ನಕ್ಸಲ್‌ ಪಾತ್ರದಲ್ಲಿ ಪ್ರಿಯಾಮಣಿ, ಲಾಕ್‌ಡೌನ್‌ ಬಳಿಕ ಚಿತ್ರೀಕರಣ ಪ್ರಾರಂಭ

Priyamani to share screen with Rana and Sai Pallavi in Naxal Roal

ವೇಣು ಉದುಗುಲ ನಿರ್ದೇಶನದ ತೆಲುಗಿನ ‘ವಿರಾಟ ಪರ್ವ’ ಚಿತ್ರ ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ನಕ್ಸಲರ ಕಥೆಯನ್ನು ಹೇಳುವ ಚಿತ್ರದಲ್ಲಿ ನಂದಿತಾ ದಾಸ್ ಮತ್ತು ಪ್ರಿಯಾಮಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರಾನಾ ದಗ್ಗುಬಾಟಿ ಮತ್ತು ಸಾಯಿ ಪಲ್ಲವಿ ಮುಖ್ಯಭೂಮಿಕೆಯಲ್ಲಿರುವ ಇದು ಪಿರಿಯಾಡಿಕ್ ಸಿನಿಮಾ. ಲಾಕ್‌ಡೌನ್‌ ಮುಗಿದ ಬಳಿಕ ಸಿನಿಮಾದ ಉಳಿದ ಭಾಗದ ಚಿತ್ರೀಕರಣ ಪೂರ್ಣಗೊಳಿಸಲು ಚಿತ್ರತಂಡ ಸಿದ್ಧತೆ ನಡೆಸಿದೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಪ್ರಿಯಾಮಣಿ, ಚಿತ್ರದಲ್ಲಿ ನಕ್ಸಲೈಟ್ ಪಾತ್ರವನ್ನು ನಿರ್ವಹಿಸುತ್ತಿರುವುದಾಗಿ ದೃಡಪಡಿಸಿದರು . “ಇದು ಒಟ್ಟಾರೆಯಾಗಿ ವಿಭಿನ್ನ ರೀತಿಯ ಚಿತ್ರವಾಗಲಿದೆ. ಈ ಸಮಯದಲ್ಲಿ ನಾನು ಹಂಚಿಕೊಳ್ಳಬಹುದಾದ ಏಕೈಕ ವಿಷಯವೆಂದರೆ ಇದು ನಿಜವಾದ ಕಥೆ, ”ಎಂದು ಹೇಳಿದ್ದಾರೆ.

ನಕ್ಸಲ್‌ ಪಾತ್ರದಲ್ಲಿ ಪ್ರಿಯಾಮಣಿ, ಲಾಕ್‌ಡೌನ್‌ ಬಳಿಕ ಚಿತ್ರೀಕರಣ ಪ್ರಾರಂಭ
ನಕ್ಸಲ್‌ ಪಾತ್ರದಲ್ಲಿ ಪ್ರಿಯಾಮಣಿ, ಲಾಕ್‌ಡೌನ್‌ ಬಳಿಕ ಚಿತ್ರೀಕರಣ ಪ್ರಾರಂಭ

ಈ ಸಿನಿಮಾಕ್ಕೆ ಸುಧಾಕರ್‌ ಮತ್ತು ಸುರೇಶ್‌ ಬಾಬು ಬಂಡವಾಳ ಹೂಡಿದ್ದಾರೆ. ತಮಿಳಿನ ‘ಅಸುರನ್‌’ ಚಿತ್ರದ ತೆಲುಗು ರಿಮೇಕ್‌ ಆದ ‘ನಾರಪ್ಪ’ ಚಿತ್ರದಲ್ಲೂ ಪ್ರಿಯಾಮಣಿ ನಟಿಸುತ್ತಿದ್ದಾರೆ. ಇದರಲ್ಲಿ ಅವರು ನಟ ವೆಂಕಟೇಶ್‌ ರವರ ಪತ್ನಿಯ ಪಾತ್ರದಲ್ಲಿ ನಟಿಸುತ್ತಿರುವುದಾಗಿ ಸುದ್ದಿ ಹರಿದಾಡುತ್ತಿದೆ.

Kannada News

ಇವುಗಳಲ್ಲದೆ, ನಟಿ ಕನ್ನಡ ಮತ್ತು ಹಿಂದಿ ಸಿನಿಮಾ ಯೋಜನೆಗಳಲ್ಲಿ ಮತ್ತು ತೆಲುಗಿನ ಬಹುದೊಡ್ಡ ಎರಡು ರಿಯಾಲಿಟಿ ಶೋಗಳಲ್ಲೂ ತೊಡಗಿಸಿ ಕೊಂಡಿದ್ದಾರೆ, ಸಧ್ಯ ಲಾಕ್ ಡೌನ್ ನಿಂದಾಗಿ ಅವು ಸ್ಥಗಿತಗೊಂಡಿವೆ.

Web Title : Priyamani to share screen with Rana and Sai Pallavi in Naxal Roal

Follow us On

FaceBook Google News