ಅಣ್ಣಾವ್ರ ಅಭಿನಯ ಶಂಕರ್ ನಾಗ್ ನಿರ್ದೇಶನ ಇದ್ರೂ ‘ಒಂದು ಮುತ್ತಿನ ಕಥೆ’ ಸಿನಿಮಾದ ಸೋಲಿಗೆ ಕಾರಣವೇನು? ಕೊನೆಗೆ ಗಳಿಸಿದ್ದು ಎಷ್ಟು ಲಕ್ಷ ಗೊತ್ತಾ?

ಅಣ್ಣಾವ್ರು ಮಾಲ್ಡೀವ್ಸ್ ನಲ್ಲಿನ ಸಮುದ್ರದೊಳಗೆ ಇಳಿದು ಮುತ್ತನ್ನು ಹುಡುಕುತ್ತಾ ಅಕ್ಟೋಪಸ್ಗಳೊಂದಿಗೆ ಫೈಟ್ ಮಾಡಿದಂತಹ ರೋಚಕ ದೃಶ್ಯಗಳನ್ನೆಲ್ಲ ಸೆರೆಹಿಡಿಯಲಾಗಿತ್ತು. ಸಿನಿಮಾದಲ್ಲಿ ನಟ ಶಂಕರ್ ನಾಗ್ ನಿರ್ದೇಶಕನಾಗಿ ತಮ್ಮ ಬುದ್ಧಿ ಶಕ್ತಿಯ ಪ್ರದರ್ಶನ ಮಾಡಿದ್ದರು

Bengaluru, Karnataka, India
Edited By: Satish Raj Goravigere

ಸ್ನೇಹಿತರೆ, ಸಮುದ್ರದಾಳದಲ್ಲಿ ಮುತ್ತನ್ನು ಹುಡುಕುವ ಕಥಾ ಹಂದರದ ಮೇಲೆ ತಯಾರಾದಂತಹ ಅಣ್ಣಾವ್ರು ಹಾಗೂ ಶಂಕರ್ ನಾಗ್ ಅವರ ಪ್ರಾಮಾಣಿಕ ಪ್ರಯತ್ನದ ‘ಒಂದು ಮುತ್ತಿನ ಕಥೆ’ ಸಿನಿಮಾ (Kannada Ondu Muttina Kathe Cinema) ಆಗಿನ ಕಾಲಕ್ಕೆ ಬಹು ದೊಡ್ಡ ಮಟ್ಟದ ನಿರೀಕ್ಷೆಯನ್ನು ಹುಟ್ಟಿ ಹಾಕಿತ್ತು.

ಹೀಗೆ ಜನರಲ್ಲಿ ಸಿನಿಮಾದ ಕುರಿತು ಬಹು ದೊಡ್ಡ ಮಟ್ಟದ ರೋಚಕತೆಯನ್ನು ಹೆಚ್ಚಿಸಿದ್ದರು, ಅಣ್ಣಾವ್ರ ಅಭಿನಯ ಹಾಗೂ ಸಮುದ್ರದೊಳಗಿನ ಸಾಹಸಗಳು ಸಿನಿಪ್ರೇಮಿಗಳನ್ನು ಥ್ರಿಲ್ ಮಾಡಿದ್ದರು ಕೂಡ ಸಿನಿಮಾ ಯಾವುದೇ ಯಶಸ್ವಿ ಇಲ್ಲದೆ ನೆಲಕಚ್ಚಿತ್ತು.

What is the Reason For Kannada Ondu Muttina Kathe Cinema Flop and What was the Collections on that days

ಹಾಗಾದ್ರೆ ಈ ಸಿನಿಮಾದ ಸೋಲಿಗೆ ಕಾರಣವಾದರೂ ಏನು? ಶಂಕ್ರಣ್ಣನ (Actor Shankar Nag) ಅದ್ಭುತ ಐಡಿಯಾಗಳು ಸಿನಿಮಾದಲ್ಲಿ ವರ್ಕ್ ಆಗ್ಲಿಲ್ವಾ? ಎಂಬ ಎಲ್ಲಾ ಮಾಹಿತಿಯನ್ನು ನಾವಿವತ್ತು ಈ ಪುಟ್ಟದ ಮುಖಾಂತರ ತಿಳಿಸುವ ಹೊರಟಿದ್ದೇವೆ.

