ಅಪ್ಪು ಅಭಿನಯಿಸಬೇಕಿದ್ದ ಆ ಚಿತ್ರದಲ್ಲಿ ರಿಷಬ್ ಶೆಟ್ಟಿ ನಟಿಸಿ ಇತಿಹಾಸ ಸೃಷ್ಟಿಸಿ ಬಿಟ್ರು! ಅಷ್ಟಕ್ಕೂ ಆ ಸೂಪರ್ ಹಿಟ್ ಸಿನಿಮಾ ಯಾವುದು ಗೊತ್ತಾ?
ರಿಷಬ್ ಶೆಟ್ಟಿಯವರು ಕಾಂತರಾ ಸಿನಿಮಾ ವನ್ನು ಪುನೀತ್ ರಾಜಕುಮಾರ್ ಅವರಿಗೆ ರೆಡಿ ಮಾಡಿರುತ್ತಾರೆ. ಪುನೀತ್ ರಾಜಕುಮಾರ್ ಅವರ ಬಾಯಲ್ಲಿ ಕರಾವಳಿಯ ಅಡು ಭಾಷೆ ಮಾತನಾಡಿಸಬೇಕೆಂಬುದು ರಿಷಬ್ ಶೆಟ್ಟಿಯವರ ಮುಖ್ಯ ಉದ್ದೇಶವಾಗಿರುತ್ತದೆ.
ಸ್ನೇಹಿತರೆ, ಕಳೆದ ಕೆಲವು ದಿನಗಳ ಹಿಂದಷ್ಟೇ ಕನ್ನಡ ಸಿನಿಮಾ ರಂಗದ (Kannada Film Industry) ಹೆಮ್ಮೆಯನ್ನು ಬಾಲಿವುಡ್, ಟಾಲಿವುಡ್ ಹಾಗೂ ಕಾಲಿವುಡ್ ಮಟ್ಟದವರೆಗೂ ಪಸರಿಸುವಂತೆ ಮಾಡಿದ ರಿಶಬ್ ಶೆಟ್ಟಿ (Actor Rishabh Shetty) ಅವರ ನಿರ್ದೇಶನ ಹಾಗೂ ನಟನೆಯಲ್ಲಿ ಮೂಡಿ ಬಂದ ಕಾಂತಾರ ಸಿನಿಮಾ (Kantara Kannada Cinema) ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಬಹುದೊಡ್ಡ ಮಟ್ಟದ ಹೆಸರನ್ನು ಸಂಪಾದಿಸಿತ್ತು.
ಹಲವು ತಿಂಗಳುಗಳ ಕಾಲ ಎಲ್ಲ ಥಿಯೇಟರ್ ಹಾಗೂ ಮಲ್ಟಿಪ್ಲೆಕ್ಸ್ಗಳಲ್ಲಿ ರಾರಾಜಿಸಿತು. ಆದರೆ ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅಭಿನಯಿಸುವ ಮುನ್ನ ನಟ ಪುನೀತ್ ರಾಜಕುಮಾರ್ ಅವರಿಗೆ ಕಾಂತಾರ ಚಿತ್ರದ ಆಫರ್ ಹೋಗಿತ್ತಂತೆ.
ಹಾಗಾದ್ರೆ ಅಪ್ಪು (Actor Puneeth Rajkumar) ಇಂತಹ ಒಳ್ಳೆ ಸಿನಿಮಾ ರಿಜೆಕ್ಟ್ ಮಾಡಿದ್ದು ಯಾಕೆ? ಅನಂತರ ರಿಷಬ್ ಶೆಟ್ಟಿ ಸಿನಿಮಾದಲ್ಲಿ ಅಭಿನಯಿಸಲು ಮನಸು ಮಾಡುವಂತೆ ಪ್ರೇರೇಪಿಸಿದವರು ಯಾರು ? ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಸಮಂತಾ ಜೊತೆಗಿನ ಬೆಡ್ರೂಮ್ ಫೋಟೋ ಹಂಚಿಕೊಂಡ ವಿಜಯ್ ದೇವರಕೊಂಡ! ರಶ್ಮಿಕಾ ಆಯ್ತು ಇದೀಗ ಸಮಂತಾ ಸರದಿ ಎಂದ ಫ್ಯಾನ್ಸ್
ಹೌದು ಗೆಳೆಯರೇ ರಿಷಬ್ ಶೆಟ್ಟಿಯವರು ಕಾಂತಾರ ಸಿನಿಮಾ ವನ್ನು ಪುನೀತ್ ರಾಜಕುಮಾರ್ (Appu) ಅವರಿಗೆ ರೆಡಿ ಮಾಡಿರುತ್ತಾರೆ. ಪುನೀತ್ ರಾಜಕುಮಾರ್ ಅವರ ಬಾಯಲ್ಲಿ ಕರಾವಳಿಯ (Karavali Kannada) ಅಡು ಭಾಷೆ ಮಾತನಾಡಿಸಬೇಕೆಂಬುದು ರಿಷಬ್ ಶೆಟ್ಟಿಯವರ ಮುಖ್ಯ ಉದ್ದೇಶವಾಗಿರುತ್ತದೆ.
