ನಟಿ ಖುಷ್ಬೂ ನಟಿಸಿದ ಮೊದಲ ಕನ್ನಡ ಸಿನಿಮಾ ಯಾವುದು ಮತ್ತು ಅದಕ್ಕೆ ಅವರು ಪಡೆದ ಸಂಭಾವನೆ ಎಷ್ಟು ಗೊತ್ತಾ?

Actress Kushboo: ನಟಿ ಖುಷ್ಬೂ ರಾಧಾ ಎಂಬ ಪಾತ್ರದಲ್ಲಿ ಅದ್ಭುತವಾಗಿ ಅಭಿನಯಿಸಿ ಎಲ್ಲರ ಮನಸ್ಸನ್ನು ಗೆದ್ದರೆ, ಯಥಾಪ್ರಕಾರ ರವಿಚಂದ್ರನ್ ಅವರ ಸಿನಿಮಾಗೆ ನಾದಬ್ರಹ್ಮ ಹಂಸಲೇಖಾ ಅವರು ಸಂಗೀತ ಸಂಯೋಜನೆಯನ್ನು ಮಾಡಿದರು.

Bengaluru, Karnataka, India
Edited By: Satish Raj Goravigere

ಸ್ನೇಹಿತರೆ ತಂದೆ ವೀರ ಸ್ವಾಮಿಯವರ ಸಹಾಯದಿಂದ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟು ತಮ್ಮದೇ ಆದ ವಿಶಿಷ್ಟ ಅಭಿನಯ ಹಾಗೂ ನಿರ್ದೇಶನದ ಶೈಲಿಯ ಮುಖಾಂತರವಾಗಿ ಗುರುತಿಸಿಕೊಂಡಿದ್ದಂತಹ ರವಿಚಂದ್ರನ್ (Actor Ravichandran) ಅವರು ಹೊಸ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಮುಖಾಂತರ ಕನ್ನಡಕ್ಕೆ ಸಾಕಷ್ಟು ಕಲಾವಿದರ ಪರಿಚಯ ಮಾಡಿಸಿದ್ದಾರೆ.

ಇನ್ನು ಕೆಲವು ಸಂದರ್ಭಗಳಲ್ಲಿ ಬೇರೆ ಭಾಷೆಯ ನಟಿಯರನ್ನು ಕನ್ನಡಕ್ಕೆ (Kannada Cinema) ತಂದು ಅವರ ಅಮೋಘ ಅಭಿನಯದ ಪರಿಚಯವನ್ನು ನಮ್ಮ ಕನ್ನಡಿಗರಿಗೂ ಮಾಡಿಸಿದ್ದಾರೆ.

first Kannada movie of actress Kushboo and Remuneration for it

ಬಾಯ್ ಫ್ರೆಂಡ್ ಜೊತೆ ಹೋಟೆಲ್ ರೂಮಿನಲ್ಲಿ ರೆಡ್ ಹ್ಯಾಂಡ್ ಆಗಿ ಕಾಣಿಸಿಕೊಂಡ ಬಾಹುಬಲಿ ನಟಿ ತಮನ್ನಾ, ಆ ಬಾಯ್ ಫ್ರೆಂಡ್ ಯಾರು ಗೊತ್ತಾ?

ಹೀಗಿರುವಾಗ ನಟಿ ಖುಷ್ಬೂ (Actress Kushboo) ಅವರೊಂದಿಗೆ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಿರುವಂತಹ ರವಿಚಂದ್ರನ್ ತಮ್ಮದೇ ನಿರ್ದೇಶನದಲ್ಲಿ ಮೂಡಿ ಬಂದ ಹಾಗೂ ತಮ್ಮ ತಂದೆ ವೀರ ಸ್ವಾಮಿಯವರ ಈಶ್ವರಿ ಕಂಬೈನ್ಡ್ಸ್ ಪ್ರೊಡಕ್ಷನ್ ನಲ್ಲಿ ತಯಾರದಂತಹ ರಣಧೀರ ಸಿನಿಮಾಗೆ ಖುಷ್ಬೂ ಅವರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

ಹೌದು ಗೆಳೆಯರೇ ಈ ಚಿತ್ರವು ಸುಭಾಷ್ ಘಾಯ್ ನಿರ್ದೇಶನದ 1983 ಹಿಂದಿ ಚಲನ ಚಿತ್ರ ‘ಹೀರೊ’ ರಿಮೇಕ್ ಆಗಿದ್ದು, ಈ ಸಿನಿಮಾ, ತಮಿಳುನಲ್ಲಿ ವೀರನ್ ಎಂದು ತೆರೆಕಂಡಿತ್ತು.

