ಹುಟ್ಟುಹಬ್ಬದಂದು ನಟ ದರ್ಶನ್ ನೆನೆದು ರಚಿತಾ ರಾಮ್ ಭಾವುಕ! ಇಲ್ಲಿದೆ ವಿಡಿಯೋ

Rachita Ram: ಹುಟ್ಟುಹಬ್ಬದಂದು ಅಭಿಮಾನಿಗಳ ಪ್ರೀತಿಯಲ್ಲಿ ಮಿಂದೆದ್ದ ನಟಿ ರಚಿತಾ ರಾಮ್, ನಟ ದರ್ಶನ್ ಅವರನ್ನು ಭೇಟಿ ಮಾಡಲು ಸಾಧ್ಯವಾಗದ ನೋವನ್ನು ಹಂಚಿಕೊಂಡು ಭಾವುಕರಾದರು.

Rachita Ram: ಬೆಂಗಳೂರು ನಗರದ ಆರ್.ಆರ್. ನಗರದ ನಿವಾಸದಲ್ಲಿ ನಟಿ ರಚಿತಾ ರಾಮ್ (Rachita Ram) ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಸಂಭ್ರಮದಿಂದ ಆಚರಿಸಿಕೊಂಡರು. ರಾತ್ರಿ 12 ಗಂಟೆಗೆ ಕೇಕ್ ಕತ್ತರಿಸುವ ಮೂಲಕ ಬರ್ತ್‌ಡೇ (Birthday) ಆಚರಣೆಗೆ ಚಾಲನೆ ನೀಡಿದ ನಟಿಗೆ ನೂರಾರು ಅಭಿಮಾನಿಗಳು ಶುಭಾಶಯ ಕೋರಿದರು.

ಕನ್ನಡ ಚಿತ್ರರಂಗದಲ್ಲಿ (Kannada Film Industry) ಸುಮಾರು 14 ವರ್ಷಗಳಿಂದ ಗುರುತಿಸಿಕೊಂಡಿರುವ ರಚಿತಾ ರಾಮ್, ತಮ್ಮ ವಿಶೇಷ ದಿನವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡು ಸಂತಸಪಟ್ಟರು. ಅಭಿಮಾನಿಗಳ ಕೂಗು, ಶುಭಾಶಯ ಹಾಗೂ ಪ್ರೀತಿಗೆ ನಟಿ ಧನ್ಯವಾದ ತಿಳಿಸಿದರು.

ಈ ವೇಳೆ ದರ್ಶನ್ ಅವರನ್ನು ನೆನೆದ ರಚಿತಾ ರಾಮ್, ಇತ್ತೀಚೆಗೆ ಅವರ ಆಶೀರ್ವಾದ ಪಡೆಯಲು ತೆರಳಿದ್ದರೂ ಭೇಟಿಯಾಗಲು ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ವಾರದಲ್ಲಿ ಎರಡು ಭೇಟಿಗೆ ಮಾತ್ರ ಅವಕಾಶ ಇರುವುದರಿಂದ ಕುಟುಂಬದವರು ಅವರನ್ನು ಭೇಟಿಯಾಗಬೇಕಿತ್ತು. ಹೀಗಾಗಿ ತಾವು ಸುಮಾರು ಎರಡೂವರೆ ಗಂಟೆ ಕಾದು ನಂತರ ವಾಪಸ್ ಬಂದಿರುವುದಾಗಿ ಹೇಳಿದರು.

ಇದನ್ನೂ ಓದಿ: ನಟ ದರ್ಶನ್ ಕೇಸ್‌ನಲ್ಲಿ ಕೋರ್ಟ್‌ ಖಡಕ್ ಆದೇಶ, ಪೊಲೀಸರ ಎಂಟ್ರಿಗೆ ಬ್ರೇಕ್! ಬಿಗ್ ಅಪ್ಡೇಟ್

Kannada actress Rachita Ram

“ಅವರ ಆಶೀರ್ವಾದ ನನ್ನ ಮೇಲೆ ಇದೆ. ಮತ್ತೆ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯುತ್ತೇನೆ” ಎಂದು ರಚಿತಾ ರಾಮ್ ಭಾವುಕರಾಗಿ ಹೇಳಿದರು.

ಅಭಿಮಾನಿಗಳ ಪ್ರೀತಿಗೆ ಪ್ರತಿಕ್ರಿಯಿಸಿದ ನಟಿ, ಇಷ್ಟೊಂದು ಸಂಖ್ಯೆಯಲ್ಲಿ ಬಂದು ತಮ್ಮ ಹುಟ್ಟುಹಬ್ಬವನ್ನು ವಿಶೇಷವಾಗಿಸಿದ್ದಕ್ಕಾಗಿ ಧನ್ಯವಾದ ತಿಳಿಸಿದರು. ಅಭಿಮಾನಿಗಳ ಸಂಭ್ರಮದ ಕೂಗು ತಮ್ಮ ಕುಟುಂಬದವರಿಗಾಗಿ ಎಂಬುದನ್ನು ಉಲ್ಲೇಖಿಸಿ, ಅವರೊಂದಿಗೆ ಸಂತಸ ಹಂಚಿಕೊಂಡರು.

ಇದೇ ವೇಳೆ ಅಭಿಮಾನಿಗಳಿಗೆ ಸರಳವಾದ ಸಂದೇಶವನ್ನೂ ನೀಡಿದ ರಚಿತಾ ರಾಮ್, ಯಾರಿಗೂ ಕೆಟ್ಟದ್ದನ್ನು ಮಾಡದೆ ಒಳ್ಳೆಯ ರೀತಿಯಲ್ಲಿ ಬದುಕಬೇಕು ಎಂದು ಸಲಹೆ ನೀಡಿದರು. “ಇರೋದು ಒಂದು ಜೀವನ. ಚೆನ್ನಾಗಿ ಎಂಜಾಯ್ ಮಾಡಿ. ಒಳ್ಳೆತನದಲ್ಲಿ ದುಡ್ಡು ಮಾಡಿ, ಕೈಲಾದ ಸಹಾಯ ಮಾಡಿ” ಎಂದು ಹೇಳಿದರು.

English Summary▼

ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.

Ramya

Sub Editor, Cinema, Health & Lifestyle : 👤 Ramya is a journalist with five years of experience in… More »

Related Stories