ಪುನೀತ್ ರಾಜಕುಮಾರ್ ಅಭಿನಯಿಸಬೇಕಿದ್ದ ಆ ಸಿನಿಮಾದಲ್ಲಿ ಗಣೇಶ್ ಅಭಿನಯಿಸಿ ಇತಿಹಾಸ ಸೃಷ್ಟಿಸಿದರು! ಅಷ್ಟಕ್ಕೂ ಆ ಸಿನಿಮಾ ಯಾವುದು ಗೊತ್ತಾ?

ಅಪ್ಪು ಅಭಿನಯಿಸಬೇಕಿದ್ದಂತಹ ಆ ಒಂದು ಸಿನಿಮಾದಲ್ಲಿ ಗಣೇಶ್ ಅಭಿನಯಿಸಿ ಚರಿತ್ರೆ ಸೃಷ್ಟಿಸಿದ್ದು ಹೇಗೆ? ಆ ಸಿನಿಮಾ ಯಾವುದು? ಯಾವ ಕಾರಣದಿಂದ ಪುನೀತ್ ರಾಜಕುಮಾರ್ ಈ ಸಿನಿಮಾದಲ್ಲಿ ಅಭಿನಯಿಸಲಾಗಲಿಲ್ಲ? ಎಂಬ ಎಲ್ಲಾ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿಸುವ ಹೊರಟಿದ್ದೇವೆ.

ಸ್ನೇಹಿತರೆ ಸಿನಿಮಾರಂಗದಲ್ಲಿ ಈ ರೀತಿಯಾದಂತಹ ಘಟನೆಗಳು ನಡೆಯುವುದು ಸರ್ವೇಸಾಮಾನ್ಯ, ನಿರ್ದೇಶಕರು ಯಾವುದೋ ನಟ ಅಥವಾ ನಟಿಯರನ್ನು ತಮ್ಮ ತಲೆಯಲ್ಲಿ ಇಟ್ಟುಕೊಂಡು ಅವರಿಗಾಗಿಯೇ ಸಿನಿಮಾದ ಕಥೆಯನ್ನು ಎಣೆದಿರುತ್ತಾರೆ.

ಆದರೆ ಕೆಲವು ಕಾರಣಾಂತರಗಳಿಂದಾಗಿ ಆ ಸಿನಿಮಾದಲ್ಲಿ ಮತ್ಯಾವುದೋ ನಟ ಅಭಿನಯಿಸಿ ನಿರೀಕ್ಷೆಗೂ ಮೀರಿದಂತಹ ಯಶಸ್ಸನ್ನು ತಂದುಕೊಡುತ್ತಾರೆ. ತಮಗೆ ಸಮಯವಿಲ್ಲದ ಕಾರಣ, ಇಲ್ಲವೇ ಕಥೆ ಇಷ್ಟವಾಗದ ಕಾರಣ ಆ ಸಿನಿಮಾ ಒಪ್ಪಿರದ ಸನ್ನಿವೇಶಗಳು ಹಲವು ಇವೆ.

ಸ್ವತಃ ರವಿಚಂದ್ರನ್ ಅವರೇ ಕರೆ ಮಾಡಿ ಕೇಳಿಕೊಂಡರು ಮಾಲಾಶ್ರೀ ಅಣ್ಣಯ್ಯ ಸಿನಿಮಾದಲ್ಲಿ ಅಭಿನಯಿಸದಿರಲು ಕಾರಣವೇನು ಗೊತ್ತಾ?

