ನಟಿ ನಗ್ಮಾ (Actress Nagma) ಸಲ್ಮಾನ್ ಖಾನ್ ನಂತಹ ಟಾಪ್ ಹೀರೋ ಒಟ್ಟಿಗೆ ತಮ್ಮ ಮೊದಲ ಸಿನಿಮಾದಲ್ಲಿಯೇ ತೆರೆ ಹಂಚಿಕೊಳ್ಳುವಂತಹ ಭಾಗ್ಯವನ್ನು ಕಲ್ಪಿಸಿಕೊಂಡು ಕ್ರಮೇಣ ದಕ್ಷಿಣ ಕನ್ನಡದ ಸೂಪರ್ ಸ್ಟಾರ್ ನಟಿಯಾಗಿ ಹೊರಹೊಮ್ಮಿದವರು.
ತಮಿಳಿನಾ ಖ್ಯಾತ ನಟಿ ಜ್ಯೋತಿಕ ಅವರು ನಗ್ಮಾ ಅವರ ಕಸಿನ್ ಸಿಸ್ಟರ್ ಎಂಬುದು ಇಂದಿಗೂ ಅದೆಷ್ಟೋ ಜನರಿಗೆ ತಿಳಿದಿಲ್ಲ. ಹೀಗೆ ಬಾಲಿವುಡ್ (Bollywood) ಹಾಗೂ ದಕ್ಷಿಣ ಕನ್ನಡ ಸಿನಿಮಾ ರಂಗದಲ್ಲಿ (Kannada Cinema Industry) ತಮ್ಮ ನಟನೆಯ ಮೂಲಕ ಸದ್ದು ಮಾಡಿದ ನಗ್ಮಾ ಅವರ ಕುರಿತು ಯಾರಿಗೂ ತಿಳಿಯದಂತಹ ಕೆಲ ಅಸಲಿ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿಸುವ ಹೊರಟಿದ್ದು, ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲ ಇದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ ನಗ್ಮಾ ಅವರ ತಾಯಿ ಹಾಗೂ ತಂದೆ ಇಬ್ಬರು ಸಿನಿಮಾ ರಂಗದಲ್ಲಿ ತೊಡಗಿಕೊಂಡಿದ್ದ ಕಾರಣ ನಗ್ಮಾ ಅವರಿಗೆ ಸಿನಿ ಬದುಕು ಅಷ್ಟು ಕಷ್ಟಕರವಾಗಿರಲಿಲ್ಲ. ಎಲ್ಲರೂ ನೋಡಲು ಬಹಳ ಚೆನ್ನಾಗಿದ್ದೀಯಾ ಯಾಕೆ ನೀನು ಸಿನಿಮಾ ರಂಗದಲ್ಲಿ ಅದೃಷ್ಟವನ್ನು ಪರೀಕ್ಷೆ ಮಾಡಬಾರದು ಎಂಬ ಸಲಹೆ ನೀಡುತ್ತಾರೆ. ಅದರಂತೆ ಅದಕ್ಕೆ ಬೇಕಾದಂತಹ ತಯಾರಿ ನಡೆಸಿಕೊಂಡು ನಗ್ಮಾ ಅವರು ಏಕಾಏಕಿ ಮೊದಲ ಸಿನಿಮಾದಲ್ಲಿ ಬಾಲಿವುಡ್ ಸಿನಿ ಪ್ರಪಂಚಕ್ಕೆ ಕಾಲಿಟ್ಟರು.
ಹೌದು 1991ರಲ್ಲಿ ತೆರೆಗೆ ಬಂದ ಸಲ್ಮಾನ್ ಖಾನ್ ಅವರ ಬಾಗಿ ಸಿನಿಮಾದ ಮೂಲಕ ನಗ್ಮಾ ಬಣ್ಣದ ಲೋಕಕ್ಕೆ ಡೆಬ್ಯೂ ಮಾಡಿದರು. ಇದಾದ ಬಳಿಕ ನಗ್ಮಾ ಅವರಿಗೆ ದಕ್ಷಿಣದಲ್ಲಿ ಸಾಕಷ್ಟು ಸಿನಿಮಾಗಳ ಅವಕಾಶ ದೊರಕುತ್ತದೆ.
