Cobra Trailer; ಡಿಫರೆಂಟ್ ಗೆಟಪ್ ನಲ್ಲಿ ವಿಕ್ರಮ್, ಸ್ಟನ್ನಿಂಗ್ ‘ಕೋಬ್ರಾ’ ಟ್ರೈಲರ್
Cobra Movie Trailer : ಚಿಯಾನ್ ವಿಕ್ರಮ್ (Actor Vikram) ಹೊಸ ಚಿತ್ರ 'ಕೋಬ್ರಾ' ಆಕ್ಷನ್ ಥ್ರಿಲ್ಲರ್ ಜಾನರ್‌ನಲ್ಲಿ ಮೂಡಿಬರುತ್ತಿರುವ ಚಿತ್ರ.
Cobra Movie Trailer : ಚಿಯಾನ್ ವಿಕ್ರಮ್ (Actor Vikram) ಹೊಸ ಚಿತ್ರ ‘ಕೋಬ್ರಾ’ ಆಕ್ಷನ್ ಥ್ರಿಲ್ಲರ್ ಜಾನರ್‌ನಲ್ಲಿ ಮೂಡಿಬರುತ್ತಿರುವ ಈ ಚಿತ್ರವನ್ನು ಅಜಯ್ ಜ್ಞಾನಮುತ್ತು ನಿರ್ದೇಶಿಸುತ್ತಿದ್ದಾರೆ. ಕೆಜಿಎಫ್ ಖ್ಯಾತಿಯ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ನಟಿಸುತ್ತಿದ್ದರೆ. ಪ್ರಮುಖ ಪಾತ್ರದಲ್ಲಿ ಮೃಣಾಲಿ ನಟಿಸುತ್ತಿದ್ದಾರೆ. ಈ ಚಿತ್ರದ ಟ್ರೇಲರ್ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ : ಜೊತೆ ಜೊತೆಯಲಿ ಆರ್ಯವರ್ಧನ್ ಪಾತ್ರವೇ ಇರೋಲ್ವಂತೆ !
ವಿಭಿನ್ನ ಗೆಟಪ್ ಗಳಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಬೇಕಾದ ಥ್ರಿಲ್ ನೀಡಲು ವಿಕ್ರಮ್ ಸಿದ್ಧವಾಗುತ್ತಿರುವುದು ಗೊತ್ತೇ ಇದೆ. ಎಆರ್ ರೆಹಮಾನ್ ನೀಡಿರುವ ಹಿನ್ನಲೆ ಸಂಗೀತ ಚಿತ್ರಪ್ರೇಮಿಗಳ ಮನಸೂರೆಗೊಳ್ಳುವುದು ಖಚಿತ ಎಂಬುದು ಟ್ರೇಲರ್ ನಿಂದ ಸ್ಪಷ್ಟವಾಗಿದೆ.
ಇದನ್ನೂ ಓದಿ : ಕೇರಳದಲ್ಲಿ ದಾಖಲೆ ಮುರಿದ RRR Movie, ಭರ್ಜರಿ TRP
ಕ್ರಿಕೆಟಿಗ ಇರ್ಫಾನ್ ಪಠಾಣ್, ರೋಷನ್ ಮ್ಯಾಥ್ಯೂ, ನಿರ್ದೇಶಕ ಕೆಎಸ್ ರವಿಕುಮಾರ್, ಮೃಣಾಲಿನಿ ರವಿ ಮತ್ತು ಮಿಯಾ ಜಾರ್ಜ್ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ.
ಇರ್ಫಾನ್ ಪಠಾಣ್ ಮೊದಲ ಬಾರಿಗೆ ಬೆಳ್ಳಿತೆರೆಯಲ್ಲಿ ಮಿಂಚಲಿದ್ದಾರೆ. ಸೆವೆನ್ ಸ್ಕ್ರೀನ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಎಸ್ ಎಸ್ ಲಲಿತ್ ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ಇದು ತೆಲುಗು, ತಮಿಳು ಮತ್ತು ಕನ್ನಡ ಭಾಷೆಗಳಲ್ಲಿ ಆಗಸ್ಟ್ 31 ರಂದು ಬಿಡುಗಡೆಯಾಗಲಿದೆ.
vikram stunning performanced Cobra Movie trailer is out