ಆಗಸ್ಟ್ 15ನೇ ತಾರೀಕು 1961 ರ ಪರಮಕುಡಿ, ಮದ್ರಾಸ್ ಅಂದರೆ ಇಂದಿನ ತಮಿಳುನಾಡಿನಲ್ಲಿ ಜನಿಸಿದಂತಹ ನಟಿ ಸುಹಾಸಿನಿ (Actress Suhasini Maniratnam) ಚಿಕ್ಕಂದಿನಿಂದಲೂ ಓದು ಹಾಗೂ ಕಲೆಯ ಮೇಲೆ ಬಹಳನೇ ಆಸಕ್ತಿ ಹೊಂದಿದ್ದ ಕಾರಣ ಶಾಲಾ ದಿನಗಳಿಂದಲೂ ಸಣ್ಣಪುಟ್ಟ ಡ್ರಾಮ ಹಾಗೂ ನೃತ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.
ಹೀಗೆ ನಟಿ ಸುಹಾಸಿನಿ ಅವರು ತನ್ನ ಅಜ್ಜಿ ಮತ್ತು ಚಿಕ್ಕಪ್ಪ ಕಮಲ್ ಹಾಸನ್ ಅವರ ಜೊತೆ ವಾಸಿಸಲು 12ನೇ ವಯಸ್ಸಿನಲ್ಲಿಯೇ ಮದ್ರಾಸ್ ಗೆ ತೆರಳಿದರು. ಅಲ್ಲಿಂದ ಇವರ ಕಲಾ ಕೌಶಲ್ಯತೆ ಇನ್ನಷ್ಟು ಹೆಚ್ಚಾಯಿತು. ಕಮಲ್ ಹಾಸನ್ ಅವರನ್ನು ನೋಡಿಕೊಂಡು ತಾನು ಕೂಡ ನಟಿಯಾಗಬೇಕು ಎಂದು ಅಂದುಕೊಳ್ಳುತ್ತಿದ್ದರು.
ಹೀಗೆ 1980ರಲ್ಲಿ ನೆಂಜತೈ ಕಿಲ್ಲಾತೆ ಎಂಬ ತಮಿಳು ಸಿನಿಮಾ ಒಂದರ ಮೂಲಕ ಬಣ್ಣದ ಲೋಕವನ್ನು ಪ್ರವೇಶ ಮಾಡಿದರು. ಮೊದಲ ಸಿನಿಮಾದಲ್ಲಿಯೇ ಅತಿ ಅದ್ಬುತ ನಟನೆ ಮಾಡಿ ತಮಿಳುನಾಡು ರಾಜ್ಯ ಸರ್ಕಾರ ಪ್ರಶಸ್ತಿಯನ್ನು ನಟಿ ಸುಹಾಸಿನಿ ತಮ್ಮ ಮುಡಿಗೇರಿಸಿಕೊಂಡರು.
ಆನಂತರ 1983ರಲ್ಲಿ ತೆರೆಕಂಡ ಮಲಯಾಳಂನ ಕುಡಿವೆಡೆ ಎಂಬ ಸಿನಿಮಾದ ಮೂಲಕ ಮುಮ್ಮುಟ್ಟಿ ಅವರ ಜೊತೆ ಅಭಿನಯಿಸುವಂತಹ ಭಾಗ್ಯ ಕಲ್ಪಿಸಿಕೊಂಡಂತಹ ಸುಹಾಸಿನಿಯವರು ಪಡೆದುಕೊಂಡು ಮಲಯಾಳಂ ಸಿನಿಮಾ ರಂಗದಲ್ಲಿಯೂ ಗುರುತಿಸಿಕೊಂಡರು. ಅದರಂತೆ ನಟ ಮೋಹನ್ ಲಾಲ್ ಅವರೊಂದಿಗೆ ವಾನಪ್ರಸ್ತಂ ಸಿನಿಮಾದಲ್ಲಿ ನಟಿಸಿದ ಸುಹಾಸಿನಿ ಅವರಿಗೆ ವಿಷ್ಣುವರ್ಧನ್ ಅವರ ಬಂಧನ ಸಿನಿಮಾದಲ್ಲಿ ನಟಿಸುವಂತಹ ಅವಕಾಶ ದೊರಕುತ್ತದೆ.
ಪರಸಂಗದ ಗೆಂಡೆತಿಮ್ಮ ಚಿತ್ರಕ್ಕೆ ಹಿರಿಯ ನಟ ಲೋಕೇಶ್ ಪಡೆದ ದುಬಾರಿ ಸಂಭಾವನೆ ಎಷ್ಟು ಗೊತ್ತೇ?