ಪುನೀತ್ ರಾಜಕುಮಾರ್ ಅಭಿನಯಿಸಬೇಕಿದ್ದ ಆ ಸಿನಿಮಾದಲ್ಲಿ ಗಣೇಶ್ ಅಭಿನಯಿಸಿ ಇತಿಹಾಸ ಸೃಷ್ಟಿಸಿದರು! ಅಷ್ಟಕ್ಕೂ ಆ ಸಿನಿಮಾ ಯಾವುದು ಗೊತ್ತಾ? - Kannada News

ಇಂತಹ ಸಾಕಷ್ಟು ಸಿನಿಮಾಗಳ ಉದಾಹರಣೆ ನಮ್ಮ ಕನ್ನಡ ಸಿನಿಮಾ ರಂಗದಲ್ಲಿದ್ದು, ನಾವಿವತ್ತು ಅಪ್ಪು ಅಭಿನಯಿಸಬೇಕಿದ್ದಂತಹ ಆ ಒಂದು ಸಿನಿಮಾದಲ್ಲಿ ಗಣೇಶ್ ಅಭಿನಯಿಸಿ ಚರಿತ್ರೆ ಸೃಷ್ಟಿಸಿದ್ದು ಹೇಗೆ? ಆ ಸಿನಿಮಾ ಯಾವುದು? ಯಾವ ಕಾರಣದಿಂದ ಪುನೀತ್ ರಾಜಕುಮಾರ್ ಈ ಸಿನಿಮಾದಲ್ಲಿ ಅಭಿನಯಿಸಲಾಗಲಿಲ್ಲ? ಎಂಬ ಎಲ್ಲಾ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿಸುವ ಹೊರಟಿದ್ದೇವೆ.

ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ನಟಿ ದಾಮಿನಿ ಸಿನಿಮಾ ರಂಗದಿಂದ ದೂರ ಉಳಿಯಲು ಕಾರಣವೇನು? ಇಲ್ಲಿದೆ ಆಕೆಯ ಕಣ್ಣೀರಿನ ಕಥೆ

ಆ ಸಿನಿಮಾ ಮತ್ಯಾವುದು ಅಲ್ಲ, ಜಯಂತ್ ಕಾಯ್ಕಿಣಿ ಅವರ ಅದ್ಭುತ ಸಾಹಿತ್ಯ ಮನೋಮೂರ್ತಿಯವರ ಸಂಗೀತ, ಕೃಷ್ಣ ಅವರ ಕ್ಯಾಮೆರಾ, ಹಾಗೂ ಯೋಗರಾಜ್ ಭಟ್ರ ನಿರ್ದೇಶನ ಗಣೇಶ್ ಹಾಗೂ ಪೂಜಗಾಂಧಿಯವರ ಅದ್ಭುತ ಅಭಿನಯ ಮುದ್ದಾದ ಮೊಲ ಹೀಗೆ ಬಹುದೊಡ್ಡ ತಾರಾ ಬಳಗದಲ್ಲಿ ತಯಾರದಂತಹ ಚಿತ್ರ ಮುಂಗಾರು ಮಳೆ.

Actor Puneeth Rajkumar

ಇನ್ನು ಈ ಒಂದು ಸಿನಿಮಾದ ಕಥೆಯನ್ನು ಮೊದಲು ಯೋಗರಾಜ್ ಭಟ್ಟರು ಪ್ರೀತಂ ಗುಬ್ಬಿಯವರಿಗೆ ವಿವರಿಸಿದಾಗ ಅವರು ಪುನೀತ್ ರಾಜಕುಮಾರ್ ಅವರ ಹೆಸರನ್ನು ಸೂಚಿಸಿ ಈ ಒಂದು ಚಿತ್ರಕಥೆ ಅವರಿಗೆ ಹೇಳಿ ಮಾಡಿಸಿದಂತಿದೆ. ಒಮ್ಮೆ ಅವರ ಬಳಿ ಕಥೆ ಹೇಳಿ ಆನಂತರ ನೋಡೋಣ ಎಂಬ ಸೂಚನೆ ನೀಡಿದರು.

ನಟಿ ಸುಹಾಸಿನಿ ಅವರ ಬಗ್ಗೆ ನಿಮಗೆ ಗೊತ್ತಿಲ್ಲದ ಕುತೂಹಲಕಾರಿ ವಿಷಯಗಳು! ಎಲ್ಲಿದ್ದಾರೆ? ಹೇಗಿದ್ದಾರೆ ಗೊತ್ತಾ?