ಕನ್ನಡ ಬ್ಲಾಕ್ಬಸ್ಟರ್ ಹಿಟ್ ಹಳ್ಳಿ ಮೇಷ್ಟ್ರು ಸಿನಿಮಾದ ಕಪ್ಪೆರಾಯ ನೆನಪಿದ್ದಾರಾ? ಈಗ ಎಲ್ಲಿದ್ದಾರೆ, ಹೇಗಾಗಿದ್ದಾರೆ ಗೊತ್ತಾ?

ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಸ್ನೇಹಿತರೆ ಡಾಕ್ಟರ್ ರಾಜಕುಮಾರ್ (Actor Dr Rajkumar) ಅವರ ವೃತ್ತಿ ಬದುಕಿನಲ್ಲಿ ವಿಶೇಷವಾದ ಸ್ಥಾನ ಅಲಂಕರಿಸುವಂತಹ ಸಿನಿಮಾ ಎಂದರೆ ಅದು ಒಂದು ಮುತ್ತಿನ ಕಥೆ.

ಅಣ್ಣಾವ್ರು ಮಾಲ್ಡೀವ್ಸ್ ನಲ್ಲಿನ ಸಮುದ್ರದೊಳಗೆ ಇಳಿದು ಮುತ್ತನ್ನು ಹುಡುಕುತ್ತಾ ಅಕ್ಟೋಪಸ್ಗಳೊಂದಿಗೆ ಫೈಟ್ ಮಾಡಿದಂತಹ ರೋಚಕ ದೃಶ್ಯಗಳನ್ನೆಲ್ಲ ಸೆರೆಹಿಡಿಯಲಾಗಿತ್ತು. ಸಿನಿಮಾದಲ್ಲಿ ನಟ ಶಂಕರ್ ನಾಗ್ ನಿರ್ದೇಶಕನಾಗಿ ತಮ್ಮ ಬುದ್ಧಿ ಶಕ್ತಿಯ ಪ್ರದರ್ಶನ ಮಾಡಿದ್ದರು, ಬಹಳ ಅಚ್ಚುಕಟ್ಟಾಗಿ ಅಂದುಕೊಂಡ ರೀತಿಯಲ್ಲಿ ಸಿನಿಮಾವನ್ನು ತೆರೆಗೆ ತರುವ ಪ್ರಯತ್ನದಲ್ಲಿ ಶಂಕ್ರಣ್ಣ ತಮ್ಮ ಹಂಡ್ರೆಡ್ ಪರ್ಸೆಂಟ್ ಪರಿಶ್ರಮವನ್ನು ಹಾಕಿದ್ದರು.

Ondu Muttina Kathe Cinemaಅಲ್ಲದೆ ಅಂಡರ್ ವಾಟರ್ನಲ್ಲಿ ಚಿತ್ರಿಸಲಾದ ಪ್ರಪ್ರಥಮ ಇಂಡಿಯನ್ ಸಿನಿಮಾ ಇದಾಗಿತ್ತು. ಸಿನಿಮಾದ ಟೆಕ್ನಿಕಲ್ ಕೆಲಸಗಳೆಲ್ಲವೂ ಬಾಯಿ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ್ದು ಅಕ್ಷರಶಃ ಸತ್ಯ.

‘ಪುಷ್ಪಾ 2’ ಸಿನಿಮಾದ ಬಿಗ್ ಅಪ್‌ಡೇಟ್ ಹೊರಬಿದ್ದಿದೆ, ಚಿತ್ರದಿಂದ ಸಮಂತಾಗೆ ಗೇಟ್ ಪಾಸ್! ಐಟಂ ಸಾಂಗ್ ಗೆ ಹೊಸ ನಟಿ ಆಯ್ಕೆ

ಇದರ ಜೊತೆಗೆ ಜರ್ಮನಿ ಇಂದ ಬಂದಿದ್ದ ಕ್ಯಾಮೆರಾ ಮ್ಯಾನ್ ಕೈಯಲ್ಲಿ ರೋಚಕ ದೃಶ್ಯಗಳನ್ನು ಸೆರೆಹಿಡಿಸಿದರು. ಅಲ್ಲದೆ ಲಂಡನ್ನಿಂದ ತರಿಸಲಾಗಿದ್ದ ಕೃತಕ ಅಕ್ಟೋಪಸ್ಗಳನ್ನು ಬಳಸಿ ಇಂಟರೆಸ್ಟಿಂಗ್ ದೃಶ್ಯಗಳನ್ನು ಸೆರೆಹಿಡಿಯಲಾಗಿತ್ತು.