ನಂ.1 ಕನ್ನಡ ನಿರೂಪಕಿ ಅನುಶ್ರೀ ಒಂದು ಎಪಿಸೋಡ್ ಗೆ ಪಡೆಯುವ ಸಂಭಾವನೆ ಎಷ್ಟು ಲಕ್ಷ ಗೊತ್ತೇ? ಯಾವ ಸಿನಿಮಾ ನಟಿಗಿಂತಲೂ ಕಡಿಮೆ ಇಲ್ಲ!

ಹೀಗೆ ಹಲವು ಭಾಷೆಗಳಲ್ಲಿ ತೆರೆಕಂಡು ಯಶಸ್ಸನ್ನು ಸಾಧಿಸಿದಂತಹ ಈ ಒಂದು ಸಿನಿಮಾವನ್ನು ರವಿಚಂದ್ರನ್ ನಮ್ಮ ಕನ್ನಡದಲ್ಲಿ ಮಾಡಬೇಕೆಂದು ನಿರ್ಧರಿಸುತ್ತಾರೆ. ಅದರಂತೆ ಸಿನಿಮಾಗೆ ರಣಧೀರ ಎಂದು ಶೀಷಿಕೆಯನ್ನು ಇಟ್ಟರು.

Actress Kushboo Kannada Movie
Image Source: india.com

ನಟಿ ಖುಷ್ಬೂ ರಾಧಾ ಎಂಬ ಪಾತ್ರದಲ್ಲಿ ಅದ್ಭುತವಾಗಿ ಅಭಿನಯಿಸಿ ಎಲ್ಲರ ಮನಸ್ಸನ್ನು ಗೆದ್ದರೆ, ಯಥಾಪ್ರಕಾರ ರವಿಚಂದ್ರನ್ ಅವರ ಸಿನಿಮಾಗೆ ನಾದಬ್ರಹ್ಮ ಹಂಸಲೇಖಾ ಅವರು ಸಂಗೀತ ಸಂಯೋಜನೆಯನ್ನು ಮಾಡಿದರು.

ಚೈತ್ರದ ಪ್ರೇಮಾಂಜಲಿ ರಘುವೀರ್ ಅತಿ ಚಿಕ್ಕ ವಯಸ್ಸಿನಲ್ಲಿಯೇ ಅಗಲಿಕೆಗೆ ಕಾರಣವೇನು ಗೊತ್ತಾ? ಇಲ್ಲಿದೆ ಅವರ ಕಣ್ಣೀರಿನ ಕಥೆ

ಸಿನಿಮಾ ಮ್ಯೂಸಿಕಲ್ ಹಿಟ್ ಲಿಸ್ಟ್ಗೆ ಸೇರುವುದರಲ್ಲಿಯೂ ಯಶಸ್ವಿಯಾಯಿತು. 1988 ರಲ್ಲಿ ತೆರೆಕಂಡಂತಹ ಈ ಒಂದು ಸಿನಿಮಾ ನಿರೀಕ್ಷೆಗೂ ಮೀರಿದಂತಹ ಯಶಸ್ಸನ್ನು ಪಡೆದುಕೊಳ್ಳುತ್ತದೆ ಹಾಗೂ ಬರೋಬ್ಬರಿ 25 ವಾರಗಳ ಕಾಲ ಥಿಯೇಟರ್ನಲ್ಲಿ ಭರ್ಜರಿ ಯಶಸ್ಸಿನ ಜೊತೆಗೆ ಹೌಸ್ ಫುಲ್ ಪ್ರದರ್ಶನವನ್ನು ಕಾಣುವ ಮೂಲಕ ಬ್ಲಾಕ್ಬಸ್ಟರ್ ಹಿಟ್ ಪಟ್ಟಿಗೆ ಅತಿ ಕಡಿಮೆ ಅವಧಿಯಲ್ಲಿ ಸೇರಿಕೊಂಡಿತು.

