Mohan Juneja: ಸ್ಯಾಂಡಲ್‌ವುಡ್ ನಟ ಮೋಹನ್ ಜುನೇಜಾ ಇನ್ನಿಲ್ಲ

Actor Mohan Juneja No More: ನಟ ಮತ್ತು ಹಾಸ್ಯನಟ ಮೋಹನ್ ಜುನೇಜಾ ಅವರು ನಿಧನ, ನಟ ಮತ್ತು ಹಾಸ್ಯನಟರಾಗಿ ನಮ್ಮನ್ನೆಲ್ಲ ರಂಜಿಸಿದ್ದ ಮೋಹನ್ ಜುನೇಜಾ ಇನ್ನಿಲ್ಲ

ನಟ ಮತ್ತು ಹಾಸ್ಯನಟ ಮೋಹನ್ ಜುನೇಜಾ ಇನ್ನಿಲ್ಲ (Actor Mohan Juneja) ಇಂದು ಬೆಳಗ್ಗೆ ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ನಟ ಚಿಕಿತ್ಸೆಗೆ ಸ್ಪಂದಿಸದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ  (Sapthagiri Hopsital) ಕೊನೆಯುಸಿರೆಳೆದಿದ್ದಾರೆ.

ನಟ ಮತ್ತು ಹಾಸ್ಯನಟ ಮೋಹನ್ ಜುನೇಜಾ ಅವರು ನಿಧನ – Sandalwood actor Mohan Juneja no more

ಸ್ಯಾಂಡಲ್‌ವುಡ್ ನಟ ಮೋಹನ್ ಜುನೇಜಾ ಇನ್ನಿಲ್ಲ

ಮೋಹನ್ ಅವರು ಹಾಸ್ಯನಟರಾಗಿ (Comedian) ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ನಟಿಸಿದ್ದಾರೆ, ಅವರ ವೃತ್ತಿಜೀವನದಲ್ಲಿ ಅವರು 100 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಸೂಪರ್‌ಹಿಟ್ ಚಿತ್ರ ಕೆಜಿಎಫ್ : ಅಧ್ಯಾಯ 2 ಮತ್ತು ಕೆಜಿಎಫ್: ಅಧ್ಯಾಯ 1 ರಲ್ಲಿ (KGF1 and KGF Chapter 2) ಸಹ ಕಾಣಿಸಿಕೊಂಡರು.

ಅವರ ವೃತ್ತಿಜೀವನದಲ್ಲಿ ಪ್ರಮುಖ ಬ್ರೇಕ್ ನೀಡಿದ ಚೆಲ್ಲಾಟದಲ್ಲಿನ ಅವರ ಪಾತ್ರವು ಇನ್ನೂ ಪ್ರೇಕ್ಷಕರಿಂದ ನೆನಪಿನಲ್ಲಿ ಉಳಿಯುತ್ತದೆ. ಅವರ ನಿಧನಕ್ಕೆ ಅಭಿಮಾನಿಗಳು ಮತ್ತು ಸ್ಯಾಂಡಲ್‌ವುಡ್ ಸಮುದಾಯದ ಸದಸ್ಯರು ಸಾಮಾಜಿಕ ಮಾಧ್ಯಮ ಪುಟಗಳಲ್ಲಿ ಸಂತಾಪ ವ್ಯಕ್ತಪಡಿಸುತ್ತಿದ್ದಾರೆ.

ನಟ ಮತ್ತು ಹಾಸ್ಯನಟ ಮೋಹನ್ ಜುನೇಜಾ ಅವರು ನಿಧನಮೋಹನ್ ಅವರು ವಠಾರದಂತಹ ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದಾರೆ ಮತ್ತು ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ.

ವೈವಿಧ್ಯಮಯ ಶೈಲಿಯಲ್ಲಿ, ವಿಚಿತ್ರ ದಾಟಿಯಲ್ಲಿ ನಮ್ಮನ್ನೆಲ್ಲ ನಗೆಗಡಲಲ್ಲಿ ತೇಲಿಸುತ್ತಿದ್ದ ಮೋಹನ್ ಅವರನ್ನು ಬೆಂಗಳೂರಿನ (Bangalore) ಸಪ್ತಗಿರಿ ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಲಾಗಿತ್ತು, ಆದರೆ ಚಿಕಿತ್ಸೆ ಫಲಿಸದೆ, ಅವರು ಅಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ನಟ ಶಿವಣ್ಣ ಅಭಿನಯದ ಹೆಸರಾಂತ ಚಿತ್ರ (Film) ಜೋಗಿ ಸಿನಿಮಾ (Jogi Cinema) ಸೇರಿದಂತೆ ಹಲವು‌ ಸಿನಿಮಾ (Movie) ಹಾಗು ಧಾರವಾಹಿಗಳಲ್ಲಿ (Daily Serial) ‌ನಲ್ಲಿ ನಟಿಸಿದ್ದ ಅವರು ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.

ತುಮಕೂರಿನವರಾದ (Tumakuru) ಮೋಹನ್ ಜುನೇಜಾ ಅವರು ಓದಿದ್ದು ಬೆಂಗಳೂರಿನಲ್ಲಿ (Bengaluru), ಇಂದು ಅವರ ಅಂತ್ಯಕ್ರಿಯೆ (The funeral) ನಡೆಯಲಿದೆ.

Actor and comedian Mohan Juneja has passed away today morning.

Watch The Mohan Juneja Comedy Scene

Tv9 News About Popular Kannada Comedy Actor Mohan Juneja Passes Away

Mohan Juneja Thanks Upendra – File Video

Follow Us on : Google News | Facebook | Twitter | YouTube