ಸಿನಿಮಾದಲ್ಲಿ ಅಭಿನಯಿಸಿದಂತಹ ಪ್ರತಿಯೊಬ್ಬ ಕಲಾವಿದರು ಕೂಡ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿ ವಿಭಿನ್ನವಾದ ಪ್ರಯತ್ನವನ್ನು ಜನರಿಗೆ ಪರಿಚಯಿಸುವ ನಿಟ್ಟಿನಲ್ಲಿದ್ದರು.

ಆದರೆ ಆಗಿನ ಕಾಲಕ್ಕೆ ಈ ಸಿನಿಮಾ ಎಲ್ಲಾ ಹೊಸ ಹೊಸ ವೈಶಿಷ್ಟ್ಯತೆಗಳನ್ನು ಹೊಂದಿದ್ದ ಕಾರಣ ಥಿಯೇಟರ್ನಲ್ಲಿ ಗೆಲ್ಲಲಿಲ್ಲ. ೧೯೮೭ರಲ್ಲಿ ಬಿಡುಗಡೆಗೊಂಡಂತಹ ಈ ಸಿನಿಮಾ ಡಾಕ್ಟರ್ ರಾಜಕುಮಾರ್ ಅವರ ವೃತ್ತಿ ಜೀವನದಲ್ಲಿ ಅತಿ ಕಡಿಮೆ ಯಶಸ್ಸನ್ನು ಗಳಿಸಿದ ಸಿನಿಮಾಗಳ ಪಟ್ಟಿಗೆ ಸೇರಿತ್ತು.

ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಸಿನಿಮಾಗೆ ತೆಗೆದುಕೊಂಡಿದ್ದ ಸಂಭಾವನೆ ಎಷ್ಟು? ಪ್ರಸ್ತುತ ಈಗ ಪಡೀತಿರುವ ಸಂಭಾವನೆ ಎಷ್ಟು ಗೊತ್ತಾ?

ಹೀಗೆ ಆಗಿನ ಕಾಲಕ್ಕೆ ಬರೋಬ್ಬರಿ 80 ಲಕ್ಷ ಹಣವನ್ನು ಖರ್ಚು ಮಾಡಿ ತಯಾರು ಮಾಡಲಾಗಿದ್ದಂತಹ ಈ ಒಂದು ಸಿನಿಮಾ 50 ಲಕ್ಷ ಹಣವನ್ನು ಕಲೆ ಹಾಕುವಲ್ಲಿಯೂ (Collections) ಫ್ಲಾಪ್ ಆಗಿತ್ತು.

ಇದರಿಂದ ಬೇಸರಗೊಂಡಂತಹ ಶಂಕರ್ ನಾಗ್ ಅವರು “ನಾನು ಅಣ್ಣಾವ್ರ ಇಮೇಜ್ ಬದಲಿಸುವಲ್ಲಿ ಸೋತು ಹೋದೆ. ಆದರೆ ನನ್ನ ಮತ್ತು ಅಣ್ಣಾವ್ರ ಪ್ರಾಮಾಣಿಕ ಪರಿಶ್ರಮದ ಕುರಿತು ತೃಪ್ತಿ ಇದೆ” ಎಂಬ ಹೇಳಿಕೆ ನೀಡುವ ಮೂಲಕ ಸಿನಿಮಾ ಸೋಲಿನ ಕುರಿತು ತಮಗಾದ ದುಃಖವನ್ನು ತೋಡಿಕೊಂಡರು.

What is the Reason For Kannada Ondu Muttina Kathe Cinema Flop and What was the Collections on that days