ಸ್ನೇಹಿತರೆ 80-90 ದಶಕದಲ್ಲಿ ಸಾಕಷ್ಟು ಅಪ್ರತಿಮ ಕಲಾವಿದರು ಚಿತ್ರರಂಗದಲ್ಲಿ ಗುರುತಿಸಿಕೊಂಡು ತಮ್ಮ ಅಮೋಘ ಅಭಿನಯದ ಪರಿಚಯವನ್ನು ಪ್ರೇಕ್ಷಕರಿಗೆ ಮಾಡಿಕೊಟ್ಟರು.
ಹೌದು ಗೆಳೆಯರೇ ಈ ಅವಧಿಯಲ್ಲಿ ಕನ್ನಡಕ್ಕೆ (Kannada Film Industry) ಬಂದು ಹೋದಂತಹ ನಟ ನಟಿರ ಸಂಖ್ಯೆ ಅಪಾರ. ಹೀಗಿರುವಾಗ ಆಗಿನ ಕಾಲದ ಯಶಸ್ವಿ ನಟಿಯರ ಪೈಕಿ ಜೂಲಿ ಲಕ್ಷ್ಮಿಯವರು (Actress Lakshmi) ಅಗ್ರ ಸ್ಥಾನದಲ್ಲಿ ನಿಲ್ಲುತ್ತಾರೆ ಎಂದರೆ ತಪ್ಪಾಗಲಾರದು.
ನಟ ಅಂಬರೀಶ್ ಅವರು ಎಣ್ಣೆ ಬೇಕು, ದಮ್ ಬೇಕು ಎಂದು ಹಠ ಹಿಡಿದಿದ್ದಕ್ಕೆ ವಿಷ್ಣುವರ್ಧನ್ ಮಾಡಿದ್ದೇನು ಗೊತ್ತೇ?
ಹೌದು ಗೆಳೆಯರೇ ಅತಿ ಕಡಿಮೆ ಅವಧಿಯಲ್ಲಿ ಬಹು ದೊಡ್ಡ ಮಟ್ಟದ ಹೆಸರನ್ನು ಸಂಪಾದಿಸಿಕೊಂಡಂತಹ ಈ ನಟಿ ಎಲ್ಲಾ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡು ಉತ್ತುಂಗದ ಶಿಖರದಲ್ಲಿದ್ದವರು. ಹೀಗಿರುವಾಗ ಅದೊಂದು ದಿನ ನಟ ಅಶ್ವಥ್ (Actor K S Ashwath) ಜೂಲಿ ಲಕ್ಷ್ಮಿ ಅವರಿಗೆ ಬಾಸುಂಡೆ ಬರುವ ರೀತಿ ಹೊಡೆದು ಬಿಟ್ಟಿದ್ದರಂತೆ.
ಅಷ್ಟಕ್ಕೂ ಯಾವ ಕಾರಣದಿಂದ ಅಶ್ವತ್ ಈ ರೀತಿ ಮಾಡಿದ್ರು? ಇದಕ್ಕೆ ಜೂಲಿ ಲಕ್ಷ್ಮಿ ಅವರ ಪ್ರತಿಕ್ರಿಯೆ ಏನಾಗಿತ್ತು ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.
ಹಂಸಲೇಖ ಅವರು ಇನ್ನು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಬರದಿರಲು ಕಾರಣವೇನು ಗೊತ್ತಾ? ವೈರಲ್ ಆಯ್ತು ಕಾರಣ
ನಿಮಗೂ ಕೂಡ ಈ ಒಂದು ವಿಚಾರವನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ ಕಳೆದ ಕೆಲವು ದಿನಗಳ ಹಿಂದೆ ಭಗವಾನ್ ಅವರು ನಿಧನರಾದಾಗ ಜೂಲಿ ಲಕ್ಷ್ಮಿ ಸಂದರ್ಶನ ಒಂದರಲ್ಲಿ ತಮ್ಮ ಸಿನಿ ಜೀವನದ ಅನುಭವವನ್ನು ಹಂಚಿಕೊಂಡರು. ಆ ಸಮಯದಲ್ಲಿ ಮಾತನಾಡಿದ ಅವರು ಅಶ್ವತ್ ಅವರು ತಂದೆ ಪಾತ್ರವಾಗಲಿ, ತಾತನ ಪಾತ್ರ ವಾಗಲಿ ಯಾವುದೇ ಪಾತ್ರ ನೀಡಿದರು ಅದ್ಭುತವಾಗಿ ಅಭಿನಯಿಸುತ್ತಾರೆ ಎಂದರು.
