Sonu Sood, ನಾಲ್ಕು ಕೈಗಳು ಮತ್ತು ನಾಲ್ಕು ಕಾಲುಗಳನ್ನು ಹೊಂದಿರುವ ಬಾಲಕಿಯ ಸಹಾಯಕ್ಕೆ ಮುಂದಾದ ಸೋನು ಸೂದ್

ಪಾಟ್ನಾ: ಆ ಬಾಲಕಿಗೆ ನಾಲ್ಕು ಕೈಗಳು ಮತ್ತು ನಾಲ್ಕು ಕಾಲುಗಳಿವೆ. ತಿನ್ನಲು ಕಷ್ಟ ಪಡುವ ಕಡುಬಡವರಾಗಿದ್ದ ಆಕೆಯ ಪೋಷಕರಿಗೆ ಸರ್ಕಾರದ ಸಹಾಯ ಪಡೆಯಲು ಸಾಧ್ಯವಾಗಲಿಲ್ಲ. ಆದರೆ ಈ ವಿಚಾರವನ್ನು ಸಾಮಾಜಿಕ ಜಾಲತಾಣಗಳ ಮೂಲಕ ತಿಳಿದ ನಟ ಸೋನು ಸೂದ್ (Sonu Sood) ಮಗುವಿಗೆ ಬೆಂಬಲ ನೀಡಲು ಮುಂದಾಗಿದ್ದಾರೆ.
ಇದನ್ನೂ ಓದಿ : ರಶ್ಮಿಕಾ ಕೈಯಲ್ಲಿ ಅರ್ಧ ಡಜನ್ ಸಿನಿಮಾಗಳು
ಬಿಹಾರದ ನೆವಾಡಾ ಜಿಲ್ಲೆಯ ಎರಡೂವರೆ ವರ್ಷದ ಬಾಲಕಿಗೆ ಹುಟ್ಟಿನಿಂದಲೇ ನಾಲ್ಕು ಕೈ ಮತ್ತು ನಾಲ್ಕು ಕಾಲುಗಳಿವೆ. ಒಂದು ಜೊತೆ ಕೈಗಳು ಮತ್ತು ಕಾಲುಗಳು ಸಾಮಾನ್ಯವಾಗಿದ್ದರೆ, ಇನ್ನೊಂದು ಜೋಡಿ ತೋಳುಗಳು ಮತ್ತು ಕಾಲುಗಳು ಹೊಟ್ಟೆಯ ಮೇಲಿರುತ್ತವೆ. ಬಾಲಕಿಯ ಪೋಷಕರು ಬಡವರು. ನಂತರ ಆಕೆಯ ಪೋಷಕರು ಸಹಾಯಕ್ಕಾಗಿ ನೆವಾಡಾ ಜಿಲ್ಲಾ SDVO ಅನ್ನು ಸಂಪರ್ಕಿಸಿದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ.
ಇದೇ ವೇಳೆ ಹಿಂದಿ ಸುದ್ದಿ ವಾಹಿನಿಯೊಂದು ಬಿಹಾರದ ಹುಡುಗಿಯೊಬ್ಬಳಿಗೆ ನಾಲ್ಕು ಕಾಲು ಮತ್ತು ನಾಲ್ಕು ಕೈಗಳಿವೆ ಎಂದು ಮೊದಲು ವರದಿ ಮಾಡಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಬಡವರಿಗೆ ಸಹಾಯ ಮಾಡುವಲ್ಲಿ ಅಗ್ರಗಣ್ಯರಾಗಿರುವ ಬಾಲಿವುಡ್ ನಟ ಸೋನು ಸೂದ್ ಅವರ ಗಮನಕ್ಕೆ ಇದು ಬಂದಿದೆ. ಅವರು ತಕ್ಷಣ ಪ್ರತಿಕ್ರಿಯಿಸಿದರು. ಬಾಲಕಿಯನ್ನು ವೈದ್ಯರಿಗೆ ತೋರಿಸಲಾಯಿತು. ಮಗುವನ್ನು ನೋಡಿಕೊಳ್ಳುವುದಾಗಿ ಭರವಸೆ ನೀಡಿದರು. ಈ ಕುರಿತು ಶನಿವಾರ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ : ಒಲ್ಲದ ಡ್ರೆಸ್ ನಲ್ಲಿ ರಶ್ಮಿಕಾ ಮಂದಣ್ಣ, ನೆಟ್ಟಿಗರಿಂದ ಟ್ರೋಲ್
ಈ ನಡುವೆ ಸೋನು ಸೂದ್ ಟ್ವೀಟ್ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅವರ ಬೆಂಬಲಕ್ಕೆ ನೆಟಿಜನ್‌ಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ನಡುವೆ ಕೆಲವರು ಬಿಹಾರ ಸಿಎಂ ನಿತೀಶ್ ಕುಮಾರ್ ಬಾಲಕಿಗೆ ಚಿಕಿತ್ಸೆ ನೀಡಬೇಕೆಂದು ಒತ್ತಾಯಿಸಿದರು.
टेन्शन मत लीजिए इलाज शुरू करवा दिया है। बस दुआ करिएगा। https://t.co/gndrRhuNQJ pic.twitter.com/YoCTRoqoir
— sonu sood (@SonuSood) May 28, 2022
Video Of Bihar Girl With Four Arms And Legs Surfaces Online Sonu Sood Comes Forward To Help
ಸುದ್ದಿ ಮಾಹಿತಿ ಮತ್ತು ಮನೋರಂಜನೆಗಾಗಿ ವೆಬ್ ಸ್ಟೋರೀಸ್ ನೋಡಿ – Web Stories




