ಕನ್ನಡ ಟಿವಿ ಕಲಾವಿದ, ನಟ, ನಿರೂಪಕ ಸಂಜೀವ್ ಕುಲಕರ್ಣಿ ನಿಧನ

Story Highlights

Kannada TV Actor Sanjeev Kulkarni passes away

ಕನ್ನಡ ನ್ಯೂಸ್ ಟುಡೇ

ಕನ್ನಡ ಟಿವಿ ಕಿರುತೆರೆಯ ಕಲಾವಿದರು, ಪ್ರಖ್ಯಾತ ನಟರೂ ಹಾಗೂ ನಿರೂಪಕರಾದ “ಸಂಜೀವ್ ಕುಲಕರ್ಣಿ” ನಿಧನರಾಗಿದ್ದಾರೆ. ಸಂಜೀವ್ ಕುಲಕರ್ಣಿ ಕನ್ನಡ ಕಿರುತೆರೆಯ ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದಾರೆ ಹಾಗೂ ಚಿರಪರಿಚಿತರೂ ಹೌದು. ಕನ್ನಡವನ್ನು ಸ್ಪಷ್ಟವಾಗಿ ನೀರಾಗವಾಗಿ ಮಾತನಾಡುವ ಸಂಜೀವ್ ಕುಲಕರ್ಣಿ ಪ್ರಖ್ಯಾತ ನಿರೂಪಕರಾಗಿಯೂ ಸಹ ಗುರುತಿಸಿಕೊಂಡಿದ್ದರು.

ಸಂಜೀವ್ ಕುಲಕರ್ಣಿ ಸುಮಾರು ವರ್ಷಗಳಿಂದ ಕಾರ್ಡಿಯೋಮಯೋಪತಿ ರೋಗದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಜೀವ್ ಕುಲಕರ್ಣಿ ಅವರ ಆರೋಗ್ಯ ಸ್ಥಿತಿ ಕೆಲದಿನಗಳಿಂದ ಇನ್ನಷ್ಟು ಚಿಂತಾಜನಕಸ್ಥಿತಿಗೆ ಬಂದು ತಲುಪಿತ್ತು.

ಈ ಆರೋಗ್ಯ ಸ್ಥಿತಿಯಿಂದ ಪೂರ್ಣ ಚಿಕಿತ್ಸೆಗೆ 40ರಿಂದ 50 ಲಕ್ಷ ರೂಪಾಯಿ ಖರ್ಚಾಗುತ್ತದೆ ಎಂದು ತಿಳಿದು, ಸ್ವತಃ ಕಿಚ್ಚ ಸುದೀಪ್ ಸಹ ಹಣ ಸಹಾಯ ಮಾಡಿ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದರು. ಕಿರುತೆರೆಯ ಹಲವಾರು ಕಲಾವಿದರು ಸಹ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿ ಸಹಾಯ ಕೋರಿದ್ದರು. /////

Web Title : Kannada TV Actor Sanjeev Kulkarni passes away (Read ಕನ್ನಡ ನ್ಯೂಸ್ From Digital Kannada Daily Newspaper)


Related Stories