ನಟಿ ಶೃತಿ ಮಗಳು ಗೌರಿಗೆ ಇದೆಂಥ ಧರ್ಮ ಸಂಕಟ? ಸೋಶಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಸಂದೇಶ ಹಂಚಿಕೊಂಡ ಶ್ರುತಿ ಮಗಳು!

Story Highlights

ಸಾಮಾಜಿಕ ಜಾಲತಾಣದಲ್ಲೊಂದು ಭಾವನಾತ್ಮಕ ಸಂದೇಶವನ್ನು ನಿರ್ದೇಶಕ ಎಸ್ ಮಹೇಂದ್ರ ಅವರಿಗೆ ಶ್ರುತಿ ಮಗಳು ಗೌರಿ ಕಳಿಸಿದ್ದು, ಇದನ್ನು ನೋಡಿದಂತಹ ನೆಟ್ಟಿಗರ ಮನಸ್ಸು ಹಿಂಡಿದಂತಾಗಿದೆ.

ಸ್ನೇಹಿತರೆ, ತಮ್ಮ ಅಮೋಘ ಅಭಿನಯದ ಮೂಲಕ ಹಲವಾರು ದಶಕಗಳಿಂದ ಕನ್ನಡ ಸಿನಿಮಾ ರಂಗದಲ್ಲಿ (Kannada Film Industry) ಸಕ್ರಿಯರಾಗಿರುವ ನಟಿ ಶೃತಿ (Actress Shruti) ಆಗಿನ ಪ್ರಖ್ಯಾತ ನಿರ್ದೇಶಕ ಎಸ್ ಮಹೇಂದ್ರವರನ್ನು (Director S Mahendar) ಪ್ರೀತಿಸಿ ಮದುವೆಯಾದಂತಹ ಮಾಹಿತಿ ನಿಮ್ಮೆಲ್ಲರಿಗೂ ಗೊತ್ತೇ ಇದೆ.

ಇವರಿಬ್ಬರಿಗೂ ಜನಿಸಿದ ಮಗಳು ಗೌರಿ ಶ್ರುತಿ ಅವರು ಆಗಾಗ ತಮ್ಮ ಬಾಲ್ಯದ ಫೋಟೋಗಳನ್ನು ಹಂಚಿಕೊಳ್ಳುತ್ತಾ ತಮ್ಮ ತಂದೆಯೊಟ್ಟಿಗೆ ಕಳೆದ ಸುಂದರ ಕ್ಷಣಗಳನ್ನು ಮೆಲುಕು ಹಾಕುತ್ತಿರುತ್ತಾರೆ.

ಹೀಗಿರುವಾಗ ಸಾಮಾಜಿಕ ಜಾಲತಾಣದಲ್ಲೊಂದು (Social Media) ಭಾವನಾತ್ಮಕ ಸಂದೇಶವನ್ನು ನಿರ್ದೇಶಕ ಎಸ್ ಮಹೇಂದ್ರ ಅವರಿಗೆ ಶ್ರುತಿ ಮಗಳು (Actress Shruti Daughter Gowri) ಗೌರಿ ಕಳಿಸಿದ್ದು, ಇದನ್ನು ನೋಡಿದಂತಹ ನೆಟ್ಟಿಗರ ಮನಸ್ಸು ಹಿಂಡಿದಂತಾಗಿದೆ.

ಆ ಸಾಂಗ್ ನಲ್ಲಿ ಒಳ ಉಡುಪು ಧರಿಸಿರಲಿಲ್ಲ, ಎಂಬ ಶಾಕಿಂಗ್ ಹೇಳಿಕೆ ಕೊಟ್ಟ ಸ್ಟಾರ್ ನಟಿ! ಅಷ್ಟಕ್ಕೂ ಆನಂತರ ಆಗಿದ್ದೇನು ಗೊತ್ತಾ?

ಅಷ್ಟಕ್ಕೂ ತಂದೆಯನ್ನು ನೆನೆದು ಗೌರಿ ತಮ್ಮ ಭಾವನಾತ್ಮಕ ಪತ್ರದಲ್ಲಿ ಬರೆದಿದ್ದಾದರೂ ಏನು? ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ಸಿನಿಮಾ ರಂಗದಲ್ಲಿ ಅವಕಾಶ ಕಡಿಮೆಯಾದ ಬೆನ್ನಲ್ಲೇ ಶ್ರುತಿ ಅವರು ರಾಜಕೀಯ ಕ್ಷೇತ್ರಕ್ಕೆ ಧುಮುಕಿ ಜನಸೇವೆಯನ್ನು ಮಾಡ ತೊಡಗಿದ್ದಾರೆ. ಇದರ ಜೊತೆ ಜೊತೆಗೆ ಕಳೆದ ಕೆಲ ತಿಂಗಳಿನಿಂದ ರೈತ ಮಹಿಳೆಯಾಗಿಯೂ ಗುರುತಿಸಿಕೊಂಡು ವನ್ಯಜೀವಿ ಸಂರಕ್ಷಣೆಯತ್ತ ತಮ್ಮ ಒಲವನ್ನು ತೋರಿಸುತ್ತಾ ಎಲ್ಲಾ ಚಟುವಟಿಕೆಗಳಲ್ಲಿಯೂ ಸಕ್ರಿಯರಾಗಿರುವ ಶೃತಿಯವರು ಕನ್ನಡ ಮಾತ್ರವಲ್ಲದೆ ತೆಲುಗು ತಮಿಳು ಹಿಂದಿ ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಬಹು ಬೇಡಿಕೆಯನ್ನು ಹೊಂದಿದಂತಹ ನಟಿ.

