Pushpa-2: ಪುಷ್ಪ-2 ಚಿತ್ರೀಕರಣಕ್ಕೆ ಅಲ್ಲು ಅರ್ಜುನ್ ಟೆಸ್ಟ್ ಲುಕ್
Pushpa-2 Shooting Starts: ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪುಷ್ಪ-2 ಚಿತ್ರಕ್ಕೆ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.
Pushpa-2 Shooting Starts: ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಅಭಿನಯದ ಪುಷ್ಪ-2 ಚಿತ್ರಕ್ಕೆ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಕ್ರಿಯೇಟಿವ್ ಡೈರೆಕ್ಟರ್ ಸುಕುಮಾರ್ (Sukumar) ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ನಡೆಸಿದೆ. ಆದರೆ, ಈ ಚಿತ್ರದ ಕೆಲಸ ಶುರುವಾಗಿ ಹಲವು ದಿನಗಳು ಕಳೆದರೂ ರೆಗ್ಯುಲರ್ ಶೂಟಿಂಗ್ ಆರಂಭವಾಗಿಲ್ಲ.
ಬಿಗ್ ಬಾಸ್ ಗೆ ಸೋನು ಗೌಡ ಮತ್ತೆ ಎಂಟ್ರಿ, ಹೊಡೀರಿ ಹಲಗಿ…
ಈ ಸಿನಿಮಾದ ರೆಗ್ಯುಲರ್ ಶೂಟಿಂಗ್ ಯಾವಾಗ ಶುರುವಾಗಲಿದೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಆದರೆ ಈ ಚಿತ್ರದ ರೆಗ್ಯುಲರ್ ಶೂಟಿಂಗ್ ಬಗ್ಗೆ ಚಿತ್ರತಂಡ ಇತ್ತೀಚಿನ ಮಾಹಿತಿ ನೀಡಿದೆ. ಚಿತ್ರದ ರೆಗ್ಯುಲರ್ ಶೂಟಿಂಗ್ ಆರಂಭವಾಗುತ್ತಿದ್ದಂತೆ ಚಿತ್ರತಂಡ ಫೋಟೋವೊಂದನ್ನು ಶೇರ್ ಮಾಡಿದೆ. ಈ ಕ್ರಮದಲ್ಲಿ ನಿರ್ದೇಶಕ ಸುಕುಮಾರ್ ಅವರು ಖ್ಯಾತ ಛಾಯಾಗ್ರಾಹಕ ಅವಿನಾಶ್ ಗೋವಾರಿಕರ್ ಅವರೊಂದಿಗೆ ಅಲ್ಲು ಅರ್ಜುನ್ ಗಾಗಿ ಟೆಸ್ಟ್ ಲುಕ್ ನಡೆಸಿದರು.
ಸಪ್ತಮಿ ಗೌಡ ಮಂಗಳೂರು ಭಾಷೆ ಕಲಿತಿದ್ದು ಹೇಗೆ ಗೊತ್ತಾ
ಈ ಕ್ರಮದಲ್ಲಿ ಚಿತ್ರತಂಡವು ಸೆಟ್‌ನಲ್ಲಿರುವ ವರ್ಕಿಂಗ್ ಸ್ಟಿಲ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. ದೀಪಾವಳಿ ಉಡುಗೊರೆಯಾಗಿ ಈ ಟೆಸ್ಟ್ ಲುಕ್ ಬಿಡುಗಡೆಯಾಗಲಿದೆ ಎಂಬ ಮಾತುಗಳು ಚಿತ್ರ ವಲಯದಲ್ಲಿ ಕೇಳಿಬರುತ್ತಿವೆ. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ನಾಯಕಿಯಾಗಿ ನಟಿಸುತ್ತಿದ್ದು, ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರವನ್ನು ನಿರ್ಮಿಸುತ್ತಿದೆ.
Pushpa 2 director Sukumar conducted a test look for Allu Arjun
Follow us On
Google News |
Advertisement