KGF Chapter 2: ರಾಕಿ ಭಾಯ್ ಹವಾ, ಬಾಲಿವುಡ್ ಫೈರ್ ಬ್ರ್ಯಾಂಡ್ ಪಿಧಾ

ಬಾಲಿವುಡ್ ಫೈರ್ ಬ್ರಾಂಡ್ ಕಂಗನಾ ರಣಾವತ್. ತಾನು ನಟಿಸಿದ ಚಿತ್ರಗಳಿಗಿಂತ ಹೆಚ್ಚಾಗಿ ವಿವಾದಾತ್ಮಕ ಕಾಮೆಂಟ್‌ಗಳಿಂದಲೇ ಸದಾ ಸುದ್ದಿಯಲ್ಲಿದ್ದಾರೆ. ಇತ್ತೀಚಿಗೆ ದಕ್ಷಿಣದ ಸಿನಿಮಾ, ನಾಯಕ, ನಿರ್ದೇಶಕರ ಬಗ್ಗೆ ಮೆಚ್ಚುಗೆಯ ಸುರಿಮಳೆಯಾಗುತ್ತಿದೆ.
ನಿರ್ದೇಶಕ ರಾಜಮೌಳಿ ಜೊತೆಗೆ ಅರ್ಜುನ್, ಎನ್.ಟಿ.ಆರ್, ರಾಮ್ ಚರಣ್, ಅಲ್ಲು ಅರ್ಜುನ್ ಬಗೆಗೆ ಮೆಚ್ಚುಗೆಗಳ ಮಹಾಪೂರವೇ ಹರಿದು ಬಂದಿತ್ತು. ಇತ್ತೀಚಿನ ಕೆಜಿಎಫ್-2 ಚಿತ್ರದ ನಾಯಕ ಯಶ್ ಅವರನ್ನು ಸಹ ಈಗ ಹೊಗಳಿದ್ದಾರೆ.
ಯಶ್ ಅವರು ಅಮಿತಾಬ್ ಬಚ್ಚನ್ ಜೊತೆಗಿನ ಹೋಲಿಕೆಯನ್ನು Instagram ನಲ್ಲಿ ಪೋಸ್ಟ್ ಮಾಡಿದ್ದಾರೆ. ‘ಭಾರತವು ದಶಕಗಳಿಂದ ಆಂಗ್ರಿ ಯಂಗ್ ಮ್ಯಾನ್ ಅನ್ನು ಕಳೆದುಕೊಂಡಿದೆ. 1970ರ ದಶಕದಲ್ಲಿ ಅಮಿತಾಬ್ ಬಚ್ಚನ್ ಅವರ ನಂತರ ಈ ಜಾಗ ಖಾಲಿ ಇದೆ. ಈಗ ಅವರ ಸ್ಥಾನಕ್ಕೆ ಯಶ್ ಬಂದಿದ್ದಾರೆ. ಇದು ಅದ್ಭುತ ಎಂದು ಕಂಗನಾ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
1970 ಮತ್ತು 80 ರ ದಶಕದಲ್ಲಿ ಅಮಿತಾಬ್ ಬಚ್ಚನ್ ಅವರನ್ನು ‘ಆಂಗ್ರಿ ಯಂಗ್ ಮ್ಯಾನ್’ ಎಂದು ಕರೆಯಲಾಯಿತು. ಕಂಗನಾ ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಏತನ್ಮಧ್ಯೆ ಕೆಜಿಎಫ್-2 ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಯಶಸ್ಸು ಕಂಡಿದೆ. ಚಿತ್ರದಲ್ಲಿ ರಾಕಿ ಭಾಯ್ ಪಾತ್ರದಲ್ಲಿ ಯಶ್ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರ ಇದೇ ತಿಂಗಳ 14 ರಂದು ವಿಶ್ವದಾದ್ಯಂತ ಬಿಡುಗಡೆಯಾಗಿತ್ತು.
ಚಿತ್ರಮಂದಿರದಲ್ಲಿ ಬಿಡುಗಡೆಯಾದ ಮೊದಲ ದಿನವೇ 134.50 ಕೋಟಿ ರೂ. ಗೂ ಹೆಚ್ಚು ಗಳಿಸಿತ್ತು, ಚಿತ್ರದಲ್ಲಿ ಸಂಜಯ್ ದತ್, ರವೀನಾ ತಂಡನ್, ಪ್ರಕಾಶ್ ರಾಜ್, ಮಾಳವಿಕಾ ಅವಿನಾಶ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
Kgf2 Kangana Heaps Praises On Yash Him With Amitabh Bachchans Angry Young Man Image