ಇನ್ನು ಕಪಾಲಿ ಥಿಯೇಟರ್ನಲ್ಲಿ 108 ದಿನಗಳ ಕಾಲ ಪೂರ್ಣ ಹೌಸ್ ಪ್ರದರ್ಶನವನ್ನು ಸಿನಿಮಾ ಕಾಣುತ್ತದೆ. ಬಾಲಿವುಡ್ನ ಬಿಗ್ ಬಿ ಅಮಿತಾಬ್ ಕಾಣಿಸಿಕೊಂಡದ್ದು ಸಿನಿಮಾಗೆ ಪ್ಲಸ್ ಪಾಯಿಂಟ್ ಆಗಿತ್ತು,

ನನ್ನ ಮುಂದೆ ರಶ್ಮಿಕಾ ಮಂದಣ್ಣ ಏನೂ ಇಲ್ಲ ಅಂದಿದ್ದ ನಟಿ ಕಾಮೆಂಟ್ ಗೆ ಶ್ರೀವಲ್ಲಿ ಕೊಟ್ಟ ಪ್ರತಿಕ್ರಿಯೆ ವೈರಲ್

ಹೀಗೆ ಚಿತ್ರ ಅಂದುಕೊಂಡದ್ದಕ್ಕಿಂತ ಹೆಚ್ಚಿನ ಯಶಸ್ಸು ಪಡೆದ ನಂತರ ಕೆಲಸ ಮಾಡಿದಂತಹ ಪ್ರತಿಯೊಬ್ಬ ಕಲಾವಿದರಿಗೂ ಕೂಡ ದುಪ್ಪಟ್ಟು ಸಂಭಾವನೆಯನ್ನು ನೀಡಲಾಯಿತು ಎಂಬ ಮಾಹಿತಿಯು ಹೊರಬಿದ್ದಿದೆ.

ನಟಿ ಖುಷ್ಬೂ
Image Source: TV9 Kannada

ಅದರಂತೆ ನಟಿ ಖುಷ್ಬೂ ಅವರಿಗೆ ಬರೋಬ್ಬರಿ 2 ಲಕ್ಷ ಸಂಭಾವನೆಯನ್ನು ಈಶ್ವರಿ ಕಂಬಾಯನ್ಸ್ ವತಿಯಿಂದ ರವಿಚಂದ್ರನ್ ಅವರೇ ನೀಡಿದರು. ಇದು ಖುಷ್ಬೂವರ ಮೊದಲ ಅತಿ ದೊಡ್ಡ ಸಂಭಾವನೆ ಹಣ ಎಂದರೆ ತಪ್ಪಾಗಲಿಕ್ಕಿಲ್ಲ.

ರವಿಚಂದ್ರನ್ ಅವರು ಯಾವ ಚಿತ್ರಕ್ಕೂ ಡಬ್ಬಿಂಗ್ ಮಾಡುತ್ತಲೇ ಇರಲಿಲ್ಲ, ಹಾಗಾದ್ರೆ ಧ್ವನಿ ನೀಡುತ್ತಿದ್ದಂತಹ ಆ ನಟ ಯಾರು ಗೊತ್ತಾ?

ಇನ್ನು ರವಿಚಂದ್ರನ್ ಹಾಗೂ ಖುಷ್ಬೂ ಅವರ ಕಾಂಬಿನೇಷನ್ನಲ್ಲಿ ಮೂಡಿ ಬಂದಿರುವ ಅಂಜದಗಂಡು, ಯುಗಪುರುಷ ಹಾಗೂ ರಣಧೀರಗಳಂತಹ ಸಿನಿಮಾಗಳಲ್ಲಿ ಅತಿ ಹೆಚ್ಚು ಅಭಿಮಾನಿಗಳು ಸೃಷ್ಟಿಯಾದರು, ಅಂದಿನ ಈ ಇಬ್ಬರ ಜೋಡಿ ಎಂದರೆ ಸಿನಿಮಾ ಪಕ್ಕಾ ಹಿಟ್ ಎಂಬ ನಿರ್ಧಾರಕ್ಕೆ ಬರುತ್ತಿತ್ತು ಗಾಂಧಿನಗರ.

first Kannada movie of actress Kushboo and Remuneration for it