Vijay Devarakonda: ಮಲಯಾಳಂ ಸೂಪರ್ ಸ್ಟಾರ್ ಜೊತೆ ವಿಜಯ್ ದೇವರಕೊಂಡ ಮಲ್ಟಿಸ್ಟಾರರ್?

Vijay Devarakonda: ವಿಜಯ್ ದೇವರಕೊಂಡ ಮಲಯಾಳ ಸೂಪರ್ ಸ್ಟಾರ್ ಸಿನಿಮಾ ಮೋಹನ್ ಲಾಲ್ ಜೊತೆ ಮಲ್ಟಿಸ್ಟಾರರ್ ಮಾಡಲಿದ್ದಾರೆ

Vijay Devarakonda: ವಿಜಯ್ ದೇವರಕೊಂಡ ಮಲಯಾಳ ಸೂಪರ್ ಸ್ಟಾರ್ ಸಿನಿಮಾ ಮೋಹನ್ ಲಾಲ್ ಜೊತೆ ಮಲ್ಟಿಸ್ಟಾರರ್ ಸಿನಿಮಾ ಮಾಡಲಿದ್ದಾರೆ. ‘ವರ್ಲ್ಡ್‌ ಫೇಮಸ್‌ ಲವರ್‌’ ದಂತಹ ದೊಡ್ಡ ಫ್ಲಾಪ್ ನಂತರ ವಿಜಯ್‌ ಎರಡು ವರ್ಷಗಳ ಗ್ಯಾಪ್‌ ತೆಗೆದುಕೊಂಡು ‘ಲೈಗರ್‌’ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು.

ಭಾರೀ ನಿರೀಕ್ಷೆಗಳ ನಡುವೆ ಆಗಸ್ಟ್ 25 ರಂದು ಬಿಡುಗಡೆಯಾದ ಚಿತ್ರವು ಮೊದಲ ದಿನವೇ ನೆಗೆಟಿವ್ ಟಾಕ್ ಪಡೆದುಕೊಂಡಿತ್ತು. ತೆರೆಕಂಡ ಎರಡನೆ ದಿನದಿಂದ ಥಿಯೇಟರ್ ಬಾಡಿಗೆಗೂ ಸಾಕಾಗುವಷ್ಟು ಕಲೆಕ್ಷನ್ ಆಗಿಲ್ಲ. ಮತ್ತು ಬಿಡುಗಡೆಯಾದ ಒಂದು ವಾರದಲ್ಲಿ, ಚಿತ್ರವು ಎತ್ತಂಗಡಿಯಾಯಿತು. ಈ ಚಿತ್ರದ ಫಲಿತಾಂಶ ವಿಜಯ್‌ಗೆ ಭಾರೀ ನಿರಾಸೆ ತಂದಿದೆ. ಪ್ಯಾನ್ ಇಂಡಿಯಾ ಹೀರೋ ಆಗಿ ಗುರುತಿಸಿಕೊಳ್ಳುವ ಅವರ ಕನಸು ಕನಸಾಗಿಯೇ ಉಳಿಯಿತು. ಸದ್ಯ ಅವರು ಶಿವ ನಿರ್ವಾಣ ನಿರ್ದೇಶನದಲ್ಲಿ ‘ಖುಷಿ’ ಸಿನಿಮಾ ಮಾಡುತ್ತಿದ್ದಾರೆ.

ನಟಿ ಪೂರ್ಣಗೆ ಫಸ್ಟ್ ನೈಟ್ ದಿನವೇ ಶಾಕ್ ಕೊಟ್ಟ ಪತಿ

ಸಮಂತಾ (Actress Samantha) ನಾಯಕಿಯಾಗಿ ನಟಿಸುತ್ತಿರುವ ಈ ಚಿತ್ರವನ್ನು ಮುಂದಿನ ವರ್ಷದ ಮೊದಲಾರ್ಧದಲ್ಲಿ ಬಿಡುಗಡೆ ಮಾಡಲು ನಿರ್ಮಾಪಕರು ತಯಾರಿ ನಡೆಸುತ್ತಿದ್ದಾರೆ. ಈ ಸಿನಿಮಾದ ನಂತರ ವಿಜಯ್ ಮತ್ತು ಗೌತಮ್ ತಿನ್ನುರಿ ಸಿನಿಮಾ ಮಾಡಲಿದ್ದಾರೆ ಎಂಬುದು ಗೊತ್ತೇ ಇದೆ. ಈಗಾಗಲೇ ಕಥೆಯ ಚರ್ಚೆ ಮುಗಿದಿದೆ ಎಂದು ವರದಿಯಾಗಿದೆ.

ವಿಜಯ್ ದೇವರಕೊಂಡ

ರಶ್ಮಿಕಾ ಟ್ರೋಲ್ ಗೆ ಕನ್ನಡಿಗರು ಕಾರಣವಂತೆ, ಎತ್ತಿಗೆ ಜ್ವರ ಎಮ್ಮೆಗೆ ಬರೆ

ಈ ನಡುವೆ ವಿಜಯ್ ದೇವರಕೊಂಡ ಇತ್ತೀಚೆಗಷ್ಟೇ ಮತ್ತೊಂದು ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿರುವುದು ತಿಳಿದುಬಂದಿದೆ. ಟಾಲಿವುಡ್ ಮೂಲಗಳ ಪ್ರಕಾರ, ವಿಜಯ್ ದೇವರಕೊಂಡ ಮಲಯಾಳಂ ಚಿತ್ರವೊಂದಕ್ಕೆ ಒಪ್ಪಿಗೆ ನೀಡಿದ್ದಾರೆ.

ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಅಭಿನಯದ ‘ವೃಷಭ’ ಚಿತ್ರದಲ್ಲಿ ವಿಜಯ್ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ. ಈ ಚಿತ್ರದಲ್ಲಿ ವಿಜಯ್ ಮೋಹನ್ ಲಾಲ್ ಅವರ ಮಗನಾಗಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಅಧಿಕೃತ ಘೋಷಣೆ ಇನ್ನಷ್ಟೇ ಬರಬೇಕಿದೆ.

ಹಾಟ್ ಅವತಾರದಲ್ಲಿ ಮೇಘನಾ ರಾಜ್, ಏನಿದು ಹೊಸ ವರಸೆ

ನಂದಕಿಶೋರ್ ನಿರ್ದೇಶನದ ಈ ಸಿನಿಮಾ ಅಪ್ಪ-ಮಗನ ಕಥೆಯಾಗಿ ಮೂಡಿಬರಲಿದೆ. ಎವಿಎಸ್ ಸ್ಟುಡಿಯೋಸ್ ನಿರ್ಮಿಸಿರುವ ಈ ಚಿತ್ರ ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ತಯಾರಾಗಲಿದೆ. ಪ್ರೀತಿ ಮತ್ತು ಪ್ರತೀಕಾರದಂತಹ ಎರಡು ಭಾವನೆಗಳ ನಡುವಿನ ಸಂಘರ್ಷದ ಸುತ್ತ ಕಥೆ ಸುತ್ತುತ್ತದೆ. ಮುಂದಿನ ವರ್ಷ ಈ ಚಿತ್ರವನ್ನು ಸೆಟ್ಟೇರಲು ಚಿತ್ರತಂಡ ಸಿದ್ಧತೆ ನಡೆಸಿದೆ.

Vijay Devarakonda To Do A Multistarrer With Malayala Super Star Mohanlal