ಚೈತ್ರದ ಪ್ರೇಮಾಂಜಲಿ ರಘುವೀರ್ ಅತಿ ಚಿಕ್ಕ ವಯಸ್ಸಿನಲ್ಲಿಯೇ ಅಗಲಿಕೆಗೆ ಕಾರಣವೇನು ಗೊತ್ತಾ? ಇಲ್ಲಿದೆ ಅವರ ಕಣ್ಣೀರಿನ ಕಥೆ
ರಘುವೀರ್ ಅಲ್ಪಾವಧಿಯಲ್ಲಿಯೇ ಇಡೀ ಕರ್ನಾಟಕದ ಜನತೆಯನ್ನು ತನ್ನತ್ತ ತಿರುಗಿ ನೋಡುವಂತೆ ಮಾಡಿಕೊಂಡಂತಹ ಕಲಾವಿದ ಎಂದರೆ ತಪ್ಪಾಗಲಾರದು. ಹೀಗೆ ಚೈತ್ರದ ಪ್ರೇಮಾಂಜಲಿ ಹಾಗೂ ಶೃಂಗಾರ ಕಾವ್ಯ ಎಂಬ ಎರಡು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿ ಗುರುತಿಸಿಕೊಂಡಿದ್ದಂತಹ ರಘುವೀರ್...
ಸ್ನೇಹಿತರೆ ಚೈತ್ರದ ಪ್ರೇಮಾಂಜಲಿ (Chaitrada Premanjali Movie) ಹಾಗೂ ಶೃಂಗಾರ ಕಾವ್ಯ ಎಂಬ ಹೆಸರು ಕೇಳುತ್ತಿದ್ದ ಹಾಗೆ ನಮ್ಮೆಲ್ಲರಿಗೂ ರಘುವೀರ್ (Actor Raghuveer) ಎಂಬ ಸುರದ್ರೂಪಿ ನಟನ ಅದ್ಭುತ ಅಭಿನಯ ಹಾಗೂ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡುತ್ತಿದ್ದಂತಹ ರೀತಿ ಎಲ್ಲವೂ ತಲೆಯೊಳಗೆ ಹೊಕ್ಕಿ ಬಿಡುತ್ತದೆ.
ಅತಿ ಕಡಿಮೆ ಅವಧಿಯಲ್ಲಿ ಬಹು ದೊಡ್ಡ ಮಟ್ಟದ ಯಶಸ್ಸನ್ನು ಸಂಪಾದಿಸಿಕೊಂಡು ಬ್ಲಾಕ್ಬಸ್ಟರ್ ಸಿನಿಮಾವನ್ನು (Kannada Movies) ನೀಡುವ ಮೂಲಕ ಆಗಿನ ಕಾಲದಲ್ಲಿ ಡಾಕ್ಟರ್ ವಿಷ್ಣುವರ್ಧನ್, ಶಿವರಾಜ್ ಕುಮಾರ್, ಶಶಿಕುಮಾರ್, ಸುನಿಲ್ ಹಾಗೂ ನವರಸ ನಾಯಕ ಜಗ್ಗೇಶ್ ಅವರಂತಹ ದಿಗ್ಗಜ ನಟರುಗಳ ಆಳ್ವಿಕೆ ಇದ್ದಂತಹ ಕಾಲದಲ್ಲಿ ಬಂದು ಒಂದರ ಮೇಲೊಂದರಂತರ ಹಿಟ್ ಸಿನಿಮಾಗಳು (Super Hit Movies) ನೀಡಿದ್ದರು.
ನನ್ನ ಮುಂದೆ ರಶ್ಮಿಕಾ ಮಂದಣ್ಣ ಏನೂ ಇಲ್ಲ ಅಂದಿದ್ದ ನಟಿ ಕಾಮೆಂಟ್ ಗೆ ಶ್ರೀವಲ್ಲಿ ಕೊಟ್ಟ ಪ್ರತಿಕ್ರಿಯೆ ವೈರಲ್
ರಘುವೀರ್ ಅಲ್ಪಾವಧಿಯಲ್ಲಿಯೇ ಇಡೀ ಕರ್ನಾಟಕದ ಜನತೆಯನ್ನು ತನ್ನತ್ತ ತಿರುಗಿ ನೋಡುವಂತೆ ಮಾಡಿಕೊಂಡಂತಹ ಕಲಾವಿದ ಎಂದರೆ ತಪ್ಪಾಗಲಾರದು. ಹೀಗೆ ಚೈತ್ರದ ಪ್ರೇಮಾಂಜಲಿ ಹಾಗೂ ಶೃಂಗಾರ ಕಾವ್ಯ ಎಂಬ ಎರಡು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿ ಗುರುತಿಸಿಕೊಂಡಿದ್ದಂತಹ ರಘುವೀರ್ ತಮ್ಮ ವೈಯಕ್ತಿಕ ಬದುಕಿನಲ್ಲಿ ತೆಗೆದುಕೊಂಡಂತಹ ಕೆಲವು ನಿರ್ಧಾರಗಳಿಂದಾಗಿ ಅಷ್ಟೇ ಬೇಗ ಗಾಂಧಿನಗರದ ಮಾರ್ಕೆಟ್ನಿಂದ ಪಾತಾಳಕ್ಕೆ ಕುಸಿದುಬಿಟ್ಟರು..
