳ ಅವಕಾಶ ನಿತ್ಯಾ ಮೆನನ್ ಅವರನ್ನು ಹರಸಿ ಬಂದವು.

ಹೀಗೆ ಸಿಕ್ಕಂತಹ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಂತಹ ನಿತ್ಯ ಅವರು ಅತಿ ಕಡಿಮೆ ಅವಧಿಯಲ್ಲಿ ಬಹು ಬೇಡಿಕೆಯ ನಟಿಯಾಗಿ ಹೊರಹೊಮ್ಮಿದರು.

Interest Facts About Actress Nithya Menen and Reaction For Netizen Comments Goes Viral

ಹೀಗೆ ಸಾಲು ಸಾಲು ಸಿನಿಮಾಗಳ ಅವಕಾಶ ಇರುವಾಗಲೇ ನಿತ್ಯಾ ಮೆನನ್ ಅವರ ತೂಕ ಏರಿಕೆ, ಸದ್ಯ ಅವಕಾಶಗಳ ಕುಂಠಿತಕ್ಕೆ ಕಾರಣವಾಗುತ್ತಿದೆ. ಹೌದು ಕಳೆದ ಕೆಲವು ವರ್ಷಗಳಿಂದ ನಟಿ ನಿತ್ಯಾ ಮೆನನ್ ಅವರು ತೀರ ದಪ್ಪ ಆಗುತ್ತಿದ್ದು, ಇದರಿಂದ ಒಳ್ಳೊಳ್ಳೆ ಅವಕಾಶಗಳು ಅವರ ಕೈತಪ್ಪಿ ಹೋಗುತ್ತಿರುವುದು ಅಕ್ಷರಶಃ ಸತ್ಯವಾಗಿದೆ.

ಪಡ್ಡೆ ಹುಡುಗರ ಡ್ರೀಮ್ ಗರ್ಲ್ ಆಗಿದ್ದ ನಟಿ ಸಿಲ್ಕ್ ಸ್ಮಿತಾ ನಂಬಿಸಿ ಮೋಸ ಮಾಡಿದವರಿಗೆ ಪಾಠ ಕಲಿಸಿದ್ದು ಹೇಗೆ? ಆಕೆ ನೀಡುತ್ತಿದ್ದ ಘೋರ ಶಿಕ್ಷೆ ಏನು ಗೊತ್ತಾ?

ಈ ಕುರಿತು ಸಂದರ್ಶನ ಒಂದರಲ್ಲಿ ಮಾತನಾಡಿರುವ ನಿತ್ಯಾ ಮೆನನ್ ಅವರು ತಾವು ತಿನ್ನುತ್ತಿರುವುದರಿಂದಾಗಲಿ ಅಥವಾ ಹೆಚ್ಚಿನ ಕೆಲಸ ಮಾಡದೆ ಇರುವುದರಿಂದಾಗಲಿ ತಮ್ಮ ತೂಕ ಏರಿಕೆ ಆಗುತ್ತಿಲ್ಲ, ಬದಲಿಗೆ ಆ ಒಂದು ಸಮಸ್ಯೆ ನನ್ನನ್ನು ಕಾಡುತ್ತಿದೆ ಎಂಬ ಪ್ರತಿಕ್ರಿಯೆ ನೀಡಿದರು, ಹಾಗಾದ್ರೆ ಬಳಕುವ ಬಳ್ಳಿಯಂತಿದ್ದ ನಿತ್ಯ ಮೆನನ್ ಧಿಡೀರ್ ದಪ್ಪ ಆಗಲು ಕಾರಣವಾದರೂ ಏನು ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ಬೆಂಗಳೂರಿನ (Bengaluru) ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ (Mount Carmel College) ಪಿಯು ಪದವಿ ಪಡೆದ ನಿತ್ಯ ಮೆನನ್ ಹೈಯರ್ ಎಜುಕೇಶನ್ಗಾಗಿ ಮಣಿಪಾಲ್ ಅಕಾಡೆಮಿಗೆ ಸೇರ್ಪಡೆಗೊಳ್ಳುತ್ತಾರೆ. ಚಿಕ್ಕಂದಿನಿಂದಲೂ ನಟನೆಯ ಮೇಲೆ ಬಹಳಾನೇ ಆಸಕ್ತಿ ಇದ್ದ ಕಾರಣ 1998ರಿಂದ 2002ರ ವರೆಗೂ ಬಾಲ ನಟಿಯಾಗಿ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿದ್ದ ಇವರು 2006ರಲ್ಲಿ ಸಹನಟಿಯಾಗಿ ಕನ್ನಡದ ಒಂದು ಸಿನಿಮಾದಲ್ಲಿ (Kannada Movie) ಅಭಿನಯಿಸುವ ಮೂಲಕ ಪೂರ್ಣ ಪ್ರಮಾಣದ ನಟಿಯಾಗಿ ಎಂಟ್ರಿ ಕೊಟ್ಟ ಮೇಲೆ ಅವಕಾಶಗಳ ಸುರಿಮಳೆಯೇ ಹರಿದು ಬಂದವು ಎಂದರೆ ತಪ್ಪಾಗಲಿಕ್ಕಿಲ್ಲ.

