Kushi Cinema: ಸಮಂತಾ-ವಿಜಯ್ ದೇವರಕೊಂಡ ಖುಷಿ ಹೊಸ ಶೆಡ್ಯೂಲ್ ಟೈಮ್ ಫಿಕ್ಸ್..!

Kushi Cinema: ವಿಜಯ್ ದೇವರಕೊಂಡ-ಸಮಂತಾ ಕಾಂಬಿನೇಷನ್ ನ ಮೊದಲ ಸಿನಿಮಾ ಆಗಿರುವುದರಿಂದ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ.

ಟಾಲಿವುಡ್ ಸ್ಟಾರ್ ನಟರಾದ ಸಮಂತಾ (Samantha) ಮತ್ತು ವಿಜಯ್ ದೇವರಕೊಂಡ (Vijay Deverakonda) ಕಾಂಬಿನೇಷನ್ ನಲ್ಲಿ ಸಿನಿಮಾ ಖುಷಿ (Kushi Cinema). ಲವ್ ಮತ್ತು ಫ್ಯಾಮಿಲಿ ಎಂಟರ್ಟೈನರ್ ಆಗಿ ಬರುತ್ತಿರುವ ಈ ಚಿತ್ರವನ್ನು ಶಿವ ನಿರ್ವಾಣ ನಿರ್ದೇಶಿಸಿದ್ದಾರೆ. ಈ ಚಿತ್ರದ ಕೆಲವು ಶೂಟಿಂಗ್ ಶೆಡ್ಯೂಲ್‌ಗಳು ಮುಗಿದಿದ್ದು, ವಿಜಯ್-ಶಿವನಿರ್ವಾಣ ತಂಡ ಬ್ರೇಕ್ ತೆಗೆದುಕೊಂಡಿದೆ.

ಗಂಧದ ಗುಡಿ ದರ್ಶನ, ಅಪ್ಪು ಅಭಿಮಾನಿಗಳ ಸಂಭ್ರಮ

ಆದರೆ ಹೊಸ ಶೆಡ್ಯೂಲ್ ಬಗ್ಗೆ ಇತ್ತೀಚಿನ ಸುದ್ದಿಯೊಂದು ಫಿಲಂನಗರ ವಲಯದಲ್ಲಿ ಹರಿದಾಡುತ್ತಿದೆ. ಸದ್ಯದ ಮಾಹಿತಿ ಪ್ರಕಾರ ನವೆಂಬರ್ 15ರಿಂದ ಖುಷಿ ಚಿತ್ರದ ಶೂಟಿಂಗ್ ಶುರುವಾಗಲಿದೆ. ಇದೇ ವೇಳೆ ಸಮಂತಾ ಟೈಟಲ್ ರೋಲ್ ನಲ್ಲಿ ನಟಿಸುತ್ತಿರುವ ಯಶೋದಾ ಬಾಕಿ ಉಳಿದಿರುವ ಕೆಲಸಗಳನ್ನು ಪೂರ್ಣಗೊಳಿಸಲಿದ್ದಾರೆ. ಯಶೋದಾ ಸಿನಿಮಾ ನವೆಂಬರ್ 11 ರಂದು ಬಿಡುಗಡೆಯಾಗಲಿದೆ.

ನಟಿ ಚಾರ್ಮಿಗೆ ಹೆಚ್ಚಾದ ಕಿರುಕುಳ, ನಿಮಿಷ ನಿಮಿಷಕ್ಕೂ ಫೋನ್ ಕರೆಗಳು

ಕನ್ನಡದ ಖ್ಯಾತ ನಟ ಜಯರಾಮ್, ಸಚಿನ್ ಖಡೇಕರ್, ಮುರಳಿ ಶರ್ಮಾ, ಲಕ್ಷ್ಮಿ, ಅಲಿ, ರೋಹಿಣಿ, ವೆನ್ನೆಲ ಕಿಶೋರ್, ರಾಹುಲ್ ರಾಮಕೃಷ್ಣ, ಶ್ರೀಕಾಂತ್ ಅಯ್ಯಂಗಾರ್ ಮತ್ತು ಶರಣ್ಯ ಪ್ರದೀಪ್ ಖುಷಿ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸುತ್ತಿರುವ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ವಿಜಯ್ ದೇವರಕೊಂಡ-ಸಮಂತಾ ಕಾಂಬಿನೇಷನ್ ನ ಮೊದಲ ಸಿನಿಮಾ ಆಗಿರುವುದರಿಂದ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ.

Samantha Vijay Devarakonda Starrer Kushi New Schedule Is Out