ನಟಿ ಸಮಂತಾ ಹಿಂದಿ ವೆಬ್ ಸಿರೀಸ್ ಗಾಗಿ ಮಾರ್ಷಲ್ ಆರ್ಟ್ಸ್ ತರಬೇತಿ
ನಟಿ ಸಮಂತಾ ಸದ್ಯ ಹಿಂದಿ ವೆಬ್ ಸಿರೀಸ್ ನಲ್ಲಿ ನಟಿಸಲು ಮಾರ್ಷಲ್ ಆರ್ಟ್ಸ್ ತರಬೇತಿ ಆರಂಭಿಸುತ್ತಿದ್ದಾರೆ.
ತಮಿಳು ಮತ್ತು ತೆಲುಗಿನಲ್ಲಿ ಮುಂಚೂಣಿ ನಾಯಕಿಯಾಗಿರುವ ಸಮಂತಾ ಹಿಂದಿ ಚಿತ್ರರಂಗದಲ್ಲಿ ‘ಫ್ಯಾಮಿಲಿಮ್ಯಾನ್ 2’ ವೆಬ್ ಸಿರೀಸ್ ನಲ್ಲಿ ನಟಿಸುವ ಮೂಲಕ ಫೇಮಸ್ ಆದರು. ಮಹಿಳಾ ಪ್ರಧಾನ ಚಿತ್ರಗಳಿಂದ ಬಂದು ಸಾಹಸ ದೃಶ್ಯಗಳಲ್ಲಿ ನಟಿಸುವ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ.
ಅವರ ಡೆಡಿಕೇಶನ್ ಪ್ರಶಂಸೆಗೆ ಪಾತ್ರವಾಗಿದೆ. ಇದರ ನಂತರ, ಅವರು ಮತ್ತೆ ರಾಜ್ ಮತ್ತು ಡೀ ಕೆ ನಿರ್ದೇಶನದ ಹಿಂದಿ ವೆಬ್ ಸರಣಿಯಲ್ಲಿ ನಟಿಸಲಿದ್ದಾರೆ. ಇದರಲ್ಲಿ ಹಿಂದಿ ನಟ ವರುಣ್ ಧವನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ : ವೆಬ್ ಸ್ಟೋರೀಸ್
ಈ ಸರಣಿಯಲ್ಲಿಯೂ ಹೊಡೆದಾಟದ ದೃಶ್ಯಗಳು ಇರುವುದರಿಂದ ಸಮಂತಾಗೆ ಮಾರ್ಷಲ್ ಆರ್ಟ್ಸ್ ಕಲಿಯುವಂತೆ ಚಿತ್ರತಂಡ ಸಲಹೆ ನೀಡಿದೆ. ಸಮಂತಾ ಈಗ ಮಾರ್ಷಲ್ ಆರ್ಟ್ಸ್ ತರಬೇತಿ ಆರಂಭಿಸಿದ್ದಾರೆ. ಅಮೇರಿಕದ ಲಾಸ್ ಏಂಜಲೀಸ್ ನಿಂದ ಪ್ರಸಿದ್ಧ ಮಾರ್ಷಲ್ ಕಲಾವಿದರು ಸಮಂತಾಗೆ ತರಬೇತಿ ನೀಡಲು ಮುಂಬೈಗೆ ಬರಾಲಿದ್ದಾರೆ. ಬಾಕ್ಸಿಂಗ್, ಕರಾಟೆ ಸೇರಿದಂತೆ ಹಲವು ಮಾರ್ಷಲ್ ಆರ್ಟ್ಸ್ ಕಲಿಯಲಿದ್ದಾರೆ. ತರಬೇತಿಯ ನಂತರ ಚಿತ್ರೀಕರಣ ಆರಂಭಿಸಲಿದ್ದಾರೆ.
Samantha Learns Martial Arts For Her New Web Series