ಬಾಲಿವುಡ್ ನಲ್ಲಿ KGF2 ಚಿತ್ರದ ಅಬ್ಬರ !
KGF2 Crosses 350 Crores Mark In Bollywood : ಕೆಜಿಎಫ್ ಚಾಪ್ಟರ್ 2 ಇತ್ತೀಚೆಗೆ ಬಾಕ್ಸ್ ಆಫೀಸ್‌ನಲ್ಲಿ ಭಾರಿ ನಿರೀಕ್ಷೆಯ ನಡುವೆ ಬಿಡುಗಡೆಯಾಗಿತ್ತು. ಈ ಚಿತ್ರವನ್ನು ಪ್ರಶಾಂತ್ ನೀಲ್ ಅವರು ತಮ್ಮದೇ ಆದ ಛಾಪು ಮೂಡಿಸಿ ನಿರ್ದೇಶಿಸಿದ್ದು, ಯಶ್ ಮತ್ತೊಮ್ಮೆ ರಾಖಿ ಭಾಯ್ ಪಾತ್ರದಲ್ಲಿ ಅಭಿನಯಿಸಿ ಪ್ರೇಕ್ಷಕರ ಮನಸೂರೆಗೊಂಡರು. ಸಾಕಷ್ಟು ಮಾಸ್ ಎಲಿಮೆಂಟ್ಸ್ ಮತ್ತು ಹೀರೋ ಎಲಿವೇಶನ್ಸ್ ಹೊಂದಿದ್ದ ಚಿತ್ರ ಪ್ರೇಕ್ಷಕರಿಗೆ ಮುದನೀಡಿತ್ತು.
ಚಿತ್ರಕ್ಕೆ ದಕ್ಷಿಣ ಹಾಗೂ ಉತ್ತರ ಭಾಗದ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅದ್ಧೂರಿಯಾಗಿ ಬಿಡುಗಡೆಯಾಗಿರುವ ಚಿತ್ರ ಹಿಂದಿಯಲ್ಲಿ ಸದ್ದು ಮಾಡುತ್ತಿದೆ. ಬಾಲಿವುಡ್ ಮಂದಿ ಕೆಜಿಎಫ್ ಚಾಪ್ಟರ್ 2 ಗಾಗಿ ಕಾತರದಿಂದ ಕಾಯುತ್ತಿದ್ದರು. ಅವರ ನಿರೀಕ್ಷೆಗೆ ಕಡಿವಾಣ ಹಾಕದೇ ಕೆಜಿಎಫ್2 ರಿಲೀಸ್ ಆಗಿದ್ದು, ಸಿನಿಮಾಗೆ ಅಲ್ಲಿ ಕಲೆಕ್ಷನ್ ನಲ್ಲಿ ಸುರಿಮಳೆಯಾಗುತ್ತಿದೆ. ಕೆಜಿಎಫ್-2 ಈಗಾಗಲೇ 350 ಕೋಟಿ ಕ್ಲಬ್ ಮಾರ್ಕ್ ಅನ್ನು ಮೀರಿದೆ, ಇದು ಅನೇಕ ಹಿಂದಿ ಚಿತ್ರಗಳಿಗೆ ಸಾಧ್ಯವಾಗಿಲ್ಲ.
ಕೆಜಿಎಫ್ 2 ಚಿತ್ರ 400 ಕೋಟಿ ಸಮೀಪಿಸುತ್ತಿರುವುದರಿಂದ ಚಿತ್ರದ ಅಬ್ಬರಕ್ಕೆ ಬ್ರೇಕ್ ಬೀಳುವುದಿಲ್ಲ ಎನ್ನುತ್ತಿವೆ ಬಾಲಿವುಡ್ ಮೂಲಗಳು. ಪೂರ್ಣ ಪ್ರಮಾಣದ ಆಕ್ಷನ್ ಎಂಟರ್‌ಟೈನರ್ ಆಗಿ ಮೂಡಿ ಬಂದಿರುವ ಕೆಜಿಎಫ್ ಚಾಪ್ಟರ್ 2 ನೋಡಲು ಉತ್ತರ ಪ್ರೇಕ್ಷಕರು ಕಾತರರಾಗಿದ್ದಾರೆ.
ಈ ಚಿತ್ರ ಬಾಲಿವುಡ್ ನಲ್ಲಿ ಇನ್ನೂ ಯಾವ ರೀತಿಯ ಸಂಚಲನ ಮೂಡಿಸುತ್ತದೆ ಎಂಬುದನ್ನು ಕಾದು ನೋಡಬೇಕು. ಚಿತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್, ರವೀನಾ ಟಂಡನ್ ಮತ್ತು ಶ್ರೀನಿಧಿ ಶೆಟ್ಟಿ ಇತರ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.