48 ವರ್ಷ ವಯಸ್ಸಾದರೂ ನಟಿ ನಗ್ಮಾ ಮದುವೆಯಾಗದೆ ಒಂಟಿಯಾಗಿರುವುದು ಯಾಕೆ? ಆಕೆಯ ಬಾಳಲ್ಲಿ ಬಂದು ಹೋದ 4 ಸ್ಟಾರ್ ಸೆಲೆಬ್ರಿಟಿಗಳು ಯಾರ್ಯಾರು ಗೊತ್ತಾ?

ಹೌದು ಗೆಳೆಯರೇ 7 ಓ ಕ್ಲಾಕ್ ಸಿನಿಮಾದ ನಂತರ ನಿತ್ಯಾ ಮೆನನ್ ಆವರಿಗೆ ಮಲಯಾಳಂನ ಆಕಾಶ ಗೋಪುರ ಎಂಬ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ದೊರಕುತ್ತದೆ. ಕನ್ನಡದಲ್ಲಿ ಜೋಶ್, ಐದೊಂದ್ಲ ಐದು, ಮೈನಾ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಕೋಟಿಗೊಬ್ಬ 2 ದಂತಹ ಸಿನಿಮಾಗಳಲ್ಲಿ ಅಭಿನಯಿಸಿ ಬಾರಿ ಪ್ರಖ್ಯಾತಿಯನ್ನು ಪಡೆದುಕೊಂಡರು.

Actress Nithya Menen
Image Source: The Indian Express

ಕನ್ನಡದ ಕೇವಲ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ಅಭಿನಯಿಸಿರುವ ನಿತ್ಯ ಮೆನನ್ ತಮಿಳು, ತೆಲುಗು ಹಾಗು ಮಲಯಾಳಂ ಭಾಷೆಯಲ್ಲಿ ವಿಶೇಷ ಬೇಡಿಕೆಯನ್ನು ಹೊಂದಿದ್ದಾರೆ.

ಮಿಷಿನ್ ಮಜನೂ ಮೂಲಕ ಬಾಲಿವುಡ್ (Bollywood) ಅಂಗಳದಲ್ಲಿ ಸದ್ದು ಮಾಡಿದ್ದ ಈ ನಟಿ, ಸಾಕಷ್ಟು ವೆಬ್ ಸೀರೀಸ್ ನಲ್ಲಿಯೂ ಕಾಣಿಸಿಕೊಳ್ಳುವ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದರು. ಹೀಗೆ ಅದೊಂದು ಕಾಲದಲ್ಲಿ ನೋಡಲು ಬಹಳ ಸಣ್ಣಗಿದ್ದ ನಿತ್ಯ ದಿನ ಕಳೆದಂತೆ ತಮ್ಮ ತೂಕವನ್ನು ಏರಿಸಿಕೊಳ್ಳುತ್ತಿರುವುದು ನಟ್ಟಿಗರ ಟ್ರೋಲ್ ಗಳಿಗೆ ಕಾರಣವಾಗುತ್ತಿದೆ. ಅತಿಯಾಗಿ ತಿನ್ನುವುದನ್ನು ಬಿಡಿ ಸ್ವಲ್ಪ ಮೈ ಬಗ್ಗಿಸಿ ಕೆಲಸ ಮಾಡಿ ಎಂದೆಲ್ಲ ನಕಾರಾತ್ಮಕವಾಗಿ ಕಾಮೆಂಟ್ ಮಾಡ ತೊಡಗಿದರು.

ಹೆಚ್ಚು ಮೇಕಪ್ ಧರಿಸದೆ, ಅಂಗಾಂಗ ಪ್ರದರ್ಶಿಸದೆ ಅಷ್ಟೇ ಬೇಡಿಕೆಯನ್ನು ಉಳಿಸಿಕೊಂಡಿರುವ ನಟಿ ಸಾಯಿ ಪಲ್ಲವಿ ಸಂಪಾದಿಸಿರುವ ಒಟ್ಟು ಆಸ್ತಿ ಎಷ್ಟು ಗೊತ್ತಾ?

