ರವಿಚಂದ್ರನ್ ಅವರು ಯಾವ ಚಿತ್ರಕ್ಕೂ ಡಬ್ಬಿಂಗ್ ಮಾಡುತ್ತಲೇ ಇರಲಿಲ್ಲ, ಹಾಗಾದ್ರೆ ಧ್ವನಿ ನೀಡುತ್ತಿದ್ದಂತಹ ಆ ನಟ ಯಾರು ಗೊತ್ತಾ?
ಸ್ನೇಹಿತರೆ, ಸಾಮಾನ್ಯವಾಗಿ ರವಿಚಂದ್ರನ್ (Actor Ravichandran) ಅವರ ಆರಂಭಿಕ ಸಿನಿಮಾಗಳಲ್ಲಿ ಅವರ ಧ್ವನಿಯನ್ನು (Voice) ನಾವು ಕೇಳಿರಲು ಸಾಧ್ಯವೇ ಇಲ್ಲ ಇದಕ್ಕೆ ಮುಖ್ಯ ಕಾರಣ ರವಿಚಂದ್ರನ್ ಅವರಿಗೆ ಅಷ್ಟು ಸ್ಪಷ್ಟವಾಗಿ ಡಬ್ಬಿಂಗ್ ಮಾತಾಡಲು ಬರುತ್ತಿರಲಿಲ್ಲ.
ಹಾಗೂ ಸಿನಿಮಾಗೆ ತಕ್ಕಂತಹ ವಾಯ್ಸ್ ಸೂಟ್ ಆಗುತ್ತಿರಲಿಲ್ಲ ಎಂಬುದಾಗಿತ್ತು, ಹಾಗಾದ್ರೆ ರವಿಚಂದ್ರನ್ ಅವರ ಆರಂಭಿಕ ಸಿನಿಮಾಗಳಲ್ಲಿ ಇವರಿಗೆ ಧ್ವನಿ ನೀಡುತ್ತಿದ್ದಂತಹ ಕಲಾವಿದ ಯಾರು? ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.
ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಓಂ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದ ಉಪೇಂದ್ರ ಆಗಿನ ಕಾಲಕ್ಕೆ ಪಡೆದಿದ್ದ ಸಂಭಾವನೆ ಎಷ್ಟು ಗೊತ್ತಾ?
ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದಂತಹ ರವಿಚಂದ್ರನ್ ಅವರು ನಟನೆ ಮಾಡಲು ಪ್ರಾರಂಭ ಮಾಡಿದಾಗ ಕನ್ನಡ ಭಾಷೆಯ (Kannada Language) ಮೇಲೆ ಸಂಪೂರ್ಣ ಹಿಡಿತ ಸಿಗುವವರೆಗೂ ಡಬ್ಬಿಂಗ್ ಮಾಡಬೇಡ ಎಂಬ ಕಂಡೀಶನ್ ಅನ್ನು ಅವರ ತಂದೆ ವೀರ ಸ್ವಾಮಿಯವರು ಏರಿದ್ದರು ಈ ಕಾರಣದಿಂದ ರವಿಚಂದ್ರನ್ ಡಬ್ಬಿಂಗ್ ಮಾಡುತ್ತಿರಲಿಲ್ಲ.
ಇದರ ಸಲುವಾಗಿ ನಟ ಹಾಗೂ ಪ್ರಖ್ಯಾತ ಡಬ್ಬಿಂಗ್ ಆರ್ಟಿಸ್ಟ್ ಆಗಿರುವಂತಹ ಶ್ರೀನಿವಾಸ್ ಪ್ರಭು (Srinivas Prabhu) ಅವರು ರವಿಚಂದ್ರನ್ ಅವರ ಧ್ವನಿಯಾಗಿದ್ದರು. ಸಾವಿರ ಸುಳ್ಳು ಎಂಬ ಸಿನಿಮಾದಲ್ಲಿ ರವಿಚಂದ್ರನ್ ಅವರಿಗೆ ಧ್ವನಿ ನೀಡಲು ಪ್ರಾರಂಭ ಮಾಡಿದ ಶ್ರೀನಿವಾಸ್ ಪ್ರಭು ಅನಂತರಾ ಪ್ರೇಮಲೋಕ, ರಣಧೀರ, ಅಂಜದಗಂಡು, ಯುದ್ಧ ಕಾಂಡ, ಯುಗಪುರುಷ ಹೀಗೆ 15 ಹೆಚ್ಚು ಸಿನಿಮಾಗಳಲ್ಲಿ ರವಿಚಂದ್ರನ್ ಅವರ ಹಿನ್ನೆಲೆ ದ್ವನಿಯಾಗಿ ಗುರುತಿಸಿಕೊಂಡಿದ್ದರು.
