ನಟಿ ದಾಮಿನಿ ಸಿನಿಮಾ ರಂಗದಿಂದ ದೂರ ಉಳಿಯಲು ಕಾರಣವೇನು? ಇಲ್ಲಿದೆ ಆಕೆಯ ಕಣ್ಣೀರಿನ ಕಥೆ
ಸ್ನೇಹಿತರೆ ಅದೊಂದು ಕಾಲದಲ್ಲಿ ತಮ್ಮ ಮುಗ್ಧ ಅಭಿನಯ ಹಾಗೂ ತೊದಲು ನುಡಿಯಿಂದಲೇ ಸಿನಿರಸಿಕರ ಮನಸ್ಸನ್ನು ಗೆದ್ದಿದಂತಹ ನಟಿ ದಾಮಿನಿ (Kannada Actress Damini) ಅವಕಾಶಗಳ ಸುರಿಮಳೆ ಇದ್ದರೂ ಕೂಡ ಚಿತ್ರರಂಗವನ್ನು ತೊರೆದಿದ್ದು ಯಾಕೆ? ಈಗ ಹೇಗಿದ್ದಾರೆ? ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದಾರಾ? ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.
ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ 1999 ಉಪೇಂದ್ರ ಎಂಬ ಸಿನಿಮಾದ (Upendra Cinema) ಮೂಲಕ ಪ್ರಥಮ ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಅವರ ಜೊತೆಗೆ ತೆರೆ ಹಂಚಿಕೊಳ್ಳುವ ಅದೃಷ್ಟವನ್ನು ಪಡೆದು ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದಂತಹ ನಟಿ ದಾಮಿನಿ ಆನಂತರ ಸಾಲು ಸಾಲು ಸಿನಿಮಾಗಳ ಆಫರ್ ಗಿಟ್ಟಿಸಿಕೊಂಡರು.
ನಟಿ ಸುಹಾಸಿನಿ ಅವರ ಬಗ್ಗೆ ನಿಮಗೆ ಗೊತ್ತಿಲ್ಲದ ಕುತೂಹಲಕಾರಿ ವಿಷಯಗಳು! ಎಲ್ಲಿದ್ದಾರೆ? ಹೇಗಿದ್ದಾರೆ ಗೊತ್ತಾ?
ಸಿನಿಮಾದಲ್ಲಿ ಉಪೇಂದ್ರ ಹಾವಳಿಯನ್ನು ತಡೆಯಲಾಗದೆ ದಾಮಿನಿ, ಉಪೇಂದ್ರ ಕೇಳಿದ ಪ್ರಶ್ನೆಗೆ… ಹೌದು, ನಾನು ತಪ್ಪು ಮಾಡಿಲ್ಲ, ಗೊತ್ತಿದ್ದು ಗೊತ್ತಿದ್ದೂ ತಪ್ಪು ಮಾಡಿಲ್ಲ” ಎಂದು ದೇವರ ಮೇಲೆ ಹಾಣೆ ಮಾಡುತ್ತಾರೆ, ಆ ಸೀನ್ ಹೇಗೆ ತಾನೇ ಮರೆಯಲು ಸಾಧ್ಯ ಹೇಳಿ. ಆ ಸಿನಿಮಾದಲ್ಲಿ ದಾಮಿನಿ ಇನ್ನು ಚಿಕ್ಕ ಹುಡುಗಿ, ಹೇಳಬೇಕೆಂದರೆ ಆ ಸಿನಿಮಾದಲ್ಲಿ ಆಕೆಯ ತೊದಲು ನುಡಿಗಳೇ ಪ್ಲಸ್ ಪಾಯಿಂಟ್ ಆಯಿತು.
ಹೀಗೆ ಅದೊಂದು ಕಾಲದಲ್ಲಿ ಪಡ್ಡೆ ಹುಡುಗರ ಮನಸ್ಸನ್ನು ಗೆದ್ದಿದ್ದಂತಹ ಈ ಸುರದ್ರೂಪಿ ನಟಿ ಇದ್ದಕ್ಕಿದ್ದಾಗೆ ಸಿನಿಮಾರಂಗದಿಂದ ನಾಪತ್ತೆಯಾದದ್ದು ವಿಪರ್ಯಾಸ. ಹೌದು ಗೆಳೆಯರೇ ಉಪೇಂದ್ರ ಅವರ ನಿರ್ದೇಶನದಲ್ಲಿ ಮೂಡಿ ಬಂದ ಉಪೇಂದ್ರ ಸಿನಿಮಾಗೆ ಅದಾಗಲೇ ನಟಿ ಪ್ರೇಮ ಹಾಗೂ ಬಾಲಿವುಡ್ನ ಖ್ಯಾತ ನಟಿ ರವೀಂದ್ರ ತಂಡನ್ ಆಯ್ಕೆ ಆಗಿದ್ದು ಮೂರನೇ ನಟಿಗಾಗಿ ಹೊಸ ಮುಖದ ಹುಡುಕಾಟದಲ್ಲಿ ಇದ್ದಂತಹ ಉಪೇಂದ್ರ ಅವರ ಕಣ್ಣಿಗೆ ದಾಮಿನಿ ಬೀಳುತ್ತಾರೆ.