Kannada Actress Shruti Daughter Gowriಹೀಗೆ ಬಣ್ಣದ ಲೋಕದಲ್ಲಿ ಆಕ್ಟಿವ್ ಇರುವಾಗಲೇ 1998ರಲ್ಲಿ ನಿರ್ದೇಶಕ ಎಸ್ ಮಹೇಂದರ್ ಅವರನ್ನು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಶೃತಿ ಕಾಲಿಟ್ಟರು. ಮದುವೆಯಾದ ಆರಂಭಿಕ ದಿನಗಳಲ್ಲಿ ಬಹಳ ಅನ್ಯೋನ್ಯವಾಗಿದ್ದ ಇವರಿಬ್ಬರ ದಾಂಪತ್ಯ ಜೀವನದಲ್ಲಿ ವೈ ಮನಸ್ಸು ಬಿನ್ನಾಭಿಪ್ರಾಯಗಳು ಮೂಡಲು ಕಾರಣವಾಗುತ್ತದೆ. ಹೀಗೆ 2009ರಲ್ಲಿ ಮಗಳು ಗೌರಿ ಜನಿಸಿದ ನಂತರ ಶೃತಿ ಎಸ್ ಮಹೇಂದ್ರ ಅವರಿಂದ ವಿಚ್ಛೇದನ ಪಡೆದು ದೂರಾದರು.

ಅತಿ ಚಿಕ್ಕ ವಯಸ್ಸಿನಲ್ಲೇ ತಂದೆ ಪ್ರೀತಿಯಿಂದ ವಂಚಿತರಾದ ಗೌರಿ ಸಾಕಷ್ಟು ಕಡೆಗಳಲ್ಲಿ ತಮ್ಮ ತಂದೆ ಅವರ ಕುರಿತು ಹೆಮ್ಮೆಯ ವಿಚಾರವನ್ನು ಹಂಚಿಕೊಳ್ಳುತ್ತಲೆ ಇರುತ್ತಾರೆ.

ಅಣ್ಣಾವ್ರು ಮೇಕಪ್ ಮ್ಯಾನ್ ಗೆ ಕೊಡುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ? ಮೇಕಪ್ ಮ್ಯಾನ್ ಸಿಗರೇಟ್ ಸೇದಿ ಬಂದಿದ್ದಕ್ಕೆ ಅಣ್ಣಾವ್ರು ಮಾಡಿದ್ದೇನು?

ದಿನಗಳ ಹಿಂದಷ್ಟೇ ಗೌರಿ ತಮ್ಮ ತಂದೆಯೊಟ್ಟಿಗಿನ ಬಾಲ್ಯದ ಫೋಟೋ ಶೇರ್ ಮಾಡಿ ‘ಹುಟ್ಟುಹಬ್ಬದ ಶುಭಾಶಯಗಳು ಅಪ್ಪ ನೀನು ಯಾವಾಗಲೂ ನನ್ನ ಮೊದಲ ಪ್ರೀತಿ ಮತ್ತು ನನ್ನ ನಾಯಕ. ನನ್ನ ನಿಮ್ಮ ನಡುವೆ ಇರುವ ಪ್ರೀತಿ ಮತ್ತು ಭಾಂದವ್ಯವನ್ನು ಯಾರು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ.

ಮತ್ತೆ ನಿನ್ನ ಜೊತೆ ಹೆಚ್ಚಿನ ಸಮಯ ಕಳಿಯುವ ಅವಕಾಶವನ್ನು ಈ ಬದುಕು ಒದಗಿಸಿ ಕೊಡಲಿ ಎಂದು ಕೇಳಿಕೊಳ್ಳುತ್ತೇನೆ. ಪದಗಳಲ್ಲಿ ಹೇಳಲಾಗದಷ್ಟು ನಿಮ್ಮನ್ನು ನಾನು ಮಿಸ್ ಮಾಡಿಕೊಳ್ಳುತ್ತಿದ್ದೇನೆ.

ಅತಿ ಶೀಘ್ರದಲ್ಲಿ ನಿಮ್ಮೊಟ್ಟಿಗೆ ಕಾಲ ಕಳೆಯುಲು ಕಾಯುತ್ತಿದ್ದೇನೆ ಎಂಬುದಾಗಿ ಬರೆದಿದ್ದಾರೆ.

ಇದನ್ನು ಕಂಡಂತಹ ನೆಟ್ಟಿಗರು ಶೃತಿ ಹಾಗೂ ಮಹೇಂದ್ರ ಅವರ ಮಧ್ಯೆ ಇರುವಂತಹ ಅಡ್ಡಗೋಡೆಯನ್ನು ಒಡೆದು ಹಾಕಿ ಮತ್ತೆ ಒಂದಾಗುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಕಮೆಂಟ್ ಮೂಲಕ ನಟಿ ಶೃತಿ ಹಾಗೂ ಮಹೇಂದರ್ ಅವರು ಜೊತೆಯಾಗಲಿ ಎಂದು ಆಶಿಸುತ್ತಿದ್ದಾರೆ

Kannada Actress Shruti Daughter Gowri shared an emotional message on Social Media

Related Stories