ಹೌದು ಗೆಳೆಯರೇ ರಘುವೀರ್ ಸಿನಿಮಾರಂಗಕ್ಕೆ ಎಂಟ್ರಿ ಕೊಡುವ ಆರಂಭಿಕ ದಿನಗಳಲ್ಲಿ ಅವರ ತಂದೆ ಓದು ಅಥವಾ ಸಿನಿಮಾ ಯಾವುದಾದರು ಒಂದನ್ನು ಆಯ್ಕೆ ಮಾಡಿಕೊ ಎಂದಾಗ ರಘುವೀರ್ ಓದಿಗೆ ಗುಡ್ ಬೈ ಹೇಳಿ ಬಣ್ಣದ ಬದುಕನ್ನು ಆರಿಸಿಕೊಂಡರು.
ಬಹುಷಃ ರಘುವೀರ್ ಅವರು ಓದಿನ ಕಡೆಗೆ ಮುಖ ಮಾಡಿದ್ದರೆ ಇಂತಹ ದುರಂತ ಕಾಣುತ್ತಿರಲಿಲ್ಲವೋ ಏನೋ? ಹೀಗೆ ತಂದೆಯ ಪರ್ಮಿಷನ್ ಸಿಕ್ಕೋಡನೆ ಚೆನ್ನೈ ಗೆ ತೆರಳಿ ಡ್ಯಾನ್ಸ್, ಫೈಟ್, ಹಾರ್ಸ್ ರೈಡಿಂಗ್ ಸೇರಿದಂತೆ ಸಕಲ ವಿದ್ಯೆಯನ್ನು ಕಲಿತು ಸಿನಿಮಾ ರಂಗಕ್ಕೆ ಭರ್ಜರಿಯಾಗಿ ಅಜಯ್ ವಿಜಯ್ ಎಂಬ ಸಿನಿಮಾದ ಮೂಲಕ ತಮ್ಮ ನಟನಾವೃತಿಯನ್ನು ಪ್ರಾರಂಭ ಮಾಡಿದರು ರಘುವೀರ್.
ಓಂ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದ ಉಪೇಂದ್ರ ಆಗಿನ ಕಾಲಕ್ಕೆ ಪಡೆದಿದ್ದ ಸಂಭಾವನೆ ಎಷ್ಟು ಗೊತ್ತಾ?
ನಂತರ ಚೈತ್ರದ ಪ್ರೇಮಾಂಜಲಿ ಸಿನಿಮಾ ಮಾಡಿ ಬಹುದೊಡ್ಡ ಮಟ್ಟದ ಸಕ್ಸಸ್ ಕಾಣುತ್ತಾರೆ. ಸಿನಿಮಾ ಹಿಟ್ ಆದರೂ ರಘುವೀರ್ ಅವರ ಬಾಹ್ಯ ರೂಪವನ್ನು ಹೀಯಾಳಿಸಿದವರ ಸಂಖ್ಯೆ ಅಷ್ಟಿಷ್ಟಲ್ಲ. ಹೀಗೆ ಎಲ್ಲವನ್ನೂ ಮೀರಿ ನಿಂತಂತಹ ರಘುವೀರ್ ರವರು ಚೈತ್ರದ ಪ್ರೇಮಾಂಜಲಿ ಸಿನಿಮಾ ಸಕ್ಸಸ್ ಆದ ನಂತರ ಶೃಂಗಾರ ಕಾವ್ಯ ಪ್ರಾಜೆಕ್ಟ್ ಅನ್ನು ಕೈಗೆತ್ತಿಕೊಂಡರು, ಸಿನಿಮಾಗೆ ಎಸ್ ಮಹೇಂದ್ರ ನಿರ್ದೇಶನ ಮಾಡಿದರು.
