ಪಲ್ಲವಿ ಅನುಪಲ್ಲವಿ ಖ್ಯಾತಿಯ ಬಾಲ ನಟ ರೋಹಿತ್ ಶ್ರೀನಾಥ್ ಈಗ ಹೇಗಿದ್ದಾರೆ? ಏನ್ ಕೆಲಸ ಮಾಡ್ತಾ ಇದ್ದಾರೆ ಗೊತ್ತಾ?
ಸ್ನೇಹಿತರೆ, ಸಾಮಾನ್ಯವಾಗಿ ಕನ್ನಡದ ಕ್ಲಾಸಿಕ್ ಹಿಟ್ (Kannada Classic Hit) ಪಟ್ಟಿಯಲ್ಲಿ ಸೇರ್ಪಡೆಯಾಗಿರುವಂತಹ ಸಿನಿಮಾ ಪಲ್ಲವಿ ಅನುಪಲ್ಲವಿ’ಯ ನಗು ಎಂದಿದೆ ಮಂಜಿನ ಬಿಂದು ಎಂಬ ಹಾಡನ್ನು ನೋಡಿದರೆ ಅದರಲ್ಲಿ ನಟಿ ಜೂಲಿ ಲಕ್ಷ್ಮಿ ಅವರೊಂದಿಗೆ ಬಾಲ ನಟ ನಮ್ಮೆಲ್ಲರ ಗಮನ ಸೆಳೆಯುತ್ತಾನೆ. ಆತ ಮತ್ಯಾರು ಅಲ್ಲ ಖ್ಯಾತ ಕಲಾವಿದ ಶ್ರೀನಾಥ್ ಅವರ ಪುತ್ರ ರೋಹಿತ್ ಶ್ರೀನಾಥ್ (Actor Rohit Shrinath).
ಹೌದು ಗೆಳೆಯರೇ ಯುಟ್ಯೂಬ್ ನಲ್ಲಿ (YouTube Channel) ಮಾತನಾಡಿದಂತಹ ರೋಹಿತ್ ಶ್ರೀನಾಥ್ ಅವರು ತಮ್ಮ ಬಾಲ್ಯದ ದಿನಗಳನ್ನು ನೆನಪು ಹಾಕುತ್ತಾ ತಮ್ಮ ತಂದೆ ಶ್ರೀನಾಥ್ (Actor Shrinath) ಅವರ ಗುಣಗಾನ ಮಾಡಿದರು.
ಬೆಂಗಳೂರಿನ ಜಯನಗರದಲ್ಲಿ (Bengaluru, Jayanagar) ಜನಿಸಿದಂತಹ ರೋಹಿತ್ ಅವರು ತಮ್ಮ ತಾಯಿ ಗೀತಾ ಅವರ ಹೊಟ್ಟೆಯಲ್ಲಿ ಇರುವಾಗ ಶ್ರೀನಾಥ್ ಅವರು ತಮಾಷೆಗೆ ನಿನಗೆ ಏನಾದರೂ ಹೆಣ್ಣು ಮಗುವಾದರೆ ನಾನು ಮಗುವನ್ನು ನೋಡಲು ರಾತ್ರಿಯೇ ಬರುತ್ತೇನೆ.
ಆದರೆ ಗಂಡು ಮಗು ಏನಾದರೂ ಜನಿಸಿದರೆ ನಾನು ಒಂದು ವಾರ ಬರುವುದಿಲ್ಲ ಎಂದು ಹೇಳಿದರಂತೆ. ಶ್ರೀನಾಥ್ ಅವರಿಗೆ ಹೆಣ್ಣು ಮಕ್ಕಳೆಂದರೆ ಬಹಳ ಇಷ್ಟವಿದ್ದ ಕಾರಣ ತಮ್ಮ ಹೆಂಡತಿಯ ಕಾಲೆಳೆಯುತ್ತ ಈ ರೀತಿ ತಮಾಷೆಯಾಗಿ ಹೇಳಿದ್ದರು.
ಆದರೆ ಶ್ರೀನಾಥ್ ಅವರ ಪತ್ನಿ ಗೀತಾ ಅವರಿಗೆ ಹೆರಿಗೆ ನೋವು ಶುರುವಾದಾಗ ಶ್ರೀನಾಥ್ ಕಾರವಾರದ ಸಮುದ್ರದ ಮಧ್ಯೆ ಶಿಪ್ನಲ್ಲಿ ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದಲ್ಲಿ ನಟಿ ಮಂಜುಳ ಅವರ ಅಭಿನಯದಲ್ಲಿ ತಯಾರಾಗುತ್ತಿದ್ದ ಶುಭಮಂಗಳ ಸಿನಿಮಾದ ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲ್ಲಿ ಎಂಬ ಸಿನಿಮಾದ ಶೂಟಿಂಗ್ನಲ್ಲಿ ಇರುತ್ತಾರೆ.