ಇದಕ್ಕೆ ತಮ್ಮದೇ ದಾಟಿಯಲ್ಲಿ ಉತ್ತರಿಸಿರುವ ನಿತ್ಯಾ ಮೆನನ್’ನಾವು ದಪ್ಪ ಆಗಿದ್ದೇವೆ ಎಂದರೆ ಅದಕ್ಕೆ ನಾವು ಅತಿ ತಿನ್ನುತ್ತಿದ್ದೇವೆ ಅಥವಾ ಸೋಮಾರಿಗಳಾಗಿದ್ದೇವೆ ಎಂದಲ್ಲ, ಕಲಾವಿದರು ಯಾವತ್ತೂ ಸೋಮಾರಿಗಳಾಗುವುದಿಲ್ಲ ಕೆಲ ಹಾರ್ಮೋನಲ್ ಸಮಸ್ಯೆಯಿಂದಾಗಿ ಕೂಡ ದಪ್ಪಗಾಗಬಹುದು, ನಟನೆ ಅನ್ನೋದು ನಮ್ಮ ಜೀವನದ ಒಂದು ಭಾಗವೇ ಹೊರತು ಜೀವನವಲ್ಲ, ಇದಕ್ಕಿಂತ ಮಿಗಿಲಾದದ್ದು ಇದೆ’ ಎಂದು ನಿತ್ಯ ಮೆನನ್ ತಮ್ಮನ್ನು ಟ್ರೋಲ್ಗಳ ಮೂಲಕ ಟೀಕಿಸುತ್ತಿರುವವರಿಗೆ ಉತ್ತರಿಸಿದರು.

ಇನ್ನೊಂದೆಡೆ ಈ ಹಿಂದೆ ನಿತ್ಯ ಅವರು ದಪ್ಪ ಆಗಿರುವ ಕಾರಣ, ನೆಟ್ಟಿಗನೊಬ್ಬ, ಅವರ ಅಂಗಗಳ ಮೇಲು ಕಮೆಂಟ್ ಮಾಡಿದ್ದನು.

ಆ ಅಂಗ ಈಗ ದೊಡ್ಡದಾಗಿದೆ ಎಂದು ಹೇಳಿದ್ದನು, ನಿತ್ಯ ಮೆನನ್ ಅವರು ಇದಕ್ಕೆ ಬೇಸರ ಪಟ್ಟುಕೊಳ್ಳದೆ, ಆತನಿಗೆ ನಾಚಿಕೆ ಆಗುವ ಹಾಗೆ ಖಡಕ್ ಆಗಿ ಉತ್ತರ ಕೊಟ್ಟಿದ್ದಾರೆ. ನಾನೇನು ಮನೆಯಲ್ಲಿ ಕುಳಿತು ದಪ್ಪ ಆಗಿಲ್ಲ, ದಪ್ಪ ಆಗಿರುವುದರ ಹಿಂದೆ ಸಾಕಷ್ಟು ಕಾರಣಗಳಿಗೆ. ಅದೆಲ್ಲವನ್ನು ಹೇಳಲು ಆಗುವುದಿಲ್ಲ ಎಂದು ಹೇಳಿದ್ದಾರೆ ನಿತ್ಯ ಮೆನನ್.

ಅಣ್ಣಾವ್ರ ಬ್ಲಾಕ್ ಅಂಡ್ ವೈಟ್ ಕಸ್ತೂರಿ ನಿವಾಸ ಸಿನಿಮಾ ಅಂದಿನ ಕಾಲದಲ್ಲಿ ಮಾಡಿದ್ದ ಕಲೆಕ್ಷನ್ ಎಷ್ಟು ಕೋಟಿ ಗೊತ್ತಾ?

ನಿತ್ಯ ಅವರು ಕೊಟ್ಟ ಈ ಉತ್ತರಕ್ಕೆ ಆತ ಬಾಯಿಮುಚ್ಚಿಕೊಂಡು ಸುಮ್ಮನಾಗಿದ್ದಾನೆ. ನಿಜಕ್ಕೂ ನಿತ್ಯಾ ಮೆನನ್ ಅವರ ಧೈರ್ಯವನ್ನು ಮೆಚ್ಚಿಕೊಳ್ಳಬೇಕು. ನಟಿಯರ ಬಗ್ಗೆ ಈ ರೀತಿ ಅಸಭ್ಯ ಪ್ರಶ್ನೆಗಳನ್ನು ಕೇಳುವುದು ಸಹ ಕಡಿಮೆ ಆಗಬೇಕು.

Interest Facts About Actress Nithya Menen and Reaction For Netizen Comments Goes Viral