ರೇಣುಕಾಸ್ವಾಮಿ ಕುಟುಂಬಕ್ಕೆ ನಟ ಡಿ-ಬಾಸ್ ದರ್ಶನ್ 1 ಕೋಟಿ ರೂಪಾಯಿ..

ಕೊಲೆಯಾದ ರೇಣುಕಾಸ್ವಾಮಿಯ ಪತ್ನಿಗೆ ಗಂಡುಮಗು ಜನಿಸಿದ್ದು, ಇತ್ತ ಡಿ-ಬಾಸ್ ದರ್ಶನ್ ಪರಿಹಾರ ನೀಡಬೇಕೆಂಬ ಬೇಡಿಕೆ ಕೇಳಿ ಬಂದಿದ್ದು, ಅಭಿಮಾನಿಗಳ ನಡುವೆ ವಾದ ಪ್ರತಿವಾದಗಳು ಜೋರಾಗಿವೆ

  • ರೇಣುಕಾಸ್ವಾಮಿ ತಾಯಿ ಕಣ್ಣೀರು ಹಾಕುತ್ತಿರುವ ವಿಡಿಯೋ ವೈರಲ್
  • ಡಿ-ಬಾಸ್ ದರ್ಶನ್ ಪರಿಹಾರ ನೀಡಬೇಕೆಂಬ ಒತ್ತಾಯ, ಅಭಿಮಾನಿಗಳ ಭಿನ್ನಾಭಿಪ್ರಾಯ
  • ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ಜೋರು 

ಬೆಂಗಳೂರು (Bengaluru): ರೇಣುಕಾಸ್ವಾಮಿ ಕೊಲೆ ಪ್ರಕರಣ ನಮಗೆಲ್ಲರಿಗೂ ಗೊತ್ತೇ ಇದೆ. ಕೊಲೆಯಾಗುವ ಮೊದಲು ಅವರ ಪತ್ನಿ ಗರ್ಭಿಣಿ (Pregnant) ಆಗಿದ್ದು, ಇತ್ತೀಚೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವನ್ನು ರೇಣುಕಾಸ್ವಾಮಿ ಕುಟುಂಬದವರು ಮನೆಗೂ ಕರೆ ತಂದಿದ್ದಾರೆ, ಈ ಘಟನೆ ನಂತರ ಮತ್ತೆ ಚರ್ಚೆ ಗರಿಗೆದರಿದೆ.

ಸೋಶಿಯಲ್ ಮೀಡಿಯಾದಲ್ಲಿ ರೇಣುಕಾಸ್ವಾಮಿ ತಾಯಿ ಕಣ್ಣೀರು ಹಾಕುತ್ತಿರುವ ವಿಡಿಯೋ ವೈರಲ್ ಆಗಿದೆ. ಇದರಿಂದ ಕನ್ನಡ ನಾಡಿನ ಜನರು ಸಹಾನುಭೂತಿ (Sympathy) ವ್ಯಕ್ತಪಡಿಸುತ್ತಿದ್ದಾರೆ.

ಇದ್ರ ಜೊತೆಗೆ, ಡಿ-ಬಾಸ್ ದರ್ಶನ್ ತೂಗುದೀಪ್ (Actor Darshan) ಅವರು 1 ಕೋಟಿ ಪರಿಹಾರ ನೀಡಬೇಕು ಎಂಬ ಒತ್ತಾಯವೂ ಕೇಳಿಬರುತ್ತಿದೆ.

ಆದರೆ, ಇದು ಅಭಿಮಾನಿಗಳ ನಡುವೆ ತೀವ್ರ ಚರ್ಚೆಗೆ ಕಾರಣವಾಗಿದೆ. ಡಿ-ಬಾಸ್ (Darshan Thoogudeepa) ಅಭಿಮಾನಿಗಳು, “ಅವನಿಗೆ ಯಾಕೆ ಪರಿಹಾರ?” ಎಂಬ ಪ್ರಶ್ನೆ ಎತ್ತಿದ್ದು, ರೇಣುಕಾಸ್ವಾಮಿ ಬಗೆಗಿನ ಚರ್ಚೆಗಳು ಮತ್ತೆ ಗರಿಗೆದರಿವೆ. ಇದರಿಂದ ಸಾಮಾಜಿಕ ಮಾಧ್ಯಮಗಳಲ್ಲಿ ವಾದ-ವಿವಾದಗಳು ಮತ್ತಷ್ಟು ತೀವ್ರಗೊಂಡಿವೆ.

ಈಗಾಗಲೇ ಕೋರ್ಟ್ (Court) ನಲ್ಲಿ ಪ್ರಕರಣ ಪ್ರಗತಿಯಲ್ಲಿ ಇದ್ದು, ಮುಂದೆ ತೀರ್ಪು ಹೇಗಿರಲಿದೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಇದನ್ನೆಲ್ಲಾ ನೋಡಿದಾಗ, ಮುಂದಿನ ದಿನಗಳಲ್ಲಿ ಈ ಪ್ರಕರಣ ಮತ್ತಷ್ಟು ತಿರುವು ಪಡೆಯುವ ಸಾಧ್ಯತೆ ಇದೆ.

Social Media Demands Darshan to Compensate Renukaswamy Family

English Summary

Related Stories