Prabhas New Movie, 3D ಸ್ವರೂಪದಲ್ಲಿ ಬಾಹುಬಲಿ ಪ್ರಭಾಸ್ ಹೊಸ ಸಿನಿಮಾ
Prabhas New Movie: ಸ್ಟಾರ್ ಹೀರೋ ಪ್ರಭಾಸ್ (Prabhas) ಈಗ Adipurush ಸಿನಿಮಾದಲ್ಲಿ 3D ರೂಪದಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಈ ಬಗ್ಗೆ ಅಪ್ಡೇಟ್ ನೀಡಿರುವ ನಿರ್ಮಾಪಕರು ಚಿತ್ರ ತಯಾರಿ ಕೊನೆಯ ಹಂತಕ್ಕೆ ತಲುಪಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
Prabhas New Movie: ಸ್ಟಾರ್ ಹೀರೋಗಳ ಸಿನಿಮಾಗಳನ್ನು ಆದಷ್ಟು ಬೇಗ ತೆರೆ ಮೇಲೆ ಕಾಣಲು ಅಭಿಮಾನಿಗಳು ಸಾಮಾನ್ಯವಾಗಿ ಕಾತರರಾಗಿರುತ್ತಾರೆ. ಆ ಸಿನಿಮಾಗಳ ಬಗ್ಗೆ ಹೊಸ ವಿಷಯಗಳಿಗಾಗಿ ಕಾಯುತ್ತಿರುತ್ತಾರೆ. ಇದರಂತೆ ಪ್ಯಾನ್-ಇಂಡಿಯಾ ಮಟ್ಟದಲ್ಲಿ ತೆರೆಕಾಣುವ ಪ್ರಭಾಸ್ ಚಿತ್ರಗಳು ಸಹಜವಾಗಿಯೇ ಬಿಡುಗಡೆಗೆ ವಿಳಂಬವಾಗುತ್ತವೆ.
ಇದನ್ನೂ ಓದಿ : 3D ರೂಪದಲ್ಲಿ ಪ್ರಭಾಸ್ ಹೊಸ ಸಿನಿಮಾ
ಈ ಕಾರಣದಿಂದಾಗಿ, ಅವರ ಅಭಿಮಾನಿಗಳು ಆಗಾಗ್ಗೆ ಚಿತ್ರದ ಬಗ್ಗೆ ಸಾಮಾಜಿಕಜಾಲತಾಣಗಳಲ್ಲಿ ಹುಡುಕಾಟ ನಡೆಸುತ್ತಾರೆ, ಹೊಸ ಹೊಸ ಅಪ್ಡೇಟ್ ತಿಳಿಯಲು ಕುತೂಹಲ ತೋರುತ್ತಾರೆ. ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕರನ್ನು ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಒತ್ತಾಯಿಸುತ್ತಾರೆ. ಅವರಿಗಾಗಿ ‘ಆದಿಪುರುಷ’ ಚಿತ್ರದ ನಿರ್ದೇಶಕ ಓಂ ರಾವತ್ ಕುತೂಹಲಕಾರಿ ಅಪ್‌ಡೇಟ್ ನೀಡಿದ್ದಾರೆ.
ಇದನ್ನೂ ಓದಿ : ರಶ್ಮಿಕಾ ಮಂದಣ್ಣ ಪದೇ ಪದೇ ಮುಂಬೈ ಭೇಟಿ ಸೀಕ್ರೆಟ್
ಪ್ರಸ್ತುತ ಚಲನಚಿತ್ರವನ್ನು 3D ಸ್ವರೂಪಕ್ಕೆ ಪರಿವರ್ತಿಸಲಾಗುತ್ತಿದೆ. ಅಮೆರಿಕದ ಲಾಸ್ ಏಂಜಲೀಸ್ ಐಮ್ಯಾಕ್ಸ್ ನಲ್ಲಿ ಈ ಕೆಲಸಗಳು ನಡೆಯುತ್ತಿವೆ. ಇದನ್ನು ಓಂ ರಾವತ್ ತಮ್ಮ ಟ್ವೀಟ್ ಮೂಲಕ ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ : ರಶ್ಮಿಕಾ ಮಂದಣ್ಣ ಬಗ್ಗೆ ಈ ಅಪ್ಡೇಟ್ ನೀವು ನೋಡಲೇ ಬೇಕು
ಆದಿಪುರುಷ ಸಿನಿಮಾ ಸಂಪೂರ್ಣ ಹಂತಕ್ಕೆ ಬಂದಿದೆ. ಪ್ರಭಾಸ್ ಅಭಿಮಾನಿಗಳಿಗೆ ಇದು ನನ್ನ ದೊಡ್ಡ ಅಪ್‌ಡೇಟ್. ಚಿತ್ರದ ಬಿಡುಗಡೆಗೆ ಕಾಯುತ್ತಿರುವ ಅಭಿಮಾನಿಗಳು ಈ ಮೂಲಕ ಫುಲ್ ಖುಷ್ ಆಗಿದ್ದಾರೆ. ಟಿ ಸಿರೀಸ್ ಕಂಪನಿ ಅಡಿಯಲ್ಲಿ ಭೂಷಣ್ ಕುಮಾರ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಕೃತಿ ಸನನ್ ಸೀತೆಯಾಗಿ ಮತ್ತು ಸೈಫ್ ಅಲಿ ಖಾನ್ ರಾವಣಾಸುರನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಸಿನಿಮಾ ‘ಸೀತಾ ರಾಮನ್’ ಪೋಸ್ಟರ್ ಬಿಡುಗಡೆ
Prabhas News Movie Adipurush Converted into Imax 3d
Follow us On
Google News |