The Kashmir Files : ‘ದಿ ಕಾಶ್ಮೀರ್ ಫೈಲ್ಸ್’ OTT ಬಿಡುಗಡೆ !
The Kashmir Files: ಕಂಟೆಂಟ್ ಇದ್ದರೆ ಹೆಸರಾಂತ ಹೀರೋಗಳೂ ಬೇಕಿಲ್ಲ ಎಂಬುದನ್ನು ಈಗಾಗಲೇ ಹಲವು ಸಿನಿಮಾಗಳು ಸಾಬೀತು ಮಾಡಿವೆ. ಈ ಪಟ್ಟಿಗೆ ಇತ್ತೀಚಿನ ಸೇರ್ಪಡೆ ದಿ ಕಾಶ್ಮೀರ್ ಫೈಲ್ಸ್.
ಕಂಟೆಂಟ್ ಇದ್ದರೆ ಹೆಸರಾಂತ ಹೀರೋಗಳೂ ಬೇಕಿಲ್ಲ ಎಂಬುದನ್ನು ಈಗಾಗಲೇ ಹಲವು ಸಿನಿಮಾಗಳು ಸಾಬೀತು ಮಾಡಿವೆ. ಈ ಪಟ್ಟಿಗೆ ಇತ್ತೀಚಿನ ಸೇರ್ಪಡೆ ದಿ ಕಾಶ್ಮೀರ್ ಫೈಲ್ಸ್. ಯಾವುದೇ ನಿರೀಕ್ಷೆ ಇಲ್ಲದೇ ತೆರೆಕಂಡ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಗಳಿಕೆ ಕಂಡಿದೆ. ಸುಮಾರು 25 ಕೋಟಿ ಬಂಡವಾಳದಿಂದ ತೆರೆಕಂಡ ಚಿತ್ರ ಇದುವರೆಗೆ 250 ಕೋಟಿ ಗಳಿಕೆ ಮಾಡಿ ದಾಖಲೆ ನಿರ್ಮಿಸಿದೆ. ಚಿತ್ರ ಸದ್ಯ ಡಿಜಿಟಲ್ ಬಿಡುಗಡೆಗೆ ಸಿದ್ಧವಾಗಿದೆ.
ಈ ಚಿತ್ರವನ್ನು ವಿವೇಕ್ ಅಗ್ನಿಹೋತ್ರಿ ನಿರ್ದೇಶಿಸಿದ್ದಾರೆ ಮತ್ತು ಕಾಶ್ಮೀರ ಪಂಡಿತರ ಹತ್ಯಾಕಾಂಡದ ಹಿನ್ನೆಲೆಯಲ್ಲಿ ಚಿತ್ರಿಸಲಾಗಿದೆ. ಮೇ 13 ರಿಂದ ಜಿ-5 ನಲ್ಲಿ ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರ ಪ್ರಸಾರವಾಗಲಿದೆ.
ಈ ಚಿತ್ರವನ್ನು ಅಭಿಷೇಕ್ ಅಗರ್ವಾಲ್ ನಿರ್ಮಿಸಿದ್ದಾರೆ ಮತ್ತು ಮಿಥುನ್ ಚಕ್ರವರ್ತಿ, ಅನುಪಮ್ ಖೇರ್, ದರ್ಶಿನ್ಕುಮಾರ್ ಮತ್ತು ಪಲ್ಲವಿ ಜೋಶಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ವಿವೇಕ್ ಅಗ್ನಿಹೋತ್ರಿ ಪ್ರಸ್ತುತ ಅದೇ ನಿರ್ಮಾಪಕರೊಂದಿಗೆ ‘ದಿ ಡೆಲ್ಲಿ ಫೈಲ್ಸ್’ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಸದ್ಯ ಪ್ರಿ-ಪ್ರೊಡಕ್ಷನ್ ಹಂತದಲ್ಲಿರುವ ಈ ಸಿನಿಮಾ ಈ ವರ್ಷದ ದ್ವಿತೀಯಾರ್ಧದಲ್ಲಿ ಚಿತ್ರೀಕರಣ ಆರಂಭಿಸಲಿದೆ.
The Kashmir Files OTT Release
The Kashmir Files Movie Trailer
Follow us On
Google News |