ಪಾಟ್ನಾದಲ್ಲಿ ಪುಷ್ಪ 2 ಟ್ರೈಲರ್ ಬಿಡುಗಡೆ ಸಮಾರಂಭ, ಹೇಗಿತ್ತು ಅಲ್ಲು ಅರ್ಜುನ್ ಹವಾ
ಪುಷ್ಪ 2 ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕಾಗಿ ಬಿಹಾರ ಸರ್ಕಾರವು 900 ಪೊಲೀಸರು ಮತ್ತು 300 ಖಾಸಗಿ ಭದ್ರತಾ ಸಿಬ್ಬಂದಿಯನ್ನು ವ್ಯವಸ್ಥೆಗೊಳಿಸಿತ್ತು
ಅಲ್ಲು ಅರ್ಜುನ್ (Allu Arjun) ಅಭಿನಯದ ಪುಷ್ಪ 2 ಟ್ರೈಲರ್ (Pushpa 2 trailer launch) ಪಾಟ್ನಾದಲ್ಲಿ ಬಿಡುಗಡೆಯಾಗಿದೆ ಈ ಸಮಾರಂಭ ನೋಡಿದರೆ ಗೊತ್ತಾಗುತ್ತೆ ಉತ್ತರದಲ್ಲಿ ಬನ್ನಿಗೆ ಯಾವ ರೆಂಜ್ ಗೆ ಫಾಲೋವರ್ಸ್ ಇದ್ದಾರೆ ಎಂಬುದು.
ಒಂದಲ್ಲ…ಎರಡಲ್ಲ…1200 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಬಿಹಾರದ ಇತಿಹಾಸದಲ್ಲಿ ಇಷ್ಟೊಂದು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿರುವುದು ಇದೇ ಮೊದಲು.
ಪಾಟ್ನಾದಲ್ಲಿ (Patna) ಈ ರೇಂಜ್‌ನಲ್ಲಿ ನಡೆದ ಮೊದಲ ಸಿನಿಮಾ ಕಾರ್ಯಕ್ರಮ ಇದಾಗಿದೆ. ಈ ಕಾರ್ಯಕ್ರಮಕ್ಕೆ ಭಾರೀ ಪ್ರತಿಕ್ರಿಯೆ ಹಾಗೂ ಅಪಾರ ಜನಸ್ತೋಮದಿಂದಾಗಿ ಬಿಹಾರ ಸರ್ಕಾರ ಕಾರ್ಯಕ್ರಮದ ಬಳಿ ಭಾರೀ ವ್ಯವಸ್ಥೆ ಮಾಡಿತ್ತು.
ಈ ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕಾಗಿ ಬಿಹಾರ ಸರ್ಕಾರವು 900 ಪೊಲೀಸರು ಮತ್ತು 300 ಖಾಸಗಿ ಭದ್ರತಾ ಸಿಬ್ಬಂದಿಯನ್ನು ವ್ಯವಸ್ಥೆಗೊಳಿಸಿತ್ತು.
Pushpa 2 trailer launch in Patna