Yashoda Movie: ಸಮಂತಾ ಸಿನಿಮಾ ಯಶೋದಾ ರಿಲೀಸ್ ಡೇಟ್ ಫಿಕ್ಸ್

Yashoda Movie: ಟಾಲಿವುಡ್ ಸ್ಟಾರ್ ಬ್ಯೂಟಿ ಸಮಂತಾ (Actress Samantha) ಅವರ ಹೊಸ ಸಿನಿಮಾ ‘ಯಶೋದಾ’ ಈಗಾಗಲೇ ಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಹರಿ ಮತ್ತು ಹರೀಶ್ ನಿರ್ದೇಶನದ ಈ ಸಿನಿಮಾ ಸಂಪೂರ್ಣ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವಾಗಿ ತೆರೆಕಾಣುತ್ತಿದೆ. ಈ ಸಿನಿಮಾದಲ್ಲಿ ಸಮಂತಾ ಅಭಿನಯ ಮತ್ತೊಂದು ಲೆವೆಲ್ ನಲ್ಲಿ ಮೂಡಿಬರಲಿದೆ ಎಂದು ಚಿತ್ರತಂಡ ಹೇಳಿದೆ.

ಸಪ್ತಮಿ ಗೌಡ ಮಂಗಳೂರು ಭಾಷೆ ಕಲಿತಿದ್ದು ಹೇಗೆ ಗೊತ್ತಾ

ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಪೋಸ್ಟರ್ ಹಾಗೂ ಟೀಸರ್ ಪ್ರೇಕ್ಷಕರ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಈ ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಎಂದು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಏತನ್ಮಧ್ಯೆ, ಈ ಚಿತ್ರದ ಬಿಡುಗಡೆ ದಿನಾಂಕವನ್ನು (Yashoda Release Date) ಚಿತ್ರತಂಡವು ಲಾಕ್ ಮಾಡಿದೆ.

ನವೆಂಬರ್ 11 ರಂದು ವಿಶ್ವದಾದ್ಯಂತ ಚಿತ್ರ ಬಿಡುಗಡೆಯಾಗುತ್ತಿದೆ ಎಂದು ಚಿತ್ರತಂಡ ತಿಳಿಸಿದೆ. ಈ ಚಿತ್ರದಲ್ಲಿ ಸಮಂತಾ ಅವರ ಪಾತ್ರ ಪ್ರೇಕ್ಷಕರನ್ನು ಥ್ರಿಲ್ ಮಾಡುವುದು ಖಚಿತ ಎಂದು ಚಿತ್ರತಂಡ ವಿಶ್ವಾಸ ವ್ಯಕ್ತಪಡಿಸಿದೆ.

ಬಿಗ್ ಬಾಸ್ ಗೆ ಸೋನು ಗೌಡ ಮತ್ತೆ ಎಂಟ್ರಿ, ಹೊಡೀರಿ ಹಲಗಿ…

ಸಮಂತಾ ಜೊತೆಗೆ ಉನ್ನಿಮುಕುಂದನ್, ವರಲಕ್ಷ್ಮಿ ಶರತ್ ಕುಮಾರ್, ರಾವ್ ರಮೇಶ್, ಮುರಳಿ ಶರ್ಮಾ ಮುಂತಾದವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ಈ ಚಿತ್ರಕ್ಕೆ ಮಣಿ ಶರ್ಮಾ ಸಂಗೀತ ನೀಡುತ್ತಿದ್ದರೆ, ಶ್ರೀದೇವಿ ಕ್ರಿಯೇಷನ್ಸ್ ಬ್ಯಾನರ್ ಈ ಚಿತ್ರವನ್ನು ಭಾರಿ ಬಜೆಟ್‌ನಲ್ಲಿ ನಿರ್ಮಿಸುತ್ತಿದೆ. ಮತ್ತು ಬಾಕ್ಸ್ ಆಫೀಸ್‌ನಲ್ಲಿ ಈ ಸಿನಿಮಾ ಯಾವ ಯಶಸ್ಸು ಗಳಿಸಲಿದೆ ಎಂದು ತಿಳಿಯಲು ನವೆಂಬರ್ 11 ರವರೆಗೆ ಕಾಯಬೇಕು.

ನೀವು ಸಮಂತಾ ಅಭಿಮಾನಿಯಾಗಿದ್ರೆ ಈ ಅಪ್ಡೇಟ್ ನಿಮಗಾಗಿ

Samantha New Movie Yashoda release date fixed

TRENDING ARTICLES1 / 5

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