92ರ ಇಸ್ವಿಯಲ್ಲಿ ಸೌತ್ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ನಗ್ಮಾ ಅವರಿಗೆ ಬರಪೂರ ಸ್ವಾಗತ ಸಿಗುತ್ತದೆ. ಹೀಗೆ ಬಂದಂತಹ ಎಲ್ಲಾ ಸಿನಿಮಾಗಳ ಅವಕಾಶವನ್ನು ಸ್ವೀಕರಿಸುತ್ತಾ ಚಿತ್ರಗಳಲ್ಲಿ ನಟಿಸುವುದರ ಜೊತೆಗೆ ರಾಜಕೀಯ ರಂಗಕ್ಕೂ ಪ್ರವೇಶ ಮಾಡಿದ ನಗ್ಮಾ, ತಮ್ಮ ವೃತ್ತಿ ಬದುಕಿನಲ್ಲಿ ಯಶಸ್ಸು ಕಂಡ ಹಾಗೆ ವೈಯಕ್ತಿಕ ಬದುಕಿನಲ್ಲಿ ಕಾಣಲಿಲ್ಲ.
ಹೌದು ಗೆಳೆಯರೇ 48 ವರ್ಷ ವಯಸ್ಸಾದರೂ ನಗ್ಮಾ ಇನ್ನೂ ಮದುವೆಯಾಗದೆ (Marriage) ಉಳಿದಿರುವುದು ಅದೆಷ್ಟೋ ಅಭಿಮಾನಿಗಳ ಮನಸ್ಸಿನಲ್ಲಿ ಕಾಡುತ್ತಿರುವಂತಹ ಪ್ರಶ್ನೆ ಇದಕ್ಕೆ ಉತ್ತರ ಹುಡುಕುತ್ತಾ ಹೋದವರಿಗೆ ಸಿಕ್ಕಿದ್ದು ಒಂದಲ್ಲ ಎರಡಲ್ಲ ಬರೋಬ್ಬರಿ ನಾಲ್ಕು ಪುರುಷರ ಹೆಸರು.
ಹೌದು ಗೆಳೆಯರೇ ಸಿನಿಮಾ ರಂಗದಲ್ಲಿ ಅವಕಾಶಗಳ ಸುರಿಮಳೆಯೇ ಇರುವಾಗ ನಟಿ ನಗ್ಮಾ, ಶರತ್ ಅವರೊಂದಿಗೆ ಹೆಚ್ಚು ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಲು ಶುರು ಮಾಡ್ತಾರೆ.
ಈ ಬೆಳವಣಿಗೆಗಳನ್ನು ಸಹಿಸಲಾಗದಂತಹ ಶರತ್ ಅವರ ಪತ್ನಿ ಚಾಯ ಅವರಿಂದ ವಿಚ್ಛೇದನ ಪಡೆದು ದೂರಾದರು. ಆ ವೇಳೆಗೆ ಸ್ಟಾರ್ ನಟಿ ಎಂಬ ಹೆಸರು ಪಡೆದಿದ್ದ ನಗ್ಮಾ ಅವರು ಅವರನ್ನು ಸಂಸಾರ ಒಡೆದ ನಟಿ ಎಂದು ಪ್ರತಿಬಿಂಬಿಸಲು ಪ್ರಾರಂಭಿಸಿದರು.
ಅಣ್ಣಾವ್ರ ಬ್ಲಾಕ್ ಅಂಡ್ ವೈಟ್ ಕಸ್ತೂರಿ ನಿವಾಸ ಸಿನಿಮಾ ಅಂದಿನ ಕಾಲದಲ್ಲಿ ಮಾಡಿದ್ದ ಕಲೆಕ್ಷನ್ ಎಷ್ಟು ಕೋಟಿ ಗೊತ್ತಾ?
