ಡಾ ರಾಜ್ ಕುಮಾರ್ ಜೊತೆ ಪುನೀತ್ .. ಹಾರ್ಟ್ ಟಚಿಂಗ್ ಪೇಂಟಿಂಗ್ Viral Painting

(Viral Painting) ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Rajkumar) ನಿಧನ ಇನ್ನೂ ಸಹಿಸಲಾಗದ ಕಹಿ ಸತ್ಯ…. ಶತಮಾನ ಕಳೆದರೂ ಅವರ ನೆನಪು ಸದಾ ನಮ್ಮ ಜೊತೆ ಇದ್ದೆ ಇರುತ್ತದೆ, ಅಷ್ಟು ಫಿಟ್ ಆಗಿದ್ದ ಅವರು ಏಕಾಏಕಿ ಎಲ್ಲರನ್ನೂ ಬಿಟ್ಟು ಹೋಗಿದ್ದನ್ನು ಅಭಿಮಾನಿಗಳು, ಸೆಲೆಬ್ರಿಟಿಗಳು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಡಾ.ರಾಜಕುಮಾರ್ ಜೊತೆ ಪುನೀತ್ .. ಹಾರ್ಟ್ ಟಚಿಂಗ್ ಪೇಂಟಿಂಗ್
ಡಾ.ರಾಜಕುಮಾರ್ ಜೊತೆ ಪುನೀತ್ .. ಹಾರ್ಟ್ ಟಚಿಂಗ್ ಪೇಂಟಿಂಗ್

ಅಭಿಮಾನಿಗಳು ಕಣ್ಣೀರು ಸುರಿಸುತ್ತಿದ್ದಾರೆ. ಪುನೀತ್ ಸಮಾಧಿಗೆ ಹೋಗಿ ನೆಚ್ಚಿನ ನಟನ ದರ್ಶನ ಪಡೆಯುತ್ತಿದ್ದಾರೆ.

ಇದೆ ಅಭಿಮಾನದಿಂದ ಅಭಿಮಾನಿ ಕರಣ್ ಆಚಾರ್ಯ ಬಿಡಿಸಿದ ಪುನೀತ್ ರಾಜ್ ಕುಮಾರ್ ಪೇಂಟಿಂಗ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಚಿತ್ರದಲ್ಲಿ ಪುನೀತ್ ತಂದೆ ಕನ್ನಡದ ಕಂಠೀರವ ಡಾ ರಾಜ್ ಕುಮಾರ್ ಸ್ವರ್ಗದಲ್ಲಿ ಕುಳಿತಿದ್ದಾರೆ.. ಹಿಂದಿನಿಂದ ಹೋದ ಪುನೀತ್ ಕಣ್ಣು ಮುಚ್ಚಿ ಸರ್ಪ್ರೈಸ್ ನೀಡುತ್ತಿದ್ದಾರೆ. ಈ ಪೇಂಟಿಂಗ್ ನೋಡಿದ ಅಭಿಮಾನಿಗಳು ಈಗ ಭಾವುಕರಾಗಿದ್ದಾರೆ.

ಇದು ಒಂದೇ ಚಿತ್ರ ಸಾವಿರ ಸಾವಿರ ಕಥೆ ಹೇಳುತ್ತಿದೆ, ಸಾವಿರ ಮಾತುಗಳು ಈ ಒಂದೇ ಒಂದು ಚಿತ್ರಕ್ಕೆ ಸಮ… ಈ ಚಿತ್ರ ನೋಡಿದ ಪ್ರತಿಯೊಬ್ಬ ಅಭಿಮಾನಿಗಳ ಕಣ್ಣುಗಳಲ್ಲಿ ಒಂದು ಕ್ಷಣ ನೀರುತುಂಬುವುದು ಸತ್ಯ.

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