Kajal Agarwal, ಮಗನ ಫೋಟೋ ಹಂಚಿಕೊಂಡ ಕಾಜಲ್ ಅಗರ್ವಾಲ್ !
Kajal Agarwal, ತನ್ನ ಮಗುವನ್ನು ಎತ್ತಿಕೊಂಡ ಕಾಜಲ್ ಹಾಸಿಗೆಯ ಮೇಲೆ ಮಲಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
Kajal Agarwal: ಕೊರೊನಾ ಸಮಯದಲ್ಲಿ ಸಿನಿಮಾ ನಟಿ ಕಾಜಲ್ ಅಗರ್ವಾಲ್ ಮುಂಬೈ ಮೂಲದ ಉದ್ಯಮಿ ಗೌತಮ್ ಕಿಚ್ಲು ಅವರನ್ನು ವಿವಾಹವಾದರು. ಹಾಗೂ ಆಕೆ ಇತ್ತೀಚೆಗಷ್ಟೇ ಗಂಡು ಮಗುವಿಗೆ ಜನ್ಮ ನೀಡಿ ತಾಯಿಯಾದರು. ಈ ನಡುವೆ ಮಗುವಿನ ಎರಡು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಕಾಜಲ್ ತಮ್ಮ ಮಗನನ್ನು ಯಾವಾಗ ತೋರಿಸುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದರು. ಆದರೆ ಮುಖ ಕಾಣದ ಎರಡು ಫೋಟೋ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : 777 Charlie Movie, 777 ಚಾರ್ಲಿ ಸಿನಿಮಾ ವೀಕ್ಷಿಸಿದ ಸಿಎಂ ಬೊಮ್ಮಾಯಿ
ಇತ್ತೀಚೆಗಷ್ಟೇ ಕಾಜಲ್ ತನ್ನ ಬಾಯ್ ಫ್ರೆಂಡ್ ಜೊತೆಗಿರುವ ಫೋಟೋವನ್ನು ಸಹ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಸಂಪೂರ್ಣವಾಗಿ ಮುಖ ತೋರಿಸದಂತೆ ಎಚ್ಚರ ವಹಿಸಲಾಗಿದೆ. ಸದ್ಯ ತನ್ನ ಮಗುವನ್ನು ಎತ್ತಿಕೊಂಡ ಕಾಜಲ್ ಹಾಸಿಗೆಯ ಮೇಲೆ ಮಲಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಮಗು ಎಷ್ಟು ಮುದ್ದಾಗಿ ಕಾಣುತ್ತಿದೆ ಎಂದು ಎಲ್ಲರೂ ಕಾಮೆಂಟ್ ಮಾಡುತ್ತಿದ್ದಾರೆ.
ಈ ಫೋಟೋಗೆ ಸೆಲೆಬ್ರಿಟಿಗಳೂ ಸಹ ಕಾಮೆಂಟ್ ಮಾಡುತ್ತಿದ್ದಾರೆ. ಮಗನಿಗೆ ನೀಲ್ ಕಿಚ್ಲು ಎಂದು ಹೆಸರಿಡಲಾಗಿದೆ ಎಂದು ತಿಳಿದುಬಂದಿದೆ. ಕಾಜಲ್ ಸದ್ಯ ಸಿನಿಮಾಗಳಿಂದ ದೂರ ಉಳಿದಿದ್ದು, ಅಮ್ಮನ ಸ್ಥಾನ ಎಂಜಾಯ್ ಮಾಡುತ್ತಿದ್ದಾರೆ.
ಈ ಫೋಟೋವನ್ನು ಶೇರ್ ಮಾಡಿದ ಆಕೆ…. ಮೈ ಹಾರ್ಟ್ ಬೀಟ್ ತನ್ನ ಮಗ ಎಂದು ಭಾವನಾತ್ಮಕವಾಗಿ ಪೋಸ್ಟ್ ಮಾಡಿದ್ದಾರೆ.
#NeilKitchlu
Kajal Agarwal Shares Her Son Photo In Social Media
Follow Us on : Google News | Facebook | Twitter | YouTube