ಕೆಜಿಎಫ್ 2 ಥಿಯೇಟರ್ ನಲ್ಲಿ ಜೇಮ್ಸ್ OTT ಯಲ್ಲಿ ಒಂದೇ ದಿನ ಬಿಡುಗಡೆ
Same-day release of KGF 2 in Theater and James in OTT : ಕೆಜಿಎಫ್ 2 ಬಿಡುಗಡೆ ದಿನವೇ ಪುನೀತ್ ರಾಜ್ ಕುಮಾರ್ ಅಭಿನಯದ ‘ಜೇಮ್ಸ್’ ಸಿನಿಮಾ ಓಟಿಟಿಯಲ್ಲಿ ರಿಲೀಸ್ ದಿನಾಂಕ ಫಿಕ್ಸ್ ಆಗಿದೆ.
Same-day release of KGF 2 in Theater and James in OTT : ಕೆಜಿಎಫ್ 2 ಬಿಡುಗಡೆ ದಿನವೇ ಪುನೀತ್ ರಾಜ್ ಕುಮಾರ್ ಅಭಿನಯದ ‘ಜೇಮ್ಸ್’ ಸಿನಿಮಾ ಓಟಿಟಿಯಲ್ಲಿ ರಿಲೀಸ್ ದಿನಾಂಕ ಫಿಕ್ಸ್ ಆಗಿದೆ.
ಯಶ್ ನಟನೆಯ ‘KGF 2’ ಬಿಡುಗಡೆಗೆ ಸಿದ್ಧತೆ ನಡೆದಿದೆ. ಹಲವು ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ ಆಯಾ ಭಾಷೆಯ ಅಭಿಮಾನಿಗಳು ಸಿನಿಮಾವನ್ನು ನೋಡಲು ಕಾತುರದಿಂದ ಕಾಯುತ್ತಿದ್ದಾರೆ.
ಏಪ್ರಿಲ್ 14ರಂದು ವಿಶ್ವದಾದ್ಯಂತ ಈ ಸಿನಿಮಾ ರಿಲೀಸ್ ಆಗುತ್ತಿದ್ದು, ಅಂದೇ ಪುನೀತ್ ರಾಜ್ ಕುಮಾರ್ ನಟನೆಯ ‘ಜೇಮ್ಸ್’ ಚಿತ್ರ ಕೂಡ ಓಟಿಟಿಯಲ್ಲಿ ಬಿಡುಗಡೆ ಆಗುತ್ತಿದೆ.
RRR Cinema ಅಬ್ಬರದ ನಡುವೆಯೂ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ James ಇದೆ. ಬಿಡುಗಡೆಯಾಗಿ ಒಂದು ತಿಂಗಳ ಮುಂಚೆಯೇ OTTಯಲ್ಲಿ ಚಿತ್ರ ರಿಲೀಸ್ ಆಗುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.
ಒಂದು ಕಡೆ ಯಶ್ ನಟನೆಯ ಕೆಜಿಎಫ್ 2 ಸಾವಿರಾರು ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದೆ. RRR ಸಿನಿಮಾ ಕೂಡ ಬಿಡುಗಡೆ ಆಗಿದೆ. ಅಲ್ಲದೇ, ತಮಿಳಿನ ವಿಜಯ್ ಅವರ ಚಿತ್ರ ಕೂಡ ಬಿಡುಗಡೆಗೆ ಸಿದ್ಧವಿದೆ.
ಕರ್ನಾಟಕ ರಾಜರತ್ನ ಡಾ.ಪುನೀತ್ ರಾಜ್ ಕುಮಾರ್ ಅಭಿನಯದ ಪವರ್ ಪ್ಯಾಕ್ಡ್ ಆಕ್ಷನ್ ಎಂಟರ್ಟೈನರ್ 'ಜೇಮ್ಸ್' ಬರಲಿದೆ ಅತೀ ಶೀಘ್ರದಲ್ಲಿ SonyLIV ನಲ್ಲಿ.#James, Streaming in Kannada, Telugu, Tamil, Malayalam & Hindi on April 14 exclusively on SonyLIV. #JamesOnSonyLIV @PRKAudio @PuneethRajkumar @PriyaAnand pic.twitter.com/h9bi7KWZU1
— Sony LIV (@SonyLIV) March 30, 2022
ಜೇಮ್ಸ್ ಸಿನಿಮಾ ರಿಲೀಸ್ ಆಗಿ 25 ದಿನಗಳನ್ನು ಪೂರೈಸಿದೆ. ಎಲ್ಲ ಸಿನಿಮಾಗಳ ನಡುವೆ ಚಿತ್ರಮಂದಿರಗಳ ಸಂಖ್ಯೆ ಕಡಿಮೆ ಇದ್ದು, ಓಟಿಟಿಯಲ್ಲಿ ಏಪ್ರಿಲ್ 14ಕ್ಕೆ James ಸ್ಟ್ರೀಮಿಂಗ್ ಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಒಂದೇ ದಿನ ಒಂದು ಕಡೆ ಯಶ್ ನಟನೆಯ ಸಿನಿಮಾ KGF ಮತ್ತೊಂದು ಕಡೆ ಪುನೀತ್ ಅವರ James. ಎರಡೂ ಸಿನಿಮಾಗಳನ್ನೂ ನೋಡಿ ಆನಂದಿಸಬಹುದಾಗಿದೆ.