Video: ವೇದಿಕೆ ಮೇಲೆಯೇ ಮುಲಾಜಿಲ್ಲದೆ ಸೀರೆ ಸೆರಗನ್ನು ಬಿಚ್ಚಿ ಎಸೆದ ನಟಿ ನೇಹಾ ಶೆಟ್ಟಿ! ತರಾಟೆಗೆ ತೆಗೆದುಕೊಂಡ ನೆಟ್ಟಿಗರು
ಇತ್ತೀಚಿನ ಸಿನಿಮಾ ಯುಗದಲ್ಲಿ ಪ್ರತಿಸ್ಪರ್ಧಿಗಳು ಹೇರಳವಾಗಿರುವ ಕಾರಣದಿಂದ ತಮ್ಮ ಸಿನಿಮಾ ಮತ್ತೊಂದು ಸಿನಿಮಾದ ಎದುರು ಸೆಡ್ಡು ಹೊಡೆದು ಯಶಸ್ವಿ ಪ್ರದರ್ಶನ ಕಾಣಬೇಕೆಂದರೆ ಅದಕ್ಕೆ ಚಿತ್ರ ಬಹುಕೋಟಿ ವೆಚ್ಚದಲ್ಲಿ ತಯಾರಾಗುವುದರ ಜೊತೆಗೆ ಸಿನಿಮಾದ ಪ್ರಮೋಷನ್ (Cinema Promotion) ಕೆಲಸಗಳು ಕೂಡ ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ.
ಹೀಗಾಗಿ ಸಿನಿಮಾ ನಟ ನಟಿಯರು ಚಿತ್ರದ ಶೂಟಿಂಗ್ ಮುಗಿದ ಕೂಡಲೇ ತಮ್ಮ ತಮ್ಮ ಸೋಶಿಯಲ್ ಮೀಡಿಯಾ (Social Media) ಖಾತೆಗಳಲ್ಲಿ ಹಾಗೂ ಇನ್ನಿತರ ಕಾರ್ಯಕ್ರಮಗಳಿಗೆ ಅತಿಥಿಯಾಗಿ ಹೋಗುವ ಮೂಲಕ ಸಿನಿಮಾದ ಪ್ರಚಾರವನ್ನು ಭರ್ಜರಿಯಾಗಿ ಮಾಡುತ್ತಿರುತ್ತಾರೆ.
ಹೀಗೆ ಅದೆಷ್ಟೋ ಕಲಾವಿದರು ಅಭಿಮಾನಿಗಳೊಟ್ಟಿಗೆ ಸೇರಿ ಪ್ರಚಾರದ ಕೆಲಸಗಳಲ್ಲಿ ಭಾಗಿ ಆದರೆ ಇನ್ನು ಕೆಲವರು ವಿಶೇಷವಾದ ಇವೆಂಟ್ಗಳನ್ನು (Events) ಆಯೋಜಿಸಿ ಅಲ್ಲಿ ತಮ್ಮ ಆಕರ್ಷಕ ನಡೆ, ಮಾತುಗಾರಿಕೆ ಹಾಗೂ ಸಿನಿಮಾದ ಕುರಿತು ಗುಣಗಾನ ಮಾಡುವ ಮೂಲಕ ಪ್ರೇಕ್ಷಕರನ್ನು ತಮ್ಮ ತಮ್ಮ ಸಿನಿಮಾಗಳತ್ತ ಆಕರ್ಷಿಸಿಕೊಳ್ಳುತ್ತಾರೆ.
ಕನ್ನಡ ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿಗಳ ಲಿಸ್ಟ್! ಈ ಬಾರಿ ದೊಡ್ಮನೆಯಲ್ಲಿ ಯಾರೆಲ್ಲಾ ಇರಲಿದ್ದಾರೆ ಗೊತ್ತಾ?