ಹೀಗೆ ಉಪೇಂದ್ರ ಅವರು ಕೇಳಿಕೊಂಡ ನಂತರ ಸಿನಿಮಾದಲ್ಲಿ ಅಭಿನಯಿಸಲು ಒಪ್ಪಿಕೊಂಡಂತಹ ದಾಮಿನಿ ಅವರು ಮೊದಲ ಸಿನಿಮಾದಲ್ಲಿಯೇ ದಿಗ್ಗಜರುಗಳ ಜೊತೆ ಕೆಲಸ ಮಾಡುವಂತಹ ಭಾಗ್ಯವನ್ನು ಕಲ್ಪಿಸಿಕೊಂಡರು.
ಹೀಗೆ ಈ ಚಿತ್ರ ಯಶಸ್ಸು ಕಂಡ ನಂತರ ಸಾಕಷ್ಟು ಅವಕಾಶಗಳು ಬರಲಾರಂಬಿಸಿತು. ಅದರಂತೆ ಈ ಸಿನಿಮಾದ ನಂತರ ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಿ, ಒಂದೇ ಮಾತರಂ, ಚಿಟ್ಟೆಯಂತಹ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಿದರು.
ಪರಸಂಗದ ಗೆಂಡೆತಿಮ್ಮ ಚಿತ್ರಕ್ಕೆ ಹಿರಿಯ ನಟ ಲೋಕೇಶ್ ಪಡೆದ ದುಬಾರಿ ಸಂಭಾವನೆ ಎಷ್ಟು ಗೊತ್ತೇ?
ಅದರ ಜೊತೆಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಅಸುರ ಎಂಬ ಚಿತ್ರದಲ್ಲಿಯೂ ಬಣ್ಣ ಹಚ್ಚಿ ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರವಾದರೂ ಕಾಲಕ್ರಮೇಣ ಅವಕಾಶಗಳು ಕಡಿಮೆಯಾಗುತ್ತಾ ಹೋದ ಹಾಗೆ ಸಿಕ್ಕಸಿಕ್ಕ ಸಿನಿಮಾಗಳಲ್ಲಿ ನಟನೆ ಮಾಡಲು ಪ್ರಾರಂಭ ಮಾಡಿದ ಕಾಲಕ್ರಮೇಣ ನಾಯಕ ನಟಿ ದಾಮಿನಿ ಅವರ ಇಮೇಜ್ ಕೊಂಚ ಡ್ಯಾಮೇಜ್ ಮಾಡಿಕೊಂಡರು ಎಂದರೆ ತಪ್ಪಾಗಲಾರದು.
ಹೌದು ಗೆಳೆಯರೇ ಉಪೇಂದ್ರ ಹಾಗೂ ಅಸುರ ಗಳಂತಹ ಎರಡು ಸಿನಿಮಾಗಳನ್ನು ಬಿಟ್ಟರೆ ಯಾವ ಸಿನಿಮಾ ಹೇಳಿಕೊಳ್ಳುವ ಯಶಸ್ಸು ತಂದು ಕೊಡಲಿಲ್ಲ. ಅಂತಿಮವಾಗಿ ಸಿನಿಮಾಗಳ ಅವಕಾಶಗಳೇ ಇಲ್ಲದೆ ಬ್ರಿಗೇಡ್ ಎಂಬ ಸಿನಿಮಾದಲ್ಲಿ ಸಾಕಷ್ಟು ಹಸಿ ಬಿಸಿ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಶುರು ಮಾಡಿದರು. ಆನಂತರ ಬ್ರಿಗೇಡ್ ಎಂಬ ಸಿನಿಮಾದಲ್ಲಿ ನಟನೆ ಮಾಡಿ ಸಂಪೂರ್ಣ ದಾಮಿನಿ ಅವರ ಇಮೇಜ್ ನೆಲಕಚ್ಚಿತ್ತು.
‘ನೀನು ನನ್ನ ಫಾರೆವರ್ ಲವರ್’ ಎಂದು ರಶ್ಮಿಕಾ ಮಂದಣ್ಣ ಪೋಸ್ಟ್, ಆದ್ರೆ ಅದು ವಿಜಯ್ ದೇವರಕೊಂಡ ಅಲ್ಲವಂತೆ!
ಸಿನಿಮಾ ರಂಗದಲ್ಲಿ (Kannada Film Industry) ಇವರನ್ನು ಬೇರೆಯದ್ದೇ ರೀತಿಯಲ್ಲಿ ಬಿಂಬಿಸಲು ಶುರು ಮಾಡಿದರು. ಈ ಕಾರಣದಿಂದ ಕನ್ನಡದ ಯಾವ ಸಿನಿಮಾಗಳಲ್ಲಿಯೂ ಇವರಿಗೆ ಆಕಾಶ ದೊರಕಲಿಲ್ಲ ಆನಂತರ 2009ರಲ್ಲಿ ಹುಚ್ಚ ವೆಂಕಟ್ ನಿರ್ದೇಶನದಲ್ಲಿ ಮೂಡಿ ಬಂದ ಸ್ವತಂತ್ರ ಪಾಳ್ಯ ಸಿನಿಮಾದಲ್ಲಿ ಅಭಿನಯ ಮಾಡಿದರು. ಆನಂತರ ದಾಮಿನಿ ಅವರಿಗೆ ಸಿನಿ ರಂಗದ ವಾಸ್ತವ ಅರ್ಥವಾಗಿ ಸಿನಿಮಾರಂಗದಿಂದ ದೂರ ಉಳಿಯಲು ನಿರ್ಧಾರ ಮಾಡಿಬಿಟ್ಟರು.
Why did Kannada actress Damini stay away from the film industry