ತೂಕ ಇಳಿಸಲು 16 ಕೆಜಿ ಸಣ್ಣ ಆಗಿದ್ದೆ ಸ್ಪಂದನಾ ವಿಜಯ್ ರಾಘವೇಂದ್ರ ಅವರಿಗೆ ಮುಳುವಾಯಿತಾ? ಒಂಟಿಯಾದ ಚಿನ್ನಾರಿ ಮುತ್ತ!

Story Highlights

ಲೋ ಬಿಪಿ ಇಂದ ಲಘು ಹೃದಯಘಾತ ಸಮಸ್ಯೆ ಉಂಟಾಗಿ ಮಲಗಿದಂತಹ ಸ್ಪಂದನಾವರು ಮತ್ತೆ ಏಳಲೇ ಇಲ್ಲ ಎಂಬ ವರದಿ ದೊರಕಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಲ್ಲಾ ರೀತಿಯಾದಂತಹ ಪ್ರಯತ್ನಗಳನ್ನು ಮಾಡಿದರು ಸಹ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಸ್ನೇಹಿತರೆ, ಮೂರು ದಿನಗಳ ಹಿಂದೆ ಥೈಲ್ಯಾಂಡ್ (Thailand) ದೇಶದ ಪ್ರವಾಸಿ ತಾಣವಾದ (Tourist Place) ಬ್ಯಾಂಕಾಕ್ ಗೆ (Bangkok) ತೆರಳಿದಂತಹ ಸ್ಪಂದನಾ (Vijay Raghavendra wife Spandana) ಅವರು ಹೋಗುವಾಗ ಬಹಳ ಖುಷಿ ಖುಷಿಯಿಂದ ಮನೆಯವರೆಲ್ಲರ ಆಶೀರ್ವಾದ ಪಡೆದು ತಮ್ಮ ಸ್ನೇಹಿತರೊಂದಿಗೆ ಹೊರಟರು.

ಆದರೆ ದೂರದ ದೇಶದಲ್ಲೇ ಅವರ ಪ್ರಾಣ ಪಕ್ಷಿ ಹಾರಿ ಹೋಗಿರುವುದು (Spandana Death) ಇಡೀ ಕುಟುಂಬಕ್ಕೆ ಸಹಿಸಲಾರದ ನೋವನ್ನು ಉಂಟುಮಾಡಿದೆ.

ಹೌದು ಗೆಳೆಯರೇ ಲೋ ಬಿಪಿ ಇಂದ ಲಘು ಹೃದಯಘಾತ ಸಮಸ್ಯೆ ಉಂಟಾಗಿ ಮಲಗಿದಂತಹ ಸ್ಪಂದನಾವರು ಮತ್ತೆ ಏಳಲೇ ಇಲ್ಲ ಎಂಬ ವರದಿ ದೊರಕಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಲ್ಲಾ ರೀತಿಯಾದಂತಹ ಪ್ರಯತ್ನಗಳನ್ನು ಮಾಡಿದರು ಸಹ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ನಾಗರಹಾವು ಸಿನಿಮಾ ಬಳಿಕ ಪುಟ್ಟಣ್ಣ ಕಣಗಾಲ್ ಮತ್ತೆಂದೂ ವಿಷ್ಣುವರ್ಧನ್ ಅವರಿಗೆ ಆಕ್ಷನ್ ಕಟ್ ಹೇಳದೇ ಇರಲು ಕಾರಣವೇನು ಗೊತ್ತಾ?

ಹೀಗೆ ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಮಡದಿಯ ಪ್ರಾಣಪಕ್ಷಿ ಹಾರಿ ಹೋದ ಸಂಗತಿ ಚಿನ್ನಾರಿ ಮುತ್ತನಿಗೆ ಆರಗಿಸಿಕೊಳ್ಳಲು ಆಗುತ್ತೋ ಇಲ್ವೋ ಗೊತ್ತಿಲ್ಲ.

ಕಳೆದ ಕೆಲವು ವರ್ಷಗಳ ಹಿಂದೆ ವಿಜಯ ರಾಘವೇಂದ್ರ ಅವರು ಬಿಗ್ ಬಾಸ್ ಮನೆಯಲ್ಲಿ (Kannada Bigg Boss Show) ಸ್ಪರ್ಧಿಯಾಗಿದ್ದಾಗ ಮನೆಯೊಳಗೆ ಸ್ಪಂದನಾ ಅವರ ಎಂಟ್ರಿ ಆದಾಗ ವಿಜಯ ರಾಘವೇಂದ್ರ ಮಾಡುತ್ತಿದ್ದಂತಹ ಕೆಲಸವನ್ನು ತೊರೆದು ಓಡಿಹೋಗಿ ಆಕೆಯನ್ನು ತಬ್ಬಿಕೊಂಡು ಕಣ್ಣೀರು ಹಾಕುತ್ತಾರೆ. ಅಲ್ಲದೆ ಕೆಲ ಸಮಯಗಳ ಕಾಲ ಅವರ ತೊಡೆಯ ಮೇಲೆ ಮಲಗಿ ತಮ್ಮ ಭಾವನೆಯನ್ನು ವ್ಯಕ್ತಪಡಿಸಿದರು.