ಆದರೆ ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಅವರ ಮುಂಗಾರು ಮಳೆ (Kannada Mungaru Male 2 Cinema) ಖ್ಯಾತಿಯ ನಟಿ ನೇಹಾ ಶೆಟ್ಟಿ (Actress Neha Shetty) ಒಂದು ಹೆಜ್ಜೆ ಮುಂದೆ ಹೋಗಿ ಪ್ರಚಾರಕ್ಕಾಗಿ ತಮ್ಮ ಸೀರೆ ಸೆರಗನ್ನೇ (Took Off Saree) ಬಿಚ್ಚುವಂತಹ ಕೆಲಸ ಮಾಡಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಖುಷಿ ಸಿನಿಮಾದ ಪ್ರಮೋಶನ್ ಕೆಲಸಗಳಲ್ಲಿ ತೊಡಗಿಕೊಂಡಿದ್ದ ವಿಜಯ್ ದೇವರಕೊಂಡ ಸಂಮತಾ (Vijay Deverakonda and Samantha) ಜೊತೆ ವೇದಿಕೆಯ ಮೇಲೆ ನೃತ್ಯ ಮಾಡುವಾಗ ಶರ್ಟ್ ಬಿಚ್ಚಿ ಪ್ರಮೋಷನ್ ಮಾಡಲು ಮುಂದಾಗಿ ಬಾರಿ ಟ್ರೋಲ್ಗೊಳಗಾಗಿದ್ದರು.
ಆದರೀಗ ಗೋಲ್ಡನ್ ಸ್ಟಾರ್ ಗಣೇಶ್ ಅವರ ಮುಂಗಾರು ಮಳೆ ಪಾರ್ಟಿ 2 ಸಿನಿಮಾದ ನಟಿ ನೇಹಾ ಶೆಟ್ಟಿ ಹಾಡಿಗೆ ಹೆಜ್ಜೆ ಹಾಕುತ್ತಿದ್ದಾಗ ಸೆರಗನ್ನು ಬಿಚ್ಚಿರುವುದು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಹೌದು ಗೆಳೆಯರೇ ನಟ ವಿಶ್ವಕ್ ಸೇನ್ ಹಾಗೂ ನೇಹ ಶೆಟ್ಟಿಯವರು ಜೊತೆಯಾಗಿ ಗ್ಯಾಂಗ್ಸ್ ಆಫ್ ಗೋದಾವರಿ ಸಿನಿಮಾದ ಪ್ರಮೋಷನ್ ಸಂದರ್ಭದಲ್ಲಿ ಮಾದಕವಾಗಿ ವರ್ತಿಸುವ ಮೂಲಕ ನೇಹ ಎಡವಟ್ಟನ್ನು ಮಾಡಿಕೊಂಡಿದ್ದಾರೆ.
ಈ ಚಿತ್ರದ ಸುತ್ತಮ್ಲ ಸೂಸಿ.. ಎಂಬ ಹಾಡು ನಿನ್ನೆಯಷ್ಟೇ ಬಿಡುಗಡೆಯಾಗಿದ್ದು, ಆ ಒಂದು ಕಾರ್ಯಕ್ರಮದಲ್ಲಿ ನಟ ವಿಶ್ವಕ್ ಅವರೊಂದಿಗೆ ವೇದಿಕೆಯ ಮೇಲೆ ನೃತ್ಯ ಮಾಡುತ್ತಿದ್ದಾಗ ನಟಿ ನೇಹ ಶೆಟ್ಟಿ ಹುಕ್ ಸ್ಟೆಪ್ ಅನ್ನು ಮಾಡಿದ್ದು, ತಮ್ಮ ಸೀರೆಯ ಸೆರಗನ್ನು ಬಿಚ್ಚಿ ವಿಶ್ವಕ್ ಮೇಲೆ ಎಸೆದಿದ್ದಾರೆ.
ಇದು ಕೇವಲ ಡ್ಯಾನ್ಸ್ ಸ್ಟೆಪ್ ಆಗಿತ್ತು, ಆದರೆ ಇದಕ್ಕೆ ಸಂಬಂಧಿಸಿದಂತಹ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಾ ಇದ್ದ ಹಾಗೆ ನೇಹಾ ಶೆಟ್ಟಿ ಅವರ ವರ್ತನೆ ಕಂಡು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಎಲ್ಲಾ ಕೆಲಸಗಳಿಗೂ ಒಂದು ಇತಿಮಿತಿ ಇರುತ್ತದೆ ಅದನ್ನು ಮೀರಿ ಯಾವ ಹೆಣ್ಣುಮಗಳು ಪ್ರಚಾರಕ್ಕಾಗಲಿ ಹಣಕ್ಕಾಗಲಿ ಈ ರೀತಿ ಅಸಭ್ಯವಾಗಿ ನಡೆದುಕೊಳ್ಳಬಾರದೆಂದು ತರಾಟೆಗೆ ತೆಗೆದುಕೊಂಡಿದ್ದಾರೆ.
Kannada Mungaru Male 2 Cinema Fame Actress Neha Shetty Took off Her Saree and Get Trolled