ನೆನಪಿದ್ದಾರಾ ನಟಿ ಮಂಜು ಮಾಲಿನಿ, ಪ್ರೇಕ್ಷಕರನ್ನು ಬಿದ್ದುಬಿದ್ದು ನಗುವಂತೆ ಮಾಡಿ ಕಣ್ಣೀರು ಹಾಕುತ್ತಲೇ ಕಣ್ಮರೆಯಾದ್ರ ಪಾಪ!

ನಟಿ ಮಂಜು ಮಾಲಿನಿ ಪ್ರಖ್ಯಾತ ಹಾಸ್ಯ ಸೆಲೆಬ್ರಿಟಿಯಾಗಿದ್ದರು ಜನಸಾಮಾನ್ಯರಂತೆ ಜೀವನದಲ್ಲಿ ಹತಾಶ, ದುಃಖ, ನೋವನ್ನು ಅನುಭವಿಸಿದಂತಹ ನಟಿ. ದೊಡ್ಡ ದೊಡ್ಡ ಸಿನಿಮಾಗಳ ಅವಕಾಶ ಹರಸಿ ಬಂದರೂ ಕೂಡ ಹೇಳಿಕೊಳ್ಳುವಷ್ಟು ಸಂಭಾವನೆ ದೊರಕುತ್ತಿರಲಿಲ್ಲವಂತೆ.

ಸ್ನೇಹಿತರೆ, ನಟನೆಗೆ ಆಕಾರ, ಬಾಹ್ಯ ರೂಪ, ಬಣ್ಣ ಯಾವುದು ಮುಖ್ಯವಲ್ಲ ನಮ್ಮೊಳಗೆ ಎಂತಹ ಪಾತ್ರ ನೀಡಿದರು ಅಭಿನಯಿಸುವಂತಹ ಅಗಾಧವಾದ ಕಲೆ ತುಂಬಿರಬೇಕು ಎಂಬುದನ್ನು ತೋರಿಸಿಕೊಟ್ಟಂತಹ ಹಲವಾರು ನಟ ನಟಿಯರಲ್ಲಿ ಮಂಜು ಮಾಲಿನಿ (Actress Manjumalini) ಕೂಡ ಒಬ್ಬರು.

ತಮ್ಮ ಅದ್ಭುತ ಹಾಸ್ಯ ಪ್ರಜ್ಞೆಯಿಂದ ಸಿನಿ ಪ್ರೇಕ್ಷಕರು ಬಿದ್ದು ಬಿದ್ದು ನಗುವಂತೆ ಮಾಡಿದ ಈ ನಟಿ ಸಿನಿಮಾ ರಂಗದಲ್ಲಿ (Kannada Film Industry) ಸಕ್ರಿಯರಾಗಿದ್ದ ಅಷ್ಟು ದಿನಗಳ ವರೆಗೂ ತಮ್ಮದೇ ಆದ ವಿಭಿನ್ನ ಶೈಲಿಯಲ್ಲಿ ಮನೋರಂಜನೆ ನೀಡುವಲ್ಲಿ ಯಶಸ್ವಿಯಾದರು.

ಹೀಗೆ ಕನ್ನಡದ ಜನಪ್ರಿಯ ಹಾಸ್ಯ ನಟಿಯಾಗಿ ಗುರುತಿಸಿಕೊಂಡಿರುವಾಗಲೇ ಸಿನಿಮಾ ರಂಗದಿಂದ ದೂರ ಉಳಿದ ಮಂಜು ಮಾಲಿನಿ ಏನಾದ್ರೂ? ಆ ಒಂದು ಕಾರಣದಿಂದ ಕಣ್ಣೀರಲ್ಲೇ ಕೈ ತೊಳೆದ್ರ? ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದು, ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ನೆನಪಿದ್ದಾರಾ ನಟಿ ಮಂಜು ಮಾಲಿನಿ, ಪ್ರೇಕ್ಷಕರನ್ನು ಬಿದ್ದುಬಿದ್ದು ನಗುವಂತೆ ಮಾಡಿ ಕಣ್ಣೀರು ಹಾಕುತ್ತಲೇ ಕಣ್ಮರೆಯಾದ್ರ ಪಾಪ! - Kannada News

