ಹಳ್ಳಿ ಸೊಗಡಿನ ಪಾತ್ರಗಳ ಮೂಲಕ ಸಿನಿ ಪ್ರೇಕ್ಷಕರಿಗೆ ಮನೋರಂಜನೆಯ ಮಹದೂಟವನ್ನು ನೀಡಿದಂತಹ ರವಿಚಂದ್ರನ್ (Actor Ravichandran) ತಮ್ಮ ವಿಶಿಷ್ಟ ಪರಿಯ ಸಿನಿಮಾಗಳಿಂದ ತಮ್ಮದೇ ಆದ ಚಾಪನ್ನು ಕನ್ನಡ ಸಿನಿಮಾ ರಂಗದಲ್ಲಿ (Kannada Film Industry) ಮೂಡಿಸಿದರು.
ಇನ್ನು ರವಿಚಂದ್ರನ್ ಹೆಚ್ಚಿನದಾಗಿ ಅಭಿನಯಿಸಿರುವುದು ಬಹುತೇಕ ರೀಮೇಕ್ ಸಿನಿಮಾಗಳಲ್ಲಾದರು ಕೂಡ ಆ ಪಾತ್ರಕ್ಕೆ ತಮ್ಮದೇ ಶೈಲಿಯಲ್ಲಿ ನಟಿಸಿ ಹಾಗೂ ಸಿನಿಮಾದ ನಿರ್ದೇಶನದಲ್ಲಿಯೂ ಕೆಲ ಬದಲಾವಣೆಗಳನ್ನು ರೂಪಿಸಿ ಸಿನಿಮಾದ ಯಶಸ್ಸಿಗೆ ಕಾರಣವಾಗುತ್ತಿದ್ದರು.
ಅಣ್ಣಯ್ಯ, ಹಳ್ಳಿಮೇಷ್ಟ್ರು ದಂತಹ ಸಿನಿಮಾದಿಂದ ಇನ್ನಷ್ಟು ಯಶಸ್ಸನ್ನು ಪಡೆದುಕೊಂಡರು. ರವಿಚಂದ್ರನ್ ಹಾಗೂ ಮಾಲಾಶ್ರೀ (Actress Malashree) ಅವರ ಜೋಡಿ ರಾಮಾಚಾರಿ ಸಿನಿಮಾದಲ್ಲಿ ಮಾಡಿದಂತಹ ಮೋಡಿಯನ್ನು ಜನರು ತಲೆಯಲ್ಲಿಟ್ಟುಕೊಂಡು ಮತ್ತೆ ಇವರಿಬ್ಬರನ್ನು ನಟಿಸುವಂತೆ ಸಾಕಷ್ಟು ಸಂದರ್ಶನಗಳಲ್ಲಿ ಕೇಳಿಕೊಳ್ಳುತ್ತಿದ್ದರು.
ನಟಿ ದಾಮಿನಿ ಸಿನಿಮಾ ರಂಗದಿಂದ ದೂರ ಉಳಿಯಲು ಕಾರಣವೇನು? ಇಲ್ಲಿದೆ ಆಕೆಯ ಕಣ್ಣೀರಿನ ಕಥೆ
ಈ ಕುರಿತು ಮನಸ್ಸು ಮಾಡಿದಂತಹ ರವಿಚಂದ್ರನ್ ಅವರ ಸ್ವತಃ ತಾವೇ ಮಾಲಾಶ್ರೀ ಅವರಿಗೆ ಕರೆ ಮಾಡಿ ಅಣ್ಣಯ್ಯ ಸಿನಿಮಾದಲ್ಲಿ (Annayya Movie) ಅಭಿನಯಿಸುವಂತೆ ಕೇಳಿಕೊಂಡಾಗ ಮಾಲಾಶ್ರೀ ಏಕ್ ದಮ್ ನಿರಾಕರಿಸಿ ಬಿಟ್ಟರಂತೆ.
ಅಷ್ಟಕ್ಕೂ ಆಕೆ ಹೀಗೆ ಹೇಳಲು ಕಾರಣವೇನು ಇವರಿಬ್ಬರ ನಡುವೆ ಯಾವುದಾದರೂ ಭಿನ್ನಾಭಿಪ್ರಾಯ ಸೃಷ್ಟಿಯಾಗಿತ್ತಾ ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ, ರವಿಚಂದ್ರನ್ ಹಾಗೂ ಮಾಲಾಶ್ರೀ ಅವರು ರಾಮಾಚಾರಿ ಸಿನಿಮಾದ ನಂತರ ಒಂದೊಳ್ಳೆ ಬಾಂಧವ್ಯವನ್ನು ಸೃಷ್ಟಿಸಿಕೊಳ್ಳುತ್ತಾರೆ ಹಾಗೂ ರವಿಚಂದ್ರನ್ ಅವರ ಜೊತೆ ಕೆಲಸ ಮಾಡಬೇಕು ಎಂಬ ಆಸೆಯನ್ನು ಅದೆಷ್ಟೋ ಬಾರಿ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಿದೆ. ಈ ಸುಮಧುರವಾದಂತಹ ಅವಕಾಶ ಮಾಲಾಶ್ರೀ ಅವರ ಪಾಲಿಗೆ ಒದಗಿ ಬಂದಾಗಲೆಲ್ಲ ಕಾಲದ ಅಭಾವದಿಂದ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲವಂತೆ.
