Toby Cinema First Day Collections : ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಕನ್ನಡ ಸಿನಿ (Kannada Fans) ಪ್ರೇಕ್ಷಕರಿಗೆ ಉಡುಗೊರೆಯಂತೆ ನೆನ್ನೆ ತೆರೆಗಪ್ಪಳಿಸಿದಂತಹ ಟೋಬಿ ಸಿನಿಮಾ ಮಸ್ತ್ ಮನೋರಂಜನೆಯನ್ನು ನೀಡಿದೆ.
ಇದುವರೆಗೂ ಯಾರು ಮಾಡಿರದಂತಹ ವಿಭಿನ್ನವಾದಂತಹ ಪಾತ್ರ ಒಂದರಲ್ಲಿ ನಟ ರಾಜ್ ಬಿ ಶೆಟ್ಟಿ (Actor Raj B Shetty) ಅಬ್ಬರಿಸಿ ಬೊಬ್ಬೆರೆದಿದ್ದಾರೆ. ಹೌದು ಗೆಳೆಯರೇ ಬಸಿಲ್ ಅಲ್ಬಕ್ಕಲ್ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವಂತಹ ಈ ಆಕ್ಷನ್ ಥ್ರಿಲ್ಲರ್ ಸಿನಿಮಾಗೆ ಪ್ರೇಕ್ಷಕರು ಭರ್ಜರಿ ರೆಸ್ಪಾನ್ಸ್ ನೀಡಿದ್ದು ಮೊದಲ ದಿನವೇ ಎಲ್ಲಾ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುವ ಮೂಲಕ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ.
ಹೀಗಿರುವಾಗ ಈ ಸಿನಿಮಾದ ಮೊದಲ ದಿನದ ಕಲೆಕ್ಷನ್ (1st Day Collections) ಎಷ್ಟು? ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದು ನಿಮಗೂ ಕೂಡ ಈ ಕುತೂಹಲಕಾರಿ ಸಂಗತಿಯನ್ನು ತಿಳಿದುಕೊಳ್ಳುವ ಆಸಕ್ತಿ ಇದ್ದಲ್ಲಿ ತಪ್ಪದೇ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಸೋನು ಗೌಡ ದಿಡೀರನೆ ಸೋಶಿಯಲ್ ಮೀಡಿಯಾ ಲೈವ್ ಬಂದು ಕಣ್ಣೀರು ಹಾಕಿದ್ಯಾಕೆ? ಕೈ ಮುಗಿದು ಕೇಳಿಕೊಂಡಿದ್ದೇನು ಗೊತ್ತಾ?
ಸಾಮಾನ್ಯವಾಗಿ ನಟ ರಾಜ್ ಬಿ ಶೆಟ್ಟಿ ಅವರ ಸಿನಿಮಾಗಳೆಂದರೆ ಅತಿ ಕಡಿಮೆ ಅವಧಿಯ ಶೂಟಿಂಗ್ ಹಾಗೂ ಅತಿ ಕಡಿಮೆ ಬಜೆಟ್ನ ಸಿನಿಮಾಗಳೆ ಆಗಿರುತ್ತವೆ.
ಅದರಂತೆ ಟೋಬಿ ಕೂಡ ಅಲ್ಪಾವಧಿಯಲ್ಲಿ ಶೂಟಿಂಗ್ ಕೆಲಸಗಳನ್ನು ಮುಗಿಸಿ ತೆರೆಕಂಡ ಚಿತ್ರ ಪಟ್ಟಿಗಳಲ್ಲಿ ಒಂದಾಗಿದ್ದು, ಅಲ್ಲದೆ ಸ್ವತಹ ರಾಜ್ ಬಿ ಶೆಟ್ಟಿಯವರೇ ಪ್ರತಿಯೊಂದು ರಾಜ್ಯಕ್ಕೂ ತೆರಳಿ ತಮ್ಮ ಸಿನಿಮಾದ ಪ್ರಮೋಶನ್ ಅನ್ನು ಭರ್ಜರಿಯಾಗಿ ಮಾಡಿದ್ದಾರೆ.
ಹೌದು ಗೆಳೆಯರೇ ರಾಜ್ ಬಿ ಶೆಟ್ಟಿಯವರು ವೇದಿಕೆಯ ಮೇಲೆ ಹುಲಿ ಡ್ಯಾನ್ಸ್ ಮಾಡಿ ಅಭಿಮಾನಿಗಳು ಕೇಳುವಂತಹ ಬೇಡಿಕೆಯನ್ನೆಲ್ಲ ಈಡೇರಿಸಿ ಅವರ ಪ್ರಶ್ನೆಗಳಿಗೆ ತಮ್ಮದೇ ದಾಟಿಯಲ್ಲಿ ಉತ್ತರಿಸುತ್ತಾ ಪ್ರೇಕ್ಷಕರ ಗಮನ ಸೆಳೆದಿದ್ದರು.