ಈ ಒಂದೇ ಒಂದು ವಿಚಾರದಿಂದ ನಾನು ಕುಂಠಿತಾಗುತ್ತಿದ್ದೇನೆ ನನ್ನ ಸಿನಿಮಾಗೆ ನಾನೇ ಡಬ್ಬಿಂಗ್ ಮಾಡಬೇಕು ಎಂದು ರವಿಚಂದ್ರನ್ ನಿರ್ಧರಿಸುತ್ತಾರೆ. ಅದರಂತೆ ಪ್ರಪ್ರಥಮ ಬಾರಿಗೆ ರಾಮಾಚಾರಿ ಸಿನಿಮಾಗೆ ತಮ್ಮದೇ ಧ್ವನಿ ನೀಡಿದ ರವಿಚಂದ್ರನ್ ಮೊದಲ ಸಿನಿಮಾದಲ್ಲಿಯೇ ಗೆದ್ದರೂ ಎಂದರೆ ತಪ್ಪಾಗಲಾರದು.
ಹೌದು ಗೆಳೆಯರೇ ರಾಜೇಂದ್ರ ಬಾಬು ಅವರ ನಿರ್ದೇಶನದಲ್ಲಿ ಮಾಲಾಶ್ರೀ ಅವರ ನಟನೆಯಲ್ಲಿ ಮೂಡಿಬಂದಂತಹ ಈ ಒಂದು ಸಿನಿಮಾ ಬಿಡುಗಡೆಯಾದಾಗ ಜನರು ರವಿಚಂದ್ರನ್ ಅವರ ನಟನೆ ಹಾಗೂ ಧ್ವನಿಗೆ ಮೆಚ್ಚುಗೆಯನ್ನು ಸೂಚಿಸಿದರು.
ಸ್ವತಃ ರವಿಚಂದ್ರನ್ ಅವರೇ ಕರೆ ಮಾಡಿ ಕೇಳಿಕೊಂಡರು ಮಾಲಾಶ್ರೀ ಅಣ್ಣಯ್ಯ ಸಿನಿಮಾದಲ್ಲಿ ಅಭಿನಯಿಸದಿರಲು ಕಾರಣವೇನು ಗೊತ್ತಾ?
ಆನಂತರದ ಸಿನಿಮಾಗಳೆಲ್ಲದರಲ್ಲಿಯೂ ಸ್ವತಃ ರವಿ ಸರ್ ತಮ್ಮ ಧ್ವನಿಯನ್ನೇ ಬಳಸಿಕೊಂಡಿದ್ದಾರೆ ಇನ್ನು ಹಲವು ವರ್ಷಗಳ ನಂತರ ಕಡೆಯದಾಗಿ ನಟ ಶ್ರೀನಿವಾಸ್ ಪ್ರಭು ಅವರು ರವಿಚಂದ್ರನ್ ಅವರ ಕುರುಕ್ಷೇತ್ರ ಸಿನಿಮಾದಲ್ಲಿ ಡಬ್ (Voice Dubbing) ಮಾಡುವ ಮೂಲಕ ಧ್ವನಿಯಾಗಿದ್ದರು.
ಹೌದು ಗೆಳೆಯರೇ, ದರ್ಶನ್ ಅವರ ಅತ್ಯದ್ಭುತ ಐತಿಹಾಸಿಕ ಸಿನಿಮಾಗಳಲ್ಲಿ ಒಂದಾದ ಕುರುಕ್ಷೇತ್ರ ಸಿನಿಮಾದಲ್ಲಿ ರವಿಚಂದ್ರನ್ ಅವರು ಕೃಷ್ಣನಾಗಿ ಅಭಿನಯಿಸುವ ಮೂಲಕ ಮನಸ್ಸನ್ನು ಗೆದ್ದಿದ್ದರು.
ಇನ್ನು ಕೃಷ್ಣನ ಪಾತ್ರಕ್ಕೆ ರವಿಚಂದ್ರನ್ ಅವರ ಧ್ವನಿ ಸರಿ ಹೊಂದುತ್ತಿರಲಿಲ್ಲ ಆ ಸಂದರ್ಭದಲ್ಲಿ ತಟ್ಟನೆ ರವಿಚಂದ್ರನ್ ಅವರಿಗೆ ತಮ್ಮ ಆರಂಭಿಕ ದಿನಗಳಲ್ಲಿ ಡಬ್ ಮಾಡುತ್ತಿದ್ದಂತಹ ಶ್ರೀನಿವಾಸ್ ಪ್ರಭು ಅವರ ಜ್ಞಾಪಕವಾಗಿ ಅವರಿಗೆ ಒಂದೇ ಒಂದು ಕರೆ ಮಾಡಿ ಕೇಳಿಕೊಳ್ಳುತ್ತಾರೆ. ಶ್ರೀನಿವಾಸ ಪ್ರಭು ಅವರು ಬಂದು ಕೃಷ್ಣನ ಪಾತ್ರಕ್ಕೆ ಅಚ್ಚುಕಟ್ಟಾಗಿ ತಮ್ಮ ಧ್ವನಿಯನ್ನು ನೀಡುವ ಮೂಲಕ ಪಾತ್ರಕ್ಕೆ ಜೀವ ತುಂಬಿದ್ದರು.
Do you know who Given voice to Kannada Actor Ravichandran Starting Days Films
Our Whatsapp Channel is Live Now 👇