ಪರಸಂಗದ ಗೆಂಡೆತಿಮ್ಮ ಚಿತ್ರಕ್ಕೆ ಹಿರಿಯ ನಟ ಲೋಕೇಶ್ ಪಡೆದ ದುಬಾರಿ ಸಂಭಾವನೆ ಎಷ್ಟು ಗೊತ್ತೇ?
ಹೌದು ಗೆಳೆಯರೇ ಆಗಿನ ಕಾಲದಲ್ಲಿ ಮಾಲಾಶ್ರೀ ಅವರು ಬಹು ದೊಡ್ಡ ಮಟ್ಟದ ಪೀಕ್ನಲ್ಲಿ ಇದ್ದಂತಹ ನಟಿ ವರ್ಷಕ್ಕೆ 10 ರಿಂದ 19 ಸಿನಿಮಾಗಳಲ್ಲಿ ಅಭಿನಯಿಸುತ್ತಾ ಕನ್ನಡದ ಎಲ್ಲಾ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡು ತಿಂಗಳಿಗೊಂದು ಸಿನಿಮಾಗಳನ್ನು ಬಿಡುಗಡೆ ಮಾಡುತ್ತಿದ್ದಂತಹ ನಟಿ.
ನಟಿ ಸುಹಾಸಿನಿ ಅವರ ಬಗ್ಗೆ ನಿಮಗೆ ಗೊತ್ತಿಲ್ಲದ ಕುತೂಹಲಕಾರಿ ವಿಷಯಗಳು! ಎಲ್ಲಿದ್ದಾರೆ? ಹೇಗಿದ್ದಾರೆ ಗೊತ್ತಾ?
ಹಳ್ಳಿ ಸೊಗಡಿನ ಸಿನಿಮಾವಾದಂತಹ ಅಣ್ಣಯ್ಯ ಚಿತ್ರಕ್ಕೆ ನಾಯಕಿಯನ್ನು ಹುಡುಕುತ್ತಿದ್ದಂತಹ ಸಂದರ್ಭದಲ್ಲಿ ಮಾಲಾಶ್ರೀ ಅವರು ಉತ್ತಮ ಆಯ್ಕೆ ಆಗಿರುತ್ತಾರೆ ಎಂದು ರವಿಚಂದ್ರನ್ ನಿರ್ಧರಿಸಿ ಅವರ ಬಳಿ ತಮ್ಮ ಸಿನಿಮಾದಲ್ಲಿ ನಟಿಸುವಂತೆ ಕೇಳಿಕೊಂಡಾಗ ಅವರು ಅದಾಗಲೇ ತಮ್ಮ ಎಲ್ಲ ಡೇಟ್ಸ್ ಗಳನ್ನು ಬೇರೆ ಸಿನಿಮಗಳಿಗಾಗಿ ನಿಗದಿಪಡಿಸಿಕೊಂಡಿದ್ದರು.
ಈ ಕಾರಣದಿಂದ ಚಿತ್ರದಲ್ಲಿ ನಟಿಸಲಾಗಲಿಲ್ಲ ಹೀಗಾಗಿ ಮಧು ಬಾಲ ಅವರೊಂದಿಗೆ ರವಿಚಂದ್ರನ್ ನಟಿಸುತ್ತಾರೆ. ಇವರಿಬ್ಬರ ಕಾಂಬಿನೇಷನ್ ತೆರೆಯ ಮೇಲೆ ಬೇರೆ ರೀತಿಯಲ್ಲಿ ಜನರಿಗೆ ಇಷ್ಟವಾಗಿ ಸಿನಿಮಾ ಬಹುದೊಡ್ಡ ಮಟ್ಟದ ಯಶಸ್ಸನ್ನು ಸಾಧಿಸುತ್ತದೆ.
ಶಂಕರ್ ನಾಗ್ ನಿರ್ದೇಶನದ ಒಂದು ಮುತ್ತಿನ ಕಥೆ ಸಿನಿಮಾ ಪಾರ್ವತಮ್ಮನವರಿಗೆ ಇಷ್ಟವಾಗಿರಲಿಲ್ಲ! ಕಾರಣ ಏನು ಗೊತ್ತಾ?
ಇನ್ನು ಅಣ್ಣಯ್ಯ ಸಿನಿಮಾವನ್ನು ಮಾಲಾಶ್ರೀ ಹೊರತು ಮಧು ಬಾಲ ಆ ಪಾತ್ರಕ್ಕೆ ಬಹಳ ಅಚ್ಚುಕಟ್ಟಾಗಿ ಜೀವ ತುಂಬುವ ಮೂಲಕ ಸಿನಿಮಾವನ್ನು ನಿರೀಕ್ಷೆ ಮೀರಿದ ಯಶಸ್ಸನ್ನು ಪಡೆದರು ಎಂದರೆ ತಪ್ಪಾಗಲಾರದು
Do you know the reason Actress Malashree Rejecting Annayya Movie
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.