ಈ ಕಾರಣದಿಂದ ಕಥೆ ಕಂಪ್ಲೀಟ್ ಆದ ಬಳಿಕ ಪುನೀತ್ ರಾಜಕುಮಾರ್ ಅವರನ್ನು ಭೇಟಿ ಮಾಡಿ ಕಥೆಯನ್ನು ವಿವರಿಸುತ್ತಾರೆ. ಸಂಪೂರ್ಣ ಕಥೆಯನ್ನು ಬಹಳ ಆನಂದಿಸುತ್ತ ಕೇಳಿದಂತಹ ಪುನೀತ್ ರಾಜಕುಮಾರ್ ಕಥೆ ಬಹಳ ಅದ್ಭುತವಾಗಿದೆ. ಆದರೆ ಈ ಸಿನಿಮಾಗೆ ಬೇಕಾಗುವಂತಹ ಹೆಚ್ಚಿನ ಸಮಯಗಳು ನನ್ನ ಬಳಿ ಇಲ್ಲ ನಾನು ಈಗಾಗಲೇ ಹಲವಾರು ಪ್ರಾಜೆಕ್ಟ್ಗಳನ್ನು ಒಪ್ಪಿಕೊಂಡು ಬಿಟ್ಟಿದ್ದೇನೆ ಇಲ್ಲವಾದರೆ ಖಂಡಿತ ನಟಿಸುತ್ತಿದ್ದೆ ಎನ್ನುವ ಮೂಲಕ ಸಿನಿಮಾವನ್ನು ಅಪ್ಪು ರಿಜೆಕ್ಟ್ ಮಾಡಿಬಿಟ್ಟರು.
ರವಿಚಂದ್ರನ್ ಮತ್ತು ಹಂಸಲೇಖ ಸ್ನೇಹದ ಮಧ್ಯೆ ಹುಳಿ ಹಿಂಡಿದ್ದು ಯಾರು? ಇಬ್ಬರ ನಡುವೆ ಬಿರುಕಿಗೆ ಕಾರಣವೇನು ಗೊತ್ತಾ?
ಹೀಗೆ ಸಿನಿಮಾಗೆ ಯಾವ ನಟನನ್ನು ಹಾಕಿಕೊಳ್ಳುವುದು ಎಂಬ ಚಿಂತೆಯಲ್ಲಿದ್ದಂತಹ ರಿಷಬ್ ಶೆಟ್ಟಿ ಅವರು ಡಾ. ಶಿವರಾಜಕುಮಾರ್ ಅವರ ಭಜರಂಗಿ ೨ ಸಿನಿಮಾ ಫ್ರೀ ರಿಲೀಸಿಂಗ್ ಇವೆಂಟ್ನಲ್ಲಿ ಭಾಗಿಯಾದಾಗ ಪುನೀತ್ ರಾಜಕುಮಾರ್ ಪ್ರಾಜೆಕ್ಟ್ ಏನಾಯ್ತು? ಎಲ್ಲಿವರೆಗೂ ಬಂತು ಎಂದು ವಿಚಾರಿಸುತ್ತಾರೆ.
ಆ ಸಂದರ್ಭದಲ್ಲಿ ರಿಷಬ್ ಶೆಟ್ಟಿ ಇನ್ನು ಆ ಪಾತ್ರಕ್ಕೆ ಸೂಕ್ತವಾಗುವ ನಟರನ್ನು ಹುಡುಕುತ್ತಿದ್ದೇನೆ ಎಂದಾಗ ಅಪ್ಪು ಅಂಗೈಯಲ್ಲಿ ಬೆಣ್ಣೆ ಹಿಡಿದುಕೊಂಡು ತುಪ್ಪಕ್ಕಾಗಿ ಹುಡುಕುತ್ತಿದಿರಲ್ರಿ ಅಷ್ಟು ಅದ್ಭುತವಾಗಿ ಸಿನಿಮಾ ಕಥೆಯನ್ನು ಬರೆದಿದ್ದೀರಾ ಎನ್ನುವಾಗ ಆ ಪಾತ್ರಕ್ಕೆ ಜೀವ ತುಂಬಲು ನಿಮ್ಮಿಂದ ಆಗೋದಿಲ್ವ? ನನಗಿಂತ ಅದ್ಭುತವಾಗಿಯೇ ಅಭಿನಯಿಸುತ್ತೀರಾ ಶಿವನ ಪಾತ್ರಕ್ಕೆ ನನಗಿಂತ ನೀವು ಸೂಕ್ತವಾಗುತ್ತೀರಾ ಎಂದು ನಟ ರಿಷಬ್ ಶೆಟ್ಟಿ ಅವರನ್ನು ಅಪ್ಪು ಹುರಿದುಂಬಿಸಿದರು. ಅಂದು ಸಿನಿಮಾಗೆ ತಾನೇ ನಾಯಕನಾಗಬೇಕು ಎಂದು ನಿರ್ಧರಿಸಿದ ರಿಷಬ್ ಶೆಟ್ಟಿ, ಇಂದು ಪ್ಯಾನ್ ಇಂಡಿಯಾ ಸ್ಟಾರ್ ನಟನಾಗಿ ಹೊರಹೊಮ್ಮಿದ್ದಾರೆ.
Kannada Actor Rishabh Shetty acted in that film where Puneeth Rajkumar was supposed to act