ಅದರಂತೆ ನೆನ್ನೆ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ 25 ಆಗಸ್ಟ್ ರಂದು ದೇಶದಾದ್ಯಂತ ಅತಿ ಹೆಚ್ಚಿನ ಸಿನಿಮಾ ಮಂದಿರಗಳಲ್ಲಿ ರಾರಾಜಿಸಿದಂತಹ ಟೋಬಿ ಚಿತ್ರವು ಬರೋಬರಿ 1.1 ಕೋಟಿ ನಿವ್ವಳ ಗಳಿಕೆಯನ್ನು ಮಾಡುವ ಮೂಲಕ ನಿರೀಕ್ಷೆಗೂ ಮೀರಿದಂತಹ ಯಶಸ್ಸನ್ನು ಕಂಡಿದೆ.
ಹೌದು ಗೆಳೆಯರೇ ಒಂದು ಮೊಟ್ಟೆಯ ಕಥೆ, ಗರುಡಗಮನ ವೃಷಭ ವಾಹನದಂತಹ ಅದ್ಭುತ ಸಿನಿಮಾಗಳನ್ನು ನೀಡಿದಂತಹ ರಾಜ್ ಬಿ ಶೆಟ್ಟಿ ಈ ಬಾರಿ ತಮ್ಮ ಟೋಬಿ ಸಿನಿಮಾದಲ್ಲಿ ಮಾತನಾಡದೆಯೇ ಮನಸ್ಸಿಗೆ ನಾಟುವಂತಹ ಅಭಿನಯವನ್ನು ಮಾಡಿದ್ದಾರೆ.
ಇವರಿಗೆ ಚೈತ್ರ ಜೆ ಆಚಾರ್, ಸಂಯುಕ್ತ ಹೊರನಾಡು, ಗೋಪಾಲ ದೇಶಪಾಂಡೆ ಸೇರಿದಂತೆ ಮುಂತಾದವರು ಸಾತ್ ನೀಡಿದ್ದು, ಬಹಳ ಸುಗಮವಾಗಿ ಸಾಗುತ್ತಾ ಹೋಗುವಂತಹ ಕಥಾಂದರ ನಂತರ ತಿರುವುಗಳನ್ನು ತೆಗೆದುಕೊಳ್ಳುತ್ತಾ ರೋಮಾಂಚನಕಾರಿ ಎನ್ನುವಂತಹ ದೃಶ್ಯಗಳನ್ನು ಒಳಗೊಂಡಿವೆ.
ಚಿಕ್ಕಂದಿನಿಂದಲೂ ತನ್ನದಲ್ಲದ ತಪ್ಪಿಗೆ ಸಾಕಷ್ಟು ದೌರ್ಜನ್ಯ ನೋವು ಹತಾಶೆ ಹಾಗೂ ಲಾಠಿ ಏಟಿನ ಪೆಟ್ಟನ್ನು ಅನುಭವಿಸಿದಂತಹ ಹುಡುಗ ಕೋಪಿಷ್ಠನ ರೂಪ ತಾಳಿ ತನ್ನನ್ನು ಹೀಯಾಳಿಸಲು ಬಂದವರನ್ನು ಹೇಗೆ ಚಚ್ಚಿ ಹಾಕುತ್ತಾನೆ?
ಕನ್ನಡಿಗರ ವಿಷಯದಲ್ಲಿ ರಶ್ಮಿಕಾ ಮಂದಣ್ಣ ಮತ್ತೊಂದು ಎಡವಟ್ಟು! ಬೇಕಂತಲೇ ಕನ್ನಡ ಕಡೆಗಣಿಸುವ ನ್ಯಾಷನಲ್ ಕ್ರಶ್
ಹಾಗೆ ದೊಡ್ಡವನಾದ ಮೇಲು ಆ ಕೋಪಾವೇಷವನ್ನು ಹೇಗೆ ಮುಂದುವರಿಸಿಕೊಂಡು ಹೋಗುತ್ತಾನೆ? ತನ್ನ ಸೇಡಿಗೆ ಪ್ರತಿಕಾರ ತೀರಿಸಿಕೊಳ್ಳಲು ಯಾವೆಲ್ಲ ರೂಪ ತಾಳುತ್ತಾನೆ ಎಂಬುದರ ಮೇಲೆ ಕಥೆಯ ಹಂದರವನ್ನು ಎಣೆಯಲಾಗಿದ್ದು, ಸಿನಿಮಾ ವೀಕ್ಷಸಿದಂತಹ ಪ್ರೇಕ್ಷಕರು ಸಕಾರಾತ್ಮಕ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.
Kannada Actor Raj B Shetty Toby Cinema First Day Collections
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.