ಯಶ್ ಸಿನಿಮಾ ಮೂಲಕ ತಮನ್ನಾ ಮೊದಲ ಬಾರಿಗೆ ಲೀಡ್ ರೋಲ್, ಸ್ಯಾಂಡಲ್ ವುಡ್ ಎಂಟ್ರಿ

ಸರಿ ಸುಮಾರು 15 ವರ್ಷದಿಂದ ಸಿನಿಮಾ ರಂಗದಲ್ಲಿ ಹೆಸರು ಮಾಡಿರೋ ತಮನ್ನಾ, ಕನ್ನಡದ ಹೊಸ ಸಿನಿಮಾ ಮೂಲಕ ಮೊಟ್ಟ ಮೊದಲ ಬಾರಿಗೆ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಕಮರ್ಷಿಯಲ್ ಸಿನಿಮಾ ಸೇರಿದಂತೆ, ಲೇಡಿ ಓರಿಯೆಂಟೆಡ್, ಸ್ಪೆಷಲ್ ಸಾಂಗ್ಸ್ ,ಸಿನಿಮಾ ಮೂಲಕ ಸಿನಿ ರಸಿಕರನ್ನು ರಂಜಿಸಿರೋ ತಮನ್ನಾ ಈಗ ರಾಕಿ ಬಾಯ್ ಜೊತೆ ಸ್ಕ್ರೀನ್ ಹಂಚಿಕೊಳ್ಳಲಿದ್ದಾರೆ.

ಮುಂಬರುವ ಚಿತ್ರವೊಂದರಲ್ಲಿ ಯಶ್ ಅವರೊಂದಿಗೆ ನಾಯಕಿಯಾಗಿ ನಟಿಸಲು ತಮನ್ನಾ ಅವರನ್ನು ಸಂಪರ್ಕಿಸಲಾಗಿದೆ, ಇದು ಕೆಜಿಎಫ್ ನಂತರದ ಬಹುಭಾಷಾ ಚಿತ್ರವಾಗಿದೆ.

ಹೌದು, ರಾಕಿ ಬಾಯ್ ಯಶ್ ನಟನೆಯ ನೂತನ ಕನ್ನಡ ಸಿನಿಮಾದ ಮೂಲಕ ತಮನ್ನಾ ಮೊದಲ ಬಾರಿಗೆ ಸ್ಯಾಂಡಲ್ ವುಡ್ ಗೆ ಎಂಟ್ರಿ ನೀಡಲಿದ್ದಾರೆ. ಯಶ್ ನಾಯಕ ನಟನಾಗಿ ಅಭಿನಯಿಸುವ ಮಪ್ತಿ ಚಿತ್ರ ನಿರ್ದೇಶಕ ನರ್ತನ್ ನಿರ್ದೇಶಿಸಲಿದ್ದಾರೆ ಎಂಬ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ತಮನ್ನಾ ನಟನೆ ಬಹುತೇಕ ಖಚಿತವಾಗಿದೆ..

ಸದ್ಯ ರಾಕಿಂಗ್ ಸ್ಟಾರ್ ಯಶ್ ರ ಬಹು ನಿರೀಕ್ಷಿತ ಚಿತ್ರ ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣ ಬಾಕಿ ಇದ್ದು, ಲಾಕ್ ಡೌನ್ ನಂತರ ಅದು ಪೂರ್ಣಗೊಳ್ಳಲಿದೆ, ತದ ನಂತರ ಯಶ್ ಅಭಿನಯದ ನೂತನ ಚಿತ್ರದಲ್ಲಿ ತಮನ್ನಾ ಅಭಿನಯಿಸುವುದು ಬಹುತೇಕ ಖಚಿತವಾಗಿದೆ. ಚಿತ್ರತಂಡ ತಮನ್ನಾ ಅವರನ್ನು ನಾಯಾಗಿ ಪಾತ್ರಕ್ಕೆ ಪರಿಗಣಿಸಿದ್ದು, ತಮನ್ನಾ ನಟನೆ ಪಕ್ಕಾ ಆದ್ರೆ ಇದು ತಮನ್ನಾ ಅವರ ಕನ್ನಡದ ಮೋದಲ ಸಿನಿಮಾ

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