ಅಪ್ಪು ಅಭಿನಯಿಸಬೇಕಿದ್ದ ಆ ಚಿತ್ರದಲ್ಲಿ ರಿಷಬ್ ಶೆಟ್ಟಿ ನಟಿಸಿ ಇತಿಹಾಸ ಸೃಷ್ಟಿಸಿ ಬಿಟ್ರು! ಅಷ್ಟಕ್ಕೂ ಆ ಸೂಪರ್ ಹಿಟ್ ಸಿನಿಮಾ ಯಾವುದು ಗೊತ್ತಾ?

ಹೌದು ಗೆಳೆಯರೇ, ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬ ಗಾದೆ ಮಾತಿನಂತೆ ಸಿನಿ ಸೆಲೆಬ್ರಿಟಿಗಳನ್ನು ಕೇವಲ ಸಿನಿಮಾಗಳಲ್ಲಿ ಟಿವಿ ಚಾನಲ್ಗಳಲ್ಲಿ ನೋಡುವಂತಹ ಜನಸಾಮಾನ್ಯರಿಗೆ ಅವರ ಬದುಕಿಗೇನು ಬಹಳ ಬಿಂದಾಸ್ ಆಗಿ ಇರುತ್ತಾರೆ. ಬೇಕಿದ್ದನ್ನೆಲ್ಲ ಕಂಡುಕೊಳ್ಳುವ ಸಾಮರ್ಥ್ಯ ಇರುತ್ತದೆ. ಒಂದು ಸಿನಿಮಾದಲ್ಲಿ ಅಭಿನಯಿಸಿದ್ರೆ ಕೋಟ್ಯಾಂತರ ರೂಪಾಯಿ ದುಡಿಯುತ್ತಾರೆ. ಎಂಬೆಲ್ಲ ಊಹೆ ಮಾಡಿಕೊಂಡಿರುತ್ತೇವೆ.

ಆದರೆ ಎಲ್ಲಾ ಕಲಾವಿದರ ಬದುಕು ಹೀಗಿರುವುದಿಲ್ಲ, ಅದರಲ್ಲೂ ಮಂಜು ಮಾಲಿನಿಯವರು ಪ್ರಖ್ಯಾತ ಹಾಸ್ಯ ಸೆಲೆಬ್ರಿಟಿಯಾಗಿದ್ದರು ಜನಸಾಮಾನ್ಯರಂತೆ ಜೀವನದಲ್ಲಿ ಹತಾಶ, ದುಃಖ, ನೋವನ್ನು ಅನುಭವಿಸಿದಂತಹ ನಟಿ.

Kannada Comedy Actress Manjumaliniಇನ್ನು ದೊಡ್ಡ ದೊಡ್ಡ ಸಿನಿಮಾಗಳ ಅವಕಾಶ ನಟಿ ಮಂಜು ಮಾಲಿನಿಯವರನ್ನು (Manjumalini) ಹರಸಿ ಬಂದರೂ ಕೂಡ ಹೇಳಿಕೊಳ್ಳುವಷ್ಟು ಸಂಭಾವನೆ ದೊರಕುತ್ತಿರಲಿಲ್ಲವಂತೆ. ಹೀಗೆ ಚಿಕ್ಕಂದಿನಿಂದಲೂ ಬಹಳ ಕಷ್ಟ ಅನುಭವಿಸಿ ಬೆಳೆದಂತಹ ಮಂಜು ಮಾಲಿನಿ ಅವರಿಗೆ ಮದುವೆಯಾದ ನಂತರ ಕಷ್ಟಗಳೆಂಬುದು ಕಳೆದು ಹೋಗುವುದಿಲ್ಲ ಆರ್ಥಿಕ ಸಮಸ್ಯೆ ಭಾದಿಸದೆ ಬಿಡುವುದಿಲ್ಲ.

