Sandalwood News

ನಟ ಟೈಗರ್ ಪ್ರಭಾಕರ್ ಬಂದ ಅವಮಾನಗಳನ್ನು ಸಹಿಸಿ ಸ್ವತಃ ಚಿತ್ರ ನಿರ್ದೇಶನಕ್ಕೆ ಕೈ ಹಾಕಿದ್ದು ಏಕೆ ಗೊತ್ತೇ?

ಸ್ನೇಹಿತರೆ, ನಟ ಟೈಗರ್ ಪ್ರಭಾಕರ್ (Actor Tiger Prabhakar) ಎಂಬ ಹೆಸರನ್ನು ಕೇಳುತ್ತಿದ್ದ ಹಾಗೆ 80-90ರ ಅಭಿನಯದ ಸಿನಿಮಾಗಳೆಲ್ಲವು ನಮ್ಮ ತಲೆಗೆ ಬಂದುಬಿಡುತ್ತದೆ. ಅಲ್ಪಾವಧಿಯಲ್ಲಿ ಸಾಕಷ್ಟು ಸಿನಿಮಾಗಳ ಆಫರ್ ಪಡೆದುಕೊಂಡು ಬಹುದೊಡ್ಡ ಮಟ್ಟದ ಯಶಸ್ಸನ್ನು ಪಡೆದಂತಹ ಈ ನಟ ನಾಯಕನಾಗಬೇಕು ಎಂದು ಸಿನಿಮಾಗೆ ಬಂದು ಕಳನಟನ ಪಾತ್ರಗಳ ಮೂಲಕ ಹೆಚ್ಚು ಹೆಚ್ಚು ಗುರುತಿಸಿಕೊಂಡು ಬೇಡಿಕೆಯನ್ನು ಪಡೆದರು.

ಇನ್ನು ಕೇವಲ ನಟನೆಯಲ್ಲಿ ಮಾತ್ರವಲ್ಲದೆ ನಿರ್ದೇಶಕ ನಿರ್ಮಾಪಕನಾಗಿಯು ಟೈಗರ್ ಪ್ರಭಾಕರ್ ಗುರುತಿಸಿಕೊಂಡಿದ್ದರು ಎಂದರೆ ನೀವು ನಂಬಲೇಬೇಕು. ಕನ್ನಡ ಸಿನಿಮಾ ರಂಗ (Kannada Film Industry) ಕಂಡ ಅಪ್ರತಿಮ ನಟ ಪ್ರಭಾಕರ್ ಅವರು, ಖಡಕ್ ಮೈಮಾಟ, ಖಡಕ್ ಧ್ವನಿ…. ಒಂದಾ ಎರಡಾ…

Kannada Actor Tiger Prabhakar Direction Movies, How Prabhakar Became Director Read The Story

Sarath Babu: ಹಿರಿಯ ನಟ ಶರತ್ ಬಾಬು ನಿಧನ, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶರತ್ ಬಾಬು ಇನ್ನಿಲ್ಲ

ಹೌದು ಗೆಳೆಯರೇ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ ನಂತರ ಟೈಗರ್ ಪ್ರಭಾಕರ್ ಅವರಿಗೆ ನಿರ್ದೇಶನದತ್ತ (Cinema Direction) ಮನಸ್ಸು ಸೆಳೆಯುತ್ತದೆ. ಈ ಕಾರಣದಿಂದ ಸಾಕಷ್ಟು ನಿರ್ದೇಶಕರ ಜೊತೆ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದ್ದರು ಹಾಗೂ ಸಿನಿಮಾಗಳಿಗೆ ಕಥೆ ಚಿತ್ರಕಥೆಯನ್ನು ನೀಡುವ ಕೆಲಸವನ್ನು ಟೈಗರ್ ಪ್ರಭಾಕರ್ ಅವರು ಮಾಡಿರುತ್ತಾರೆ. ಇನ್ನು ನಿರ್ದೇಶಕ (Director) ಕೆ ಎಸ್ ದಾಸ್ ಅವರು ಟೈಗರ್ ಪ್ರಭಾಕರ್ ಅವರ ಗುರು ಎಂದರೆ ತಪ್ಪಾಗಲಿಕ್ಕಿಲ್ಲ.

ಹೌದು ಗೆಳೆಯರೇ ಇವರ ಜೊತೆ ಸೇರಿ ಟೈಗರ್ ಪ್ರಭಾಕರ್ ನಿರ್ದೇಶನ ಮಾಡುವ ಪರಿಯನ್ನು ಸಂಪೂರ್ಣವಾಗಿ ಕಲಿತುಕೊಳ್ಳುತ್ತಾರೆ. ಆನಂತರ ಮೊದಲ ಸಿನಿಮಾ ನಿರ್ದೇಶನ ಮಾಡಬೇಕು ಎಂಬ ನಿಟ್ಟಿನಲ್ಲಿ ಇದ್ದಾಗ ಕೆ ಎಸ್ ದಾಸ್ ಅವರು ಟೈಗರ್ ಪ್ರಭಾಕರ್ ಅವರನ್ನು ಪ್ರೋತ್ಸಾಹಿಸಿ ಯಾವ ರೀತಿ ನಿರ್ದೇಶನ ಮಾಡುವುದು ಎಂಬುದನ್ನು ವಿವರಿಸಿ ಸಂಪೂರ್ಣ ಚಿತ್ರೀಕರಣದ ಹಂತವನ್ನು ಹೇಳಿಕೊಟ್ಟರು ಆಗ ಮೂಡಿಬಂದದ್ದೆ ಟೈಗರ್ ಪ್ರಭಾಕರ್ ಅವರ ನಿರ್ದೇಶನದಲ್ಲಿ ತೆರೆಕಂಡ ಪ್ರಪ್ರಥಮ ಶಕ್ತಿ ಸಿನಿಮಾ.

Kannada Actor Tiger Prabhakar

ಅಂದು ನಟಿ ಲಕ್ಷ್ಮಿ ಅವರಿಗೆ ಹಿರಿಯ ನಟ ಅಶ್ವಥ್ ಬಾಸುಂಡೆ ಬರೋ ರೀತಿ ಹೊಡೆದಿದ್ದು ಯಾಕೆ? ಆಗ ಜೂಲಿ ಲಕ್ಷ್ಮಿ ಮಾಡಿದ್ದೇನು ಗೊತ್ತಾ?

ಹೌದು ಗೆಳೆಯರೇ ತಮ್ಮದೇ ನಟನೆಯಲ್ಲಿ ಬಹುದೊಡ್ಡ ತಾರಾ ಬಳಗದಲ್ಲಿ ತಯಾರದಂತಹ ಈ ಒಂದು ಸಿನಿಮಾ ಬಹುದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡುಕೊಳ್ಳುತ್ತದೆ.

ಕೆ ಎಸ್ ದಾಸರವರು ಸೂಚಿಸಿದ ಹಾಗೆ ಶಂಕರ್ ನಾಗ್ ಅವರನ್ನು ಅತಿಥಿ ಪಾತ್ರದಲ್ಲಿ ಕರೆಸುವ ಮೂಲಕ ಸಿನಿಮಾದ ಪ್ಲಸ್ ಪಾಯಿಂಟ್ ಗಳನ್ನು ಹೆಚ್ಚಿಸಿಕೊಂಡರು. ಹೀಗೆ ಮೊದಲಿನಿಂದಲೂ ಟೈಗರ್ ಪ್ರಭಾಕರ್ ಕಥೆ ಹಾಗೂ ಸಂಭಾಷಣೆಯ ಮೇಲೆ ಪ್ರಾಮುಖ್ಯತೆ ನೀಡುತ್ತಿದ್ದರು.

ಆದ್ದರಿಂದ ಶಕ್ತಿ ಸಿನಿಮಾವು ಒಂದು ಒಳ್ಳೆಯ ಕಥಾಹಂದರವನ್ನು ಹೊಂದಿದ್ದ ಕಾರಣ ಪ್ರೇಕ್ಷಕರಿಗೆ ಇಷ್ಟವಾಗುವಂತಹ ರೀತಿಯಲ್ಲಿತ್ತು. ಹೀಗಾಗಿ ನಿರೀಕ್ಷೆಗೂ ಮೀರಿದಂತಹ ಯಶಸ್ಸು ಪಡೆದುಕೊಳ್ಳುವ ಮೂಲಕ ಸಿನಿಮಾ ಸದ್ದು ಮಾಡುತ್ತದೆ.

ನಟ ಟೈಗರ್ ಪ್ರಭಾಕರ್

ನಟ ಅಂಬರೀಶ್ ಅವರು ಎಣ್ಣೆ ಬೇಕು, ದಮ್ ಬೇಕು ಎಂದು ಹಠ ಹಿಡಿದಿದ್ದಕ್ಕೆ ವಿಷ್ಣುವರ್ಧನ್ ಮಾಡಿದ್ದೇನು ಗೊತ್ತೇ?

ಹೀಗೆ ಶಕ್ತಿ ಸಿನಿಮಾದಿಂದ ದಿನವು ಟೈಗರ್ ಪ್ರಭಾಕರ್ ಅವರಲ್ಲಿ ಒಂದೊಳ್ಳೆ ನಟ ಮಾತ್ರ ನಲ್ಲ ನಿರ್ದೇಶಕನು ಅಡಗಿದ್ದಾನೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ.

ಇದಾದ ನಂತರ ಬಂದಂತಹ ಮಹೇಂದ್ರವರ್ಮ, ಮಿಸ್ಟರ್ ಮಹೇಶ್ ಕುಮಾರ್, ಕಲಿಯುಗ ಭೀಮ ಸೇರಿದಂತೆ ಸಾಕಷ್ಟು ಸಿನಿಮಾಗಳು ತಕ್ಕಮಟ್ಟದ ಯಶಸ್ಸನ್ನು ತಂದುಕೊಡುತ್ತದೆ.

ಆದರೆ ಕಾಲ ಕಳೆದ ನಂತರ ಕಥಾವಸ್ತುವಿನ ಬದಲಾಗಿ ಟೈಗರ್ ಪ್ರಭಾಕರ್ ತಮ್ಮ ಆಸಕ್ತಿಯನ್ನು ಬೇರೆಡೆ ತೋರಿದ ಕಾರಣ ಇವರ ನಿರ್ದೇಶನದಲ್ಲಿ ಮೂಡಿ ಬಂದ ಸಿನಿಮಾಗಳು ಅಷ್ಟೇನು ಯಶಸ್ವಿಯಾಗಲಿಲ್ಲ.

Kannada Actor Tiger Prabhakar Direction Movies, How Prabhakar Became Director Read The Story

Our Whatsapp Channel is Live Now 👇

Whatsapp Channel

Related Stories