ಪೂರಿ ಜಗನ್ನಾಥ್ ರ “ಜನಗಣಮನ” ಹಾಡೋದು ಯಾರು ?

Puri jagannadh latest movie is being planned with Kannada hero Rocking Star Yash

ಪೂರಿ ಜಗನ್ನಾಥ್ ರ “ಜನಗಣಮನ” ಹಾಡೋದು ಯಾರು ?

ನಿರ್ದೇಶಕ ಪೂರಿ ಜಗನ್ನಾಥ್ , ತಮ್ಮ ಇತ್ತೀಚಿಗೆ ಬಿಡುಗಡೆಯಾಗಿ ಬ್ಲಾಕ್ ಬ್ಲಾಸ್ಟರ್ ತಲುಪಿದ “ಇಸ್ಮಾರ್ಟ್ ಶಂಕರ್” ಸಿನಿಮಾದ ನಂತರ ” ಜನಗಣಮನ ” ಸಿನಿಮಾ ಮಾಡಲು ಮುಂದಾಗಿದ್ದಾರೆ, ಎಂಬ ಮಾತುಗಳು ಕೇಳಿ ಬರುತ್ತಿವೆ. ‘ಪೋಕಿರಿ ಮತ್ತು ಬಿಸಿನೆಸ್‌ಮ್ಯಾನ್’ ನಂತಹ ಹಿಟ್‌ಗಳ ನಂತರ ಮಹೇಶ್ ಬಾಬು ಅವರೊಂದಿಗೆ ಹ್ಯಾಟ್ರಿಕ್ ಗೆ ‘ಜನಗನಮಣ’ ಚಿತ್ರಕಥೆ ಎಂದು ಪೂರಿ ಜಗನ್ನಾಥ್ ಅದಾಗಲೇ ಘೋಷಿಸಿದ್ದರು.

ಮಹೇಶ್ ಬಾಬು ಜೊತೆ ಮಾತುಕತೆ ನಡೆಸಿದ್ದ ಪೂರಿ ಜಗನ್ನಾಥ್, ಇಬ್ಬರ ಸಂಯೋಜನೆಯ ಆ ಸಿನಿಮಾಗೆ ‘ಜನ ಗಣ ಮನ’ ಎಂಬ ಶೀರ್ಷಿಕೆ ಫೈನಲ್ ಮಾಡಿದ್ದರು, ಅದಾಗಲೇ ಚಿತ್ರದ ಫಸ್ಟ್ ಲುಕ್ ಕೂಡ ಬಿಡುಗಡೆಯಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಆದ ಬದಲಾವಣೆಯಲ್ಲಿ ಮಹೇಶ್ ಬಾಬು ದಿಡೀರ್ ಚಿತ್ರದಿಂದ ಹೊರ ನಡೆದಿದ್ದು, ಆ ಆಫರ್ ಇದೀಗ ಕನ್ನಡದ ರಾಕಿ ಬಾಯ್ ಯಶ್ ಗೆ ಬಂದಿದೆ.
ಈಗಾಗಲೇ ಯಶ್ ರವರೊಂದಿಗೆ ಸಿನಿಮಾ ಕುರಿತು ಎರಡು ಬಾರಿ ಮಾತುಕತೆ ನಡೆಸಿರುವ ಜಗನ್ನಾಥ್, ಎಲ್ಲವನ್ನು ಫೈನಲ್ ಮಾಡಿಕೊಂಡಿದ್ದಾರೆ ಎಂಬುದು ತಿಳಿದು ಬಂದಿದೆ. ಸಧ್ಯ ಮಹೇಶ್ ಬಾಬುವಿಗಾಗಿ ಸಿದ್ದಪಡಿಸಿದ್ದ ಕಥೆ ಯಶ್ ಪಾಲಾಗಿದೆ. ಈ ಬಗ್ಗೆ ಮಾತನಾಡಿರುವ ಪೂರಿ ಜಗನ್ನಾಥ್, ಸಿನಿಮಾ ಕುರಿತು ಮಹೇಶ್ ಬಾಬು ವಿನಿಂದ ಇನ್ನು ಯಾವುದೇ ಪ್ರತಿಕ್ರಿಯೆ ಬಂದಿಲ್ಲವಂತೆ, ಹಾಗೂ ಕಥೆಯನ್ನು ಯಶ್ ಗೆ ಹೇಳಿದ್ದು, ಅವರೂ ಸಹ ಆಸಕ್ತಿ ತೋರಿದ್ದಾರೆ ಎಂದು ಹೇಳಿದ್ದಾರೆ.
ಕೆ.ಜಿ.ಎಫ್ ಚಿತ್ರದ ಮೂಲಕ ದೇಶಾದ್ಯಂತ ಜನಪ್ರಿಯ ಪಡೆದ ರಾಕಿ ಬಾಯ್ , ತನ್ನ ಕಥೆಗೆ ತಕ್ಕ ಆಯ್ಕೆ ಎಂದು ನಿರ್ಧರಿಸಿರುವ ಪೂರೀ ಜಗನ್ನಾಥ್ , ಚಿತ್ರವನ್ನು ತೆಲುಗು ಮತ್ತು ಕನ್ನಡಲ್ಲಿ ಒಮ್ಮೆಲೇ ಬಿಡುಗಡೆ ಮಾಡುವ ಆಲೋಚನೆ ಹೊಂದಿದ್ದಾರೆ.////
Web Title : Puri jagannadh latest movie is being planned with Kannada hero Rocking Star Yash

Follow us On

FaceBook Google News