ಸಮಂತಾ ಜೊತೆಗಿನ ಬೆಡ್ರೂಮ್ ಫೋಟೋ ಹಂಚಿಕೊಂಡ ವಿಜಯ್ ದೇವರಕೊಂಡ! ರಶ್ಮಿಕಾ ಆಯ್ತು ಇದೀಗ ಸಮಂತಾ ಸರದಿ ಎಂದ ಫ್ಯಾನ್ಸ್

ಹೌದು ಗೆಳೆಯರೇ ಕನ್ನಡದಲ್ಲಿ (Kannada Cinema) ಸುಮಾರು ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಹಾಸ್ಯ ನಟಿಯಾಗಿ ಕಾಣಿಸಿಕೊಂಡ ಮಂಜು ಮಾಲಿನಿ ತಮ್ಮ ದಪ್ಪನೆಯ ದೇಹ ಹಾಗೂ ವಿಭಿನ್ನವಾಗಿ ನಗುವ ಶೈಲಿ ನೀಡಿದಂತಹ ಪಾತ್ರವನ್ನು ಹಾಸ್ಯಸ್ಪದವಾಗಿ ಹೇಳುವ ರೀತಿಯಿಂದಲೇ ಜನರಿಗೆ ಮನೋರಂಜನೆಯ ಮಹದೂಟವನ್ನು ಬಡಿಸುವಲ್ಲಿ ಯಶಸ್ವಿಯಾದರು.

ಹೀಗೆ ಪುಟ್ಟಣ್ಣ ಕಣಗಾಲ್ ಅವರ ನಾಗರಹಾವು ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟ ಮಂಜು ಮಾಲಿನಿ ಅವರು ಅತಿ ಹೆಚ್ಚಾಗಿ ಕಾಶೀನಾಥ್ ಹಾಗೂ ಸಾಯಿ ಪ್ರಕಾಶ್ ಅವರ ನಿರ್ದೇಶನದಲ್ಲಿ ಮೂಡಿಬಂದಂತಹ ಸಿನಿಮಾಗಳಲ್ಲಿ ತಮ್ಮ ಗಮನಾರ್ಹ ಅಭಿನಯದ ಮೂಲಕ ಗುರುತಿಸಿಕೊಂಡಿದ್ದರು.

ಇಂತಹ ನಟಿ ತಾಳಿ ಕಟ್ಟುವ ಶುಭ ವೇಳೆ ಸಿನಿಮಾದಲ್ಲಿ ಕೊನೆಯದಾಗಿ ಅಭಿನಯಿಸಿ ಸಿನಿಮಾರಂಗಕ್ಕೆ ಗುಡ್ ಬಾಯ್ ಹೇಳಿಬಿಟ್ಟರು. ಹೀಗೆ ಮದುವೆಯಾದ ನಂತರ ಒಂದು ಹೊತ್ತಿನ ಊಟಕ್ಕೂ ಕಷ್ಟ ಪಟ್ಟಂತಹ ಮಂಜು ಮಾಲಿನಿಯವರಿಗೆ ಡಯಾಬಿಟಿಸ್ ಸಮಸ್ಯೆ ಕಾಡಲು ಆರಂಭಿಸುತ್ತದೆ. ಇನ್ನು ಮದುವೆಯಾಗಿ ಒಂದು ಮಗು ಜನಿಸಿದ ನಂತರ ಭಾರಿ ಕಷ್ಟ ಅನುಭವಿಸಿದ ಮಂಜು ಮಾಲಿನಿ 2006ರಲ್ಲಿ ಅತಿ ಆರೋಗ್ಯ ಸಮಸ್ಯೆಗೆ ತುತ್ತಾಗಿ ಇಹಲೋಕ ತ್ಯಜಿಸಿದರು.

Unknown Facts About Kannada Comedy Actress Manjumalini Real Life Story

Follow us On

FaceBook Google News

Unknown Facts About Kannada Comedy Actress Manjumalini Real Life Story