ಈ ಮೂಲಕ ಕನ್ನಡ ಸಿನಿಮಾರಂಗಕ್ಕೆ (Kannada Film Industry) ಎಂಟ್ರಿ ನೀಡಿದ ಸುಹಾಸಿನಿ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮನಗೆದ್ದರು. ಹೌದು ಸುಪ್ರಭಾತ, ಮುತ್ತಿನ ಹಾರ, ಹಿಮಪಾತ, ಹೆಂಡತಿಗೆ ಹೇಳ್ತೀನಿ, ಮಾತಾಡು ಮಲ್ಲಿಗೆ, ಸ್ಕೂಲ್ ಮಾಸ್ಟರ್, ಅಮೃತವರ್ಷಿಣಿ ಮೊದಲದ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಸುಹಾಸಿನಿ ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ಅಭಿನಯಿಸಿದ್ದಾರೆ.
ಇನ್ನು ಸಿಂಧು ಭೈರವಿ ಎಂಬ ಚಲನಚಿತ್ರಕ್ಕೆ ಅತ್ಯುತ್ತಮ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಸುಹಾಸಿನಿ ತಮ್ಮ ಮೂಡಿಗೆರೆಸಿಕೊಂಡಿದ್ದಾರೆ. ಇನ್ನು ಇವರ ವೈಯಕ್ತಿಕ ವಿಚಾರದ ಕುರಿತು ನೋಡುವುದಾದರೆ ಸುಹಾಸಿನಿ ಅವರು ಸಿನಿಮಾ ರಂಗದ ಉತ್ತುಂಗದ ಶಿಖರದಲ್ಲಿರುವಾಗಲೇ ಖ್ಯಾತ ನಿರ್ದೇಶಕರಾದಂತಹ ಮಣಿರತ್ನಂ ಅವರೊಂದಿಗೆ 26 ನೇ ತಾರೀಕು ಆಗಸ್ಟ್ 1988 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
‘ನೀನು ನನ್ನ ಫಾರೆವರ್ ಲವರ್’ ಎಂದು ರಶ್ಮಿಕಾ ಮಂದಣ್ಣ ಪೋಸ್ಟ್, ಆದ್ರೆ ಅದು ವಿಜಯ್ ದೇವರಕೊಂಡ ಅಲ್ಲವಂತೆ!
ಇವರಿಗೆ ನಂದನ್ ಎಂಬುವ ಮಗನು ಇದ್ದಾನೆ, ಕೇವಲ ನಟನೆಯಲ್ಲಿ ಮಾತ್ರವಲ್ಲದೆ ನಿರ್ಮಾಣದಲ್ಲಿಯೂ ತೊಡಗಿಕೊಂಡಿರುವಂತಹ ಸುಹಾಸಿನಿ ಅವರು ಪತಿ ಮಣಿರತ್ನಂ ಅವರ ಸಹಾಯದಿಂದ ಮದ್ರಾಸ್ ಟಾಕೀಸ್ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದಾರೆ.
ಅಷ್ಟೇ ಅಲ್ಲದೆ ಸಹಾಯಕ ನಿರ್ದೇಶಕಿಯಾಗಿಯೂ ಕೆಲಸ ಮಾಡುವ ಮೂಲಕ ಗಂಡನಿಗೆ ಸಪೋರ್ಟ್ ಮಾಡುವ ಮಾದರಿಯ ಹೆಂಡತಿಯಾಗಿ ಸುಹಾಸಿನಿ ಹೊರಹೊಮ್ಮಿದ್ದಾರೆ.
ಶಂಕರ್ ನಾಗ್ ನಿರ್ದೇಶನದ ಒಂದು ಮುತ್ತಿನ ಕಥೆ ಸಿನಿಮಾ ಪಾರ್ವತಮ್ಮನವರಿಗೆ ಇಷ್ಟವಾಗಿರಲಿಲ್ಲ! ಕಾರಣ ಏನು ಗೊತ್ತಾ?
ಹೀಗೆ 1980 ರಿಂದ ಸಿನಿಮಾರಂಗದಲ್ಲಿ ಸಕ್ರಿಯರಾಗಿರುವ ಸುಹಾಸಿನಿ ಅವರು 61 ವರ್ಷ ಮಹಿಳಾ ಪ್ರಧಾನ ಪಾತ್ರಗಳು ಅಥವಾ ಪೋಷಕ ಪಾತ್ರಗಳ ಮೂಲಕ ಜನರನ್ನು ರಂಜಿಸುತ್ತಲೇ ಇದ್ದಾರೆ. ಈ ನಟಿ ಅಭಿನಯದ ಬಹುತೇಕ ಸಿನಿಮಾಗಳು ಯಶಸ್ವಿಯಾಗಿವೆ.
Interesting Facts About Actress Suhasini Maniratnam
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.