Kannada Actor Vijay Raghavendra with wife Spandana
Image Source: News18 Kannada

ಕನ್ನಡ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನ

ಈ ಒಂದು ವಿಚಾರವೇ ಚಿನ್ನಾರಿ ಮುತ್ತ ತಮ್ಮ ಹೆಂಡತಿಯನ್ನು (Vijay Raghavendra Wife) ಎಷ್ಟರಮಟ್ಟಿಗೆ ಪ್ರೀತಿಸುತ್ತಿದ್ದರು ಎಂಬುದನ್ನು ವರ್ಣಿಸುತ್ತದೆ‌. ಅಲ್ಲದೆ ಸಾಕಷ್ಟು ಕಡೆಗಳಲ್ಲಿ ವಿಜಯ ರಾಘವೇಂದ್ರ ಹೋಗುತ್ತಿದ್ದಂತಹ ವೇದಿಕೆಯಲ್ಲೆಲ್ಲ ತಮ್ಮ ಹೆಂಡತಿಯ ಗುಣಗಾನವನ್ನು ಮಾಡಿದ್ದಾರೆ.

ಪೊಲೀಸರ ಮಗಳಾಗಿದ್ದ ಸ್ಪಂದನಾ ಬಿಕೆ ಶಿವರಂ ಅವರನ್ನು ಮಲ್ಲೇಶ್ವರಂನ ಕಾಫಿ ಡೇ ಒಂದರಲ್ಲಿ ಕಂಡಂತಹ ವಿಜಯ್ ರಾಘವೇಂದ್ರ ನಾಲ್ಕು ವರ್ಷಗಳ ಕಾಲ ಪ್ರೀತಿಸಿ ಮನೆಯವರೆಲ್ಲರ ಒಪ್ಪಿಗೆ ದೊರೆತ ನಂತರ ಅದ್ದೂರಿಯಾಗಿ ಮದುವೆಯಾದರು.

ಹೀಗೆ ಹಲವು ವರ್ಷಗಳಿಂದ ಬಹಳ ಅನ್ಯೋನ್ಯವಾಗಿ ಜೀವನ ನಡೆಸಿಕೊಂಡು ಇತರರಿಗೆ ಆದರ್ಶವಾಗುವಂತೆ ಬದುಕುತ್ತಿದ್ದ ಸ್ಪಂದನಾ ಹಾಗೂ ವಿಜಯ ರಾಘವೇಂದ್ರ ಅವರ ಬದುಕಿನಲ್ಲಿ ವಿಧಿ ವಿಕೃತಿಯನ್ನೇ ಮೆರೆದಿದೆ.

Vijay Raghavendra and His wife Spandanaಹೆಂಡತಿ ಎಂದರೆ ವಿಜಯ ರಾಘವೇಂದ್ರ ಅವರಿಗೆ ಜೀವದ ಗಂಟಾಗಿತ್ತು. ಈ ಜೋಡಿಗಳ ಮೇಲೆ ಅದ್ಯಾರದೋ ವಕ್ರದೃಷ್ಟಿ ಬಿತ್ತೋ ಗೊತ್ತಿಲ್ಲ ಅತಿ ಚಿಕ್ಕ ವಯಸ್ಸಿಗೆ ಸ್ಪಂದನಾ.. ವಿಜಯ ರಾಘವೇಂದ್ರ ಮತ್ತು ಕುಟುಂಬವನ್ನು ಒಬ್ಬಂಟಿಯನ್ನಾಗಿಸಿ ಇಹಲೋಕ ತ್ಯಜಿಸಿದ್ದಾರೆ.

ಅನಾರೋಗ್ಯದಿಂದ ಹಾಸಿಗೆ ಹಿಡಿದಿರೋ ಲೀಲಾವತಿ ಅಮ್ಮ ಕಣ್ಣೀರು ಹಾಕುತ್ತ ಕೊನೆ ಆಸೆ ಕೇಳಿದ್ದು ಏನು ಗೊತ್ತಾ?

ಟಿವಿ ಮಾಧ್ಯಮಗಳಲ್ಲಿ (TV Channels) ಸ್ಪಂದನಾ ಅವರ ಸಾವಿಗೆ ಆಕೆ ಮಾಡುತ್ತಿದ್ದಂತಹ ಡಯಟ್ ಹಾಗೂ ವರ್ಕೌಟ್ ಕಾರಣ ಎಂಬ ಸುದ್ದಿಯನ್ನು ಹರಿ ಬಿಡಲಾಗುತ್ತಿದೆ. ಹೌದು ಗೆಳೆಯರೇ ಕಳೆದ ಕೆಲ ತಿಂಗಳುಗಳಿಂದ ಅತಿಯಾದ ತೂಕದಿಂದ ಸಮಸ್ಯೆ ಅನುಭವಿಸುತ್ತಿದ್ದ ಸ್ಪಂದನಾ ಅವರು ಪ್ರತಿನಿತ್ಯ ಜಿಮ್ನಲ್ಲಿ ವರ್ಕೌಟ್ ಮಾಡಿ 16 ಕೆಜಿ ತೂಕವನ್ನು ಕಡಿಮೆಯಾಗಿಸಿಕೊಂಡಿದ್ದರಂತೆ.

ಅಲ್ಲದೆ ತಮ್ಮ ಊಟದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡು ಡಯಟ್ ಫಾಲೋ ಮಾಡುತ್ತಿದ್ದರು. ಹೀಗಾಗಿ ಇವರ ಅತಿಯಾದ ವರ್ಕೌಟ್ ಲೋ ಬಿಪಿ ಸಮಸ್ಯೆ ಎಲ್ಲದರಿಂದ ಹೃದಯಘಾತ ಉಂಟಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.

Spandana Vijay Raghavendra Death Reason

Related Stories