ಅಂತಹ ಸಂದರ್ಭದಲ್ಲಿ ಶ್ರೀನಾಥ್ ಅವರ ಮನೆಯವರು ಕರೆ ಮಾಡಿ ನಿನಗೆ ಗಂಡು ಮಗುವಾಗಿದೆ ಭಾರಪ್ಪ ಎಂದು ಕರೆದಾಗ ಪುಟ್ಟಣ್ಣ ಕಣಗಾಲ್ ಅವರ ಬಳಿ ಮಗುವನ್ನು ನೋಡಿಕೊಂಡು ಬಂದುಬಿಡುತ್ತೇನೆ ಎಂದಾಗ ಪುಟ್ಟಣ್ಣ ನೀನೇ ನೋಡಪ್ಪ ಎಲ್ಲವನ್ನು ತಂದು ಬಿಟ್ಟಿದ್ದೇವೆ ಈ ಸಮಯದಲ್ಲಿ ಆಗಲ್ಲ ಅಂದ್ರೆ ಹೇಗೆ ಹೇಳು, ಸಾಧ್ಯವಾದಷ್ಟು ಬೇಗ ಶೂಟಿಂಗ್ ಮುಗಿಸಿ ಬಿಡುತ್ತೇವೆ ಆನಂತರ ನೀನು ಹೋಗು ಎಂದರಂತೆ.
ಹೀಗೆ ಮಗು ಜನಿಸಿ ಐದು ದಿನಗಳಾದ ಬಳಿಕ ಸೆಂಟ್ ಫಿಲೋಮಿನಸ್ ಆಸ್ಪತ್ರೆಗೆ ಓಡೋಡಿ ಬಂದು ತಮ್ಮ ತಾಯಿಯನ್ನು ಮಾತನಾಡಿಸಿದಾಗ ಕೊನೆಗೂ ಬಂದಿಯಪ್ಪ ಹೋಗು ಮೊದಲು ನೋಡು ಎಂದು ಶ್ರೀನಾಥ್ ಅವರ ತಾಯಿ ಹೇಳಿ ಕಳಿಸುತ್ತಾರೆ.
ಹೀಗೆ ಗೀತಾ ಅವರು ಪತಿಯನ್ನು ನೋಡಿದ ಕೂಡಲೇ ಕ್ಷಮಿಸಿ ಎನ್ನುತ್ತಾರೆ, ಏನಾಯ್ತು ಎಂದು ಶ್ರೀನಾಥ್ ಕೇಳಿದಾಗ ನೀವು ಕೇಳಿದ ಹೆಣ್ಣು ಮಗುವನ್ನು ನೀಡಲು ಆಗಲಿಲ್ಲ. ಗಂಡು ಮಗು ಜನಿಸಿದೆ ಎಂದರಂತೆ.
ಆಗ ಶ್ರೀನಾಥ್ ಅಯ್ಯೋ ಹುಚ್ಚಿ ನಾನು ತಮಾಷೆಗೆ ಹೇಳಿದ್ದು ಎಂದು ಮಗು ಮತ್ತು ಹೆಂಡತಿಯನ್ನು ಅಪ್ಪಿ ಮುದ್ದಾಡಿದರು. ಹೀಗೆ ತಮ್ಮ ತಂದೆಯೊಂದಿಗೆ ಸಿನಿಮಾದಲ್ಲಿ ಗುರುತಿಸಿಕೊಂಡಂತಹ ರೋಹಿತ್ ಶ್ರೀನಾಥ್ ಅವರು ಗಂಡ ಹೆಂಡತಿ, ಜನುಮ ಜನುಮದ ಅನುಬಂಧ, ಶಿಕಾರಿ, ಗರುಡ ರೇಖೆ, ಖದೀಮ ಕಳ್ಳರು, ಅಜ್ಞಾತವಾಸ ಎರಡು ರೇಖೆಗಳು, ತಾಯಿ ತಂದೆ, ಪಲ್ಲವಿ ಅನುಪಲ್ಲವಿ ಹಾಗೂ ಶಂಕರ್ ನಾಗ್ ಅವರ ಮಾಲ್ಗುಡಿ ಡೇಸ್ ಸೇರಿದಂತೆ ಮುಂತಾದ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದರು.
ವಿದ್ಯಾಭ್ಯಾಸದತ್ತ ಗಮನಹರಿಸಿದಂತಹ ರೋಹಿತ್ ಶ್ರೀನಾಥ್ ಅವರು ಸದ್ಯ ಉದ್ಯಮದಲ್ಲಿ ಗುರುತಿಸಿಕೊಂಡಿದ್ದಾರೆ. ಸಿನಿಮಾಗಳಿಗೆ ಫುಲ್ ಸ್ಟಾಪ್ ಇಟ್ಟು ಸದ್ಯ ಓರ್ವ ಉದ್ಯಮಿ ಎಂದು ಗುರುತಿಸಿಕೊಂಡಿದ್ದಾರೆ. ಆದರೆ ತಮ್ಮ ಬಾಲ್ಯದ ದಿನಗಳನ್ನು ಇಂದಿಗೂ ನೆನೆಯುತ್ತಾರೆ.
Interesting Facts About Kannada child Actor Rohit Shrinath