ಅದರಂತೆ ರಘುವೀರ್ ಹಾಗೂ ಸಿಂಧೂ ಅವರ ಕಾಂಬಿನೇಷನ್ನಲ್ಲಿ ಮೂಡಿಬಂದಂತಹ ಈ ಸಿನಿಮಾ ಬಹುದೊಡ್ಡ ಮಟ್ಟದ ಸಕ್ಸಸ್ ಕಾಣುತ್ತದೆ. ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ರಘುವೀರ್ ಹಾಗೂ ಸಿಂಧು ನಡುವೆ ಪ್ರೀತಿ ಚಿಗುರೊಡೆದು ಮದುವೆಯಾಗಬೇಕು ಎಂದು ನಿರ್ಧರಿಸುತ್ತಾರೆ.
ಆದರೆ ಇವರ ಇಬ್ಬರ ಮದುವೆಗೆ ತಂದೆಯಿಂದ ವಿರೋಧ ವ್ಯಕ್ತವಾದಾಗ ಕೋಟ್ಯಂತರ ಆಸ್ತಿಯನ್ನು ಬಿಟ್ಟು ತಮ್ಮ ತಂದೆ ವತಿಯಿಂದ ಯಾವುದೇ ಬಿಡುಗಡೆ ಬ್ಯಾಕ್ ಅಪ್ ಪಡೆದುಕೊಳ್ಳದೆ ಸಿಂಧು ಅವರಿಗೋಸ್ಕರ ಮನೆ ಬಿಟ್ಟು ಬಂದರು.
ಹೀಗೆ 1992ರ ನವಂಬರ್ 15ನೇ ತಾರೀಕಿನಂದು ಸಿಂಧೂರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 1994ರಲ್ಲಿ ಒಂದು ಹೆಣ್ಣು ಮಗುವಿನ ಜನನವಾಯಿತು, ಆದರೆ ಆರೋಗ್ಯ ಸಮಸ್ಯೆಯಿಂದಾಗಿ 2003ರಲ್ಲಿ ನಟಿ ಸಿಂದು ವಿಧಿವಶರಾಗುತ್ತಾರೆ. ಅವರ ನೆನಪಿನಲ್ಲಿ ನೊಂದಿದ್ದ ರಘುವೀರ್ ತಮ್ಮ ತಂದೆ ಮಾತಿಗೆ ಬೆಲೆಕೊಟ್ಟು ಅತ್ತೆ ಮಗಳನ್ನು ಮದುವೆಯಾದರು ಆಕೆಯ ಹೆಸರು ಗೌರಿ.
ಸ್ವತಃ ರವಿಚಂದ್ರನ್ ಅವರೇ ಕರೆ ಮಾಡಿ ಕೇಳಿಕೊಂಡರು ಮಾಲಾಶ್ರೀ ಅಣ್ಣಯ್ಯ ಸಿನಿಮಾದಲ್ಲಿ ಅಭಿನಯಿಸದಿರಲು ಕಾರಣವೇನು ಗೊತ್ತಾ?
ಮದುವೆಯಾದ ಮೇಲೆ ತಮ್ಮ ತಂದೆಯ ಸಹಾಯದಿಂದ ಸಾಕಷ್ಟು ಸಿನಿಮಾಗಳ ಅವಕಾಶ ಪಡೆದುಕೊಂಡು ಚಿತ್ರ ಜೀವನದಲ್ಲಿ ಸಕ್ರಿಯರಾದಂತಹ ರಘುವೀರ್ ಸಾಲು ಸಾಲು ಸೋಲನ್ನು ಕಂಡು ಅತೀವವಾದ ಡಿಪ್ರೆಶನ್ ಹಾಗೂ ಜಿಗುಪ್ಸೆಗೆ ಒಳಗಾದರು. ಇದರಿಂದಲೇ ಇವರನ್ನು ಸಣ್ಣಪುಟ್ಟ ಕಾಯಿಲೆಗಳು ಭಾದಿಸಲು ಆರಂಭಿಸಿತು ಹೀಗೆ ಕೇವಲ 46 ವರ್ಷಕ್ಕೆ ರಘುವೀರ್ ಕೊನೆ ಉಸಿರೆಳೆದುಬಿಟ್ಟರು.
Chaitrada Premanjali Movie Fame Kannada Actor Raghuveer Life Story