ಈ ಕಾರಣದಿಂದ ಶರತ್ ಅವರೊಂದಿಗಿನ ರಿಲೇಷನ್ಶಿಪ್ಗೆ ನಗ್ಮಾ ಮಂಗಳ ಹಾಡಿದರು. ಇದಾದ ಬಳಿಕ ನಗ್ಮಾ ಅವರ ಹೆಸರು ತಳುಕು ಹಾಕಿಕೊಂಡಿದ್ದು ಕ್ರಿಕೆಟಿಗ ಗಂಗೂಲಿ ಅವರ ಹೆಸರಿನೊಂದಿಗೆ. ಆ ಕಾಲಕ್ಕೆ ಸೌರವ್ ಗಂಗುಲಿ ಅವರದ್ದು ಕ್ರಿಕೆಟ್ನಲ್ಲಿ ಅತಿ ದೊಡ್ಡ ಹೆಸರು.
ಆದರೆ ನಟಿ ನಗ್ಮಾ ಅವರೊಂದಿಗೆ ಒಡನಾಟದಿಂದ ಅವರ ಕುರಿತು ಟಿವಿ ಮಾಧ್ಯಮಗಳಲ್ಲಿ (TV Channel) ಕೆಟ್ಟದಾಗಿ ಪ್ರತಿಬಿಂಬಿಸಿದರು. ಹೀಗೆ ಸೌರವ್ ಗಂಗೂಲಿ ಹಾಗೂ ನಗ್ಮಾ ಆಂಧ್ರದ ದೇವಸ್ಥಾನ ಒಂದರಲ್ಲಿ ಮದುವೆಯಾಗಿದ್ದಾರೆ ಎಂಬ ಸುದ್ದಿಯು ವೈರಲ್ ಆಗಿತ್ತು.
ಆದರೆ ಅಧಿಕೃತವಾಗಿ ಮಾಧ್ಯಮದ ಮುಂದೆ ಬಂದು ಮಾತನಾಡಿದ ನಗ್ಮಾ ಇದೆಲ್ಲವೂ ವದಂತಿ ಎಂದು ಸ್ಪಷ್ಟೀಕರಿಸಿದರು. ಹೀಗೆ ಇದೆಲ್ಲದರಿಂದ ಹೊರ ಬರುವ ಕಾರಣದಿಂದ ನಗ್ಮಾ ಭೋಜಪುರಿ ಸಿನಿಮಾರಂಗದತ್ತ ಮುಖ ಮಾಡಿದರು.
ರವಿ ಕಿಶನ್ ಎಂಬ ನಟನೊಂದಿಗೆ ನಗ್ಮಾ ಸಿನಿಮಾ ಬಹುದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡರು. ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳು ಕೂಡ ನಗ್ಮಾ ಅವರ ಮುಡಿಗೇರಿದವು. ಈ ಹಂತದಲ್ಲಿ ನಗ್ಮ ಹಾಗೂ ರವಿ ಕಿಶನ್ ನಡುವೆ ಪ್ರೇಮ ಚಿಗುರೊಹೊಡೆಯುತ್ತದೆ.
ಆದರೆ ಕೆಲ ಹಂತದಲ್ಲಿ ಇವರಿಬ್ಬರ ನಡುವೆ ಮೂಡಿಬಂದ ಮನಸ್ತಾಪ ಹಾಗೂ ಕಲಹದಿಂದ ರವಿಕಿಶನ್ ನಗ್ಮಾ ಅವರಿಂದ ದೂರ ಉಳಿಯಲು ಪ್ರಯತ್ನ ಮಾಡುತ್ತಾರೆ. ಈ ವರ್ತನೆಯಿಂದ ವಿಚಲಿತರಾದಂತಹ ನಗ್ಮಾ ಸ್ಟಾರ್ ನಟ ಮನೋಜ್ ತಿವಾರಿ ಎಂಬುವರೊಂದಿಗೆ ರಿಲೇಷನ್ಶಿಪ್ ಬೆಳೆಸುತ್ತಾರೆ ಇದು ಕೂಡ ಹೆಚ್ಚು ದಿನಗಳ ಕಾಲ ಉಳಿಯುವುದಿಲ್ಲ.
Interesting Facts About Actress Nagma Real Life Story
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.