ಭಟ್ರು ತಮ್ಮ ಸಿನಿಮಾದ ಕಥೆಯನ್ನು ಪುನೀತ್ ರಾಜಕುಮಾರ್ ಅವರಿಗೆ ಸಂಪೂರ್ಣ ವಿವರಿಸಿ ಹಾಗೂ ಮಳೆಗಾಲದ ಅವಧಿಯಲ್ಲಿ ತಮ್ಮ ಡೇಟ್ಸ್ ಕೊಡುವಂತೆ ಕೇಳಿಕೊಂಡಾಗ ಆ ಸಮಯದಲ್ಲಿ ಪುನೀತ್ ರಾಜಕುಮಾರ್ ಸಾಕಷ್ಟು ಸಿನಿಮಾಗಳಿಗೆ ಡೇಟ್ ನೀಡಿಬಿಟ್ಟಿದ್ದರು.

ಈ ಕಾರಣದಿಂದ ಮುಂಗಾರು ಮಳೆ ಸಿನಿಮಾದಲ್ಲಿ ಅಭಿನಯಿಸಲಾಗಲಿಲ್ಲವಂತೆ. ಹೀಗೆ ಪುನೀತ್ ರಾಜಕುಮಾರ್ ಅವರಿಂದ ತಿರಸ್ಕೃತವಾದಂತಹ ಈ ಸಿನಿಮಾಗೆ ಯಶಸ್ಸನ್ನು ಎದುರು ನೋಡುತ್ತಿದ್ದಂತಹ ಗಣೇಶ್ ಅವರು ಆಯ್ಕೆಯಾದರೂ.

Actor Golden Star Ganesh

ಹೀಗೆ ತಮ್ಮ ಅದ್ಭುತ ಅಭಿನಯ ಹಾಗೂ ಡೈಲಾಗ್ ಡೆಲಿವರಿಯ ಮೂಲಕ ಆಗಿನ ಕಾಲದ ಪ್ರೇಕ್ಷಕರ ಮನಸ್ಸನ್ನು ಗೆದ್ದಿದಂತಹ ಗಣೇಶ್ ಈ ಒಂದು ಸಿನಿಮಾದಿಂದ ತಮ್ಮ ಸಿನಿ ಬದುಕನ್ನು ಬದಲಿಸಿಕೊಂಡರು.

ಮತ್ತೆ ಹಿಂದಿರುಗಿ ನೋಡದಂತಹ ಅಭಿನಯದ ಮೂಲಕವೇ ಇಂದು ಯಶಸ್ವಿ ಸಿನಿಮಾಗಳ ಮೂಲಕ ಗೋಲ್ಡನ್ ಸ್ಟಾರ್ ಆಗಿ ಕನ್ನಡ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಇನ್ನು ಈ ಒಂದು ಚಿತ್ರದಲ್ಲಿ ಅಪ್ಪು ಏನಾದರೂ ಅಭಿನಯಿಸಲು ಒಪ್ಪಿಗೆ ಸೂಚಿಸಿದ್ದರೆ, ಸಿನಿಮಾ ಹಿಟ್ ಆಗುವುದು ಪಕ್ಕಾ, ಆದರೆ ಗಣೇಶ್ ಅವರಂತಹ ಒಂದು ಒಳ್ಳೆ ನಟ ನಮ್ಮ ಕನ್ನಡ ಸಿನಿಮಾರಂಗದಲ್ಲಿ ನೆಲೆಯೂರಲು ಸಾಧ್ಯವಾಗುತ್ತಿರಲಿಲ್ಲವೋ ಏನೋ?

ನಿಮ್ಮ ಪ್ರಕಾರ ಈ ಸಿನಿಮಾ ಯಾವ ನಟನಿಗೆ ಹೇಳಿ ಮಾಡಿಸಿದಂತಿದೆ ಎಂಬ ಮಾಹಿತಿಯನ್ನು ತಪ್ಪದೆ ನಮಗೆ ಕಮೆಂಟ್ ಮೂಲಕ ತಿಳಿಸಿ…

Ganesh created history supposed to be acted by Puneeth Rajkumar in That Movie

Follow us On

FaceBook Google News

Ganesh created history supposed to be acted by Puneeth Rajkumar in That Movie

Read More News Today