ಹಾಗೆ ನೋಡಿದರೆ ಅಶ್ವತ್ ಅವರದ್ದು ನಟನೆ ಎಂದು ಅನಿಸುತ್ತಿರಲಿಲ್ಲ. ಬದಲಿಗೆ ಸಹಜ ಅಭಿನಯ ಎನ್ನುವ ಹಾಗೆ ಅಶ್ವತ್ ಅವರು ನೀಡಿದಂತಹ ಪಾತ್ರಕ್ಕೆ ಅಚ್ಚುಕಟ್ಟಾಗಿ ಜೀವ ತುಂಬುತ್ತಿದ್ದರು. ಹೀಗೆ ಗಾಳಿಮಾತು ಸಿನಿಮಾದಲ್ಲಿ ಜೂಲಿ ಲಕ್ಷ್ಮಿ ಅವರ ತಂದೆ ಪಾತ್ರದಲ್ಲಿ ಅಶ್ವತ್ ಅಭಿನಯಿಸುತ್ತಿದ್ದರು.
ಹೀಗೆ ಮಗಳ ಕುರಿತು ಸನ್ನಿವೇಶವನ್ನು ಎದುರಾಗದಾಗ ತಂದೆ ಛತ್ರಿಯನ್ನು ತೆಗೆದುಕೊಂಡು ಮಗಳಿಗೆ ಹೊಡೆಯ ಬೇಕಾಗುತ್ತದೆ. ಹೀಗೆ ಉದ್ದುದ್ದದ ಡೈಲಾಗ್ ಹೇಳಿಕೊಂಡು ನಟ ಅಶ್ವತ್ ಅದಾಗಲೇ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿಬಿಟ್ಟಿದ್ದರು.
ನಟಿ ಖುಷ್ಬೂ ನಟಿಸಿದ ಮೊದಲ ಕನ್ನಡ ಸಿನಿಮಾ ಯಾವುದು ಮತ್ತು ಅದಕ್ಕೆ ಅವರು ಪಡೆದ ಸಂಭಾವನೆ ಎಷ್ಟು ಗೊತ್ತಾ?
ಕೈಗೆ ಛತ್ರಿ ಕೊಟ್ಟೊಡನೆ ಜೂಲಿ ಲಕ್ಷ್ಮಿ ಸ್ವಂತ ಮಗಳು ಎಂದುಕೊಂಡು ಮನಸ್ಸಿಗೆ ಬಂದ ಹಾಗೆ ಹೊಡೆದುಬಿಡುತ್ತಾರೆ. ಹೀಗೆ ಪಾತ್ರದಿಂದ ಹೊರ ಬಂದ ನಂತರ ತನ್ನ ಎದುರಿಗಿರುವವರು ಸ್ಟಾರ್ ನಟಿ, ಅವರಿಗೆ ಈ ರೀತಿ ಹೊಡೆದು ಬಿಟ್ಟನಲ್ಲ ಎಂದು ಪಶ್ಚಾತಾಪ ಪಟ್ಟು ಅವರ ಬಳಿ ಕ್ಷಮೆಯಾಚಿಸಿದರು.
ಚೈತ್ರದ ಪ್ರೇಮಾಂಜಲಿ ರಘುವೀರ್ ಅತಿ ಚಿಕ್ಕ ವಯಸ್ಸಿನಲ್ಲಿಯೇ ಅಗಲಿಕೆಗೆ ಕಾರಣವೇನು ಗೊತ್ತಾ? ಇಲ್ಲಿದೆ ಅವರ ಕಣ್ಣೀರಿನ ಕಥೆ
ಆದರೆ ಇಷ್ಟೆಲ್ಲಾ ಹೊಡೆತ ತಿಂದರೂ ಸಹ ಚಿತ್ರವನ್ನು ಮತ್ತೆ ಚಿತ್ರಿಸಬೇಕು ಎಂದು ದೊರೆ ಭಗವಾನ್ ಹೇಳಿದಾಗ ಮುಂದಿನ ಸನ್ನಿವೇಶದಲ್ಲಿ ತನಗೆ ಯಾವುದೇ ರೀತಿಯ ನೋವಾಗದ ಹಾಗೆ ಅಶ್ವತ್ ನೋಡಿಕೊಂಡರು ಹಾಗೂ ನನ್ನ ಮೈ ಮೇಲೆ ಆದಂತಹ ಗಾಯಗಳೆಲ್ಲವೂ ಸಂಪೂರ್ಣ ಗುಣವಾಗುವವರೆಗೂ ಅಶ್ವಥ್ ನನಗೆ ಪ್ರತಿದಿನ ಕರೆ ಮಾಡಿ ಆರೋಗ್ಯ ಕ್ಷೇಮ ವಿಚಾರಿಸಿಕೊಳ್ಳುತ್ತಿದ್ದರು ಎಂದು ಜೂಲಿ ಲಕ್ಷ್ಮಿ ಹೇಳಿದ್ದಾರೆ.
Why did Veteran Actor K S Ashwath Beaten Actress Lakshmi, Read the Interesting Story
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.