ಬಾಹುಬಲಿ Film ರೆಕಾರ್ಡ್ಸ್ ಬ್ರೇಕ್ ಮಾಡಿದ KGF Chapter 2
KGF Chapter 2 Breaks Bahubali Records : ಬಾಕ್ಸ್ ಆಫೀಸ್‌ನಲ್ಲಿ KGF 2 ಕಲೆಕ್ಷನ್‌ಗಳ ಸುನಾಮಿ ಸೃಷ್ಟಿಸುತ್ತಿದೆ. KGF 2 ಆರು ದಿನಗಳಲ್ಲಿ 'ಬಾಹುಬಲಿ (ದಿ ಬಿಗಿನಿಂಗ್) ಒಟ್ಟು ಕಲೆಕ್ಷನ್‌ಗಳನ್ನು ಮೀರಿಸಿದೆ.
KGF Chapter 2 Breaks Bahubali Records : ಬಾಕ್ಸ್ ಆಫೀಸ್‌ನಲ್ಲಿ KGF 2 ಕಲೆಕ್ಷನ್‌ಗಳ ಸುನಾಮಿ ಸೃಷ್ಟಿಸುತ್ತಿದೆ. KGF 2 ಆರು ದಿನಗಳಲ್ಲಿ ‘ಬಾಹುಬಲಿ (ದಿ ಬಿಗಿನಿಂಗ್) ಒಟ್ಟು ಕಲೆಕ್ಷನ್‌ಗಳನ್ನು ಮೀರಿಸಿದೆ. ಈಗಾಗಲೇ ಕನ್ನಡ ಇಂಡಸ್ಟ್ರಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಮುರಿದಿರುವ ಚಿತ್ರ ಇದೀಗ ಮತ್ತೊಂದು ದಾಖಲೆಯನ್ನು ಮುರಿದಿದೆ.
KGF 2 ಸಿನಿಮಾ ಭರ್ಜರಿ ಪ್ರದರ್ಶನಗೊಳ್ಳುತ್ತಿದ್ದು, ಮಂಗಳವಾರವೊಂದರಲ್ಲೇ ಎಲ್ಲಾ ಭಾಷೆಗಳಲ್ಲಿ ಸೇರಿ 50 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಇದರೊಂದಿಗೆ ಇದುವರೆಗೆ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರಗಳ ಪಟ್ಟಿಯಲ್ಲಿ ‘KGF Chapter 2’ ಎಂಟನೇ ಸ್ಥಾನದಲ್ಲಿದೆ.
ಬಿಡುಗಡೆಯಾದ ಆರು ದಿನಗಳಲ್ಲಿ ಈ ಸಾಧನೆ ಮಾಡಿರುವುದು ವಿಶೇಷ. ಅದರಲ್ಲೂ ಬೇರೆ ಭಾಷೆಗಳಿಗೆ ಹೋಲಿಸಿದರೆ ಹಿಂದಿಯಲ್ಲಿ ಚಿತ್ರ ಭರ್ಜರಿ ಗಳಿಕೆ ಮಾಡುತ್ತಿದೆ. KGF 2 ಸಿನಿಮಾ ಬುಧವಾರದ ಹೊತ್ತಿಗೆ ಚಿತ್ರದ ಹಿಂದಿ ಅವತರಣಿಕೆ 250 ಕೋಟಿ ರೂ. ಗಳಿಸುವ ಮೂಲಕ ಭರ್ಜರಿ ಗಳಿಕೆ ಮಾಡುತ್ತಿದೆ.
ಕನ್ನಡದ ರಾಕಿಂಗ್ ಸ್ಟಾರ್ ಯಶ್ ನಾಯಕನಾಗಿ ನಟಿಸಿರುವ ಈ ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶಿಸಿದ್ದಾರೆ, ಉತ್ತಮ ಪ್ರದರ್ಶನಗೊಳ್ಳುತ್ತಿದೆ. ಈ ವಾರ ಬಾಲಿವುಡ್‌ನಲ್ಲಿ ಶಾಹಿದ್ ಕಪೂರ್ ಅಭಿನಯದ ‘ಜೆರ್ಸಿ’ ಚಿತ್ರ ಬಿಡುಗಡೆಯಾಗಲಿದ್ದು, ಈ ಚಿತ್ರವು ಅದರ ಕಲೆಕ್ಷನ್‌ಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.
KGF2 Movie Trailer
Bahubali 1 Movie Trailer
KGF Chapter 2 Breaks Bahubali Records – Web Story
Follow us On
Google News |