ಶಾಲೆ ಮತ್ತು ಆಸ್ಪತ್ರೆಗೆ Puneet Rajkumar ಹೆಸರು !

ಅದ್ಬುತ ನಟನೆ ಹಾಗೂ ವಿದೇಯ ಗುಣಗಳಿಗೆ, ತಮ್ಮ ಶೈಲಿಗೆ ಹೆಸರಾಗಿದ್ದ Puneet Rajkumar ಅವರ ನಿಧನ ಕರ್ನಾಟಕದ ಜನತೆಗೆ ಮರೆಯಲಾಗದ ಹಾಗೂ ಸಹಿಸಲಾಗದ ಕಹಿಸತ್ಯ, ಎಂದು ಮಾಜಿ ಸಚಿವ ಗಾಲಿಜನಾರ್ದನರೆಡ್ಡಿ ಹೇಳಿದರು.

🌐 Kannada News :

ಬಳ್ಳಾರಿ : ಅದ್ಬುತ ನಟನೆ ಹಾಗೂ ವಿದೇಯ ಗುಣಗಳಿಗೆ, ತಮ್ಮ ಶೈಲಿಗೆ ಹೆಸರಾಗಿದ್ದ ಪುನೀತ್ ರಾಜ್ ಕುಮಾರ್ (Puneet Rajkumar) ಅವರ ನಿಧನ ಕರ್ನಾಟಕದ ಜನತೆಗೆ ಮರೆಯಲಾಗದ ಹಾಗೂ ಸಹಿಸಲಾಗದ ಕಹಿಸತ್ಯ, ಎಂದು ಮಾಜಿ ಸಚಿವ ಗಾಲಿಜನಾರ್ದನರೆಡ್ಡಿ ಹೇಳಿದರು.

ಸೋಮವಾರ ಬೆಳಗಾವಿ ಕ್ರಾಸ್‌ನಲ್ಲಿರುವ ರುಕ್ಮಿಣಮ್ಮ ಚೆಂಗಾರೆಡ್ಡಿ ವೃದ್ಧಾಶ್ರಮದಲ್ಲಿ ಪುನೀತ್ ರಾಜ್‌ಕುಮಾರ್ ಅವರ ಚಿತ್ರಕ್ಕೆ ಘನ ನಮನ ಸಲ್ಲಿಸಿ ಮಾತನಾಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಳ್ಳಾರಿಯಲ್ಲಿ ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಉಚಿತ ಆಸ್ಪತ್ರೆ ಹಾಗೂ ಶಾಲೆ ಸ್ಥಾಪಿಸಲಾಗುವುದು. ಅವರ ಹೆಸರಿನಲ್ಲಿ ಬಡವರಿಗೆ ಸ್ವಂತ ನಿಧಿಯಿಂದ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದರು.

ಪುನೀತ್ ಅವರು ವಿನಮ್ರ ವಿಧೇಯತೆಗೆ ಅಡ್ಡಹೆಸರು ಎಂದು ಹೊಗಳಿದರು. ಕಾರ್ಯಕ್ರಮದಲ್ಲಿ ಶಾಸಕ ಗಾಲಿಸೋಮಶೇಖರರೆಡ್ಡಿ, ಬುಡಾ ಅಧ್ಯಕ್ಷ ಪಾಲಣ್ಣ, ಗಾಲಿಜನಾರ್ದನರೆಡ್ಡಿ, ಲಕ್ಷ್ಮೀ ಅರುಣಾ ಮತ್ತಿತರರು ಭಾಗವಹಿಸಿದ್ದರು.

➟ ☞ Kannada News Today ಸುದ್ದಿಗಾಗಿ FacebookTwitter ಅನುಸರಿಸಿ. Google News | News App ಡೌನ್ಲೋಡ್ ಮಾಡಿಕೊಳ್ಳಿ